alex Certify ‘ಹಾಲಾಮತಿ ಹಬಿಬೋ’ಗೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸಮಂತಾ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹಾಲಾಮತಿ ಹಬಿಬೋ’ಗೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸಮಂತಾ…..!

ನಟಿ ಸಮಂತಾ ಪ್ರಭು ಒಬ್ಬ ಅದ್ಭುತ ನೃತ್ಯಗಾರ್ತಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದೇ ಮಾತಿಗೆ ಸಾಕ್ಷಿ ಎಂಬಂತೆ ಕೆಲವು ದಿನಗಳ ಹಿಂದಷ್ಟೇ ಪುಷ್ಪಾ ಸಿನಿಮಾದ ʼಊ ಅಂಟಾವಾʼ ಹಾಡಿಗೆ ಸಮಂತಾ ಹಾಕಿದ ಹೆಜ್ಜೆ ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಮಾಡಿತ್ತು. ತಮ್ಮ ಮಾದಕ ನೃತ್ಯದ ಮೂಲಕ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದರು.

ಇದೀಗ ಮತ್ತೊಮ್ಮೆ ನಟಿ ಸಮಂತಾ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ನೃತ್ಯದ ಝಲಕ್​ನ್ನು ಹರಿಬಿಟ್ಟಿದ್ದಾರೆ. ತಾಲಾಪತಿ ವಿಜಯ್​​​ ಅರೇಬಿಕ್​ ಕುಚ್ಚು ಹಾಡಾದ ಹಲಾಮತಿ ಹಬಿಬಿ ಹಾಡಿಗೆ ಸಮಂತಾ ಸಖತ್​ ಆಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡಿನಲ್ಲಿ ಮೂಲತಃ ದಳಪತಿ ವಿಜಯ್​ ಹಾಗೂ ಪೂಜಾ ಹೆಗ್ಡೆ ಹೆಜ್ಜೆ ಹಾಕಿದ್ದಾರೆ. ಇದು ತಮಿಳು ಭಾಷೆಯ ಇನ್ನೂ ರಿಲೀಸ್​ ಆಗದ ಬೀಸ್ಟ್​ ಸಿನಿಮಾದ ಹಾಡಾಗಿದೆ. ಈ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡ್ತಿದೆ ಅಂದರೆ ಚಿತ್ರತಂಡ ರಿಲೀಸ್​ ಲಿರಿಕಲ್​ ಸಾಂಗ್​ ಈಗಾಗಲೇ 45 ಮಿಲಿಯನ್ಸ್​ ವೀವ್ಸ್​​ ಹಾಗೂ 2.8 ಮಿಲಿಯನ್​ ಲೈಕ್ಸ್​ ಸಂಪಾದಿಸಿದೆ.

ಏರ್​ಪೋರ್ಟ್​ನಲ್ಲಿದ್ದ ಸಮಂತಾ ಕೂಡ ಇದೀಗ ಇದೇ ಹಾಡಿಗೆ ಹೆಜ್ಜೆ ಹಾಕಿದ್ದು ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ. ರಾತ್ರಿ ವಿಮಾನವೇರುವ ಮುನ್ನ ಅವರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ ಎಂಬುದು ಅವರ ಕ್ಯಾಪ್ಶನ್​ ಮೂಲಕ ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...