alex Certify ‘ಬೀಸ್ಟ್’ ದೃಶ್ಯ ಮರುಸೃಷ್ಟಿ ಮಾಡಿದ ಕಿಲಿ ಪೌಲ್; ತಾಂಜಾನಿಯಾ ಯುವಕನ ಕ್ರಿಯಾಶೀಲತೆಗೆ ವಿಜಯ್ ಅಭಿಮಾನಿಗಳ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬೀಸ್ಟ್’ ದೃಶ್ಯ ಮರುಸೃಷ್ಟಿ ಮಾಡಿದ ಕಿಲಿ ಪೌಲ್; ತಾಂಜಾನಿಯಾ ಯುವಕನ ಕ್ರಿಯಾಶೀಲತೆಗೆ ವಿಜಯ್ ಅಭಿಮಾನಿಗಳ ಮೆಚ್ಚುಗೆ

ʼಬೀಸ್ಟ್ʼ ಸಿನೆಮಾದಲ್ಲಿ ದಳಪತಿ ವಿಜಯ್ ಅವರ ನಟನೆಯ ದೃಶ್ಯವೊಂದನ್ನು ಕಿಲಿ ಪೌಲ್ ಅವರು ಮರುಸೃಷ್ಟಿ ಮಾಡಿದ್ದು, ಸಾಕಷ್ಟು ಸದ್ದು ಮಾಡಿ, ವಿಜಯ್ ಅಭಿಮಾನಿಗಳ ಮನಗೆದ್ದಿದೆ.

ತಾಂಜಾನಿಯಾದ ಹುಡುಗ ಕಿಲಿ ಇತ್ತೀಚೆಗೆ ಬಿಡುಗಡೆಯಾಗಿರುವ ದಳಪತಿ ವಿಜಯ್ ಅವರ ಬೀಸ್ಟ್ ಸಿನೆಮಾದ ದೃಶ್ಯವೊಂದನ್ನು ಅದೇ ರೀತಿಯಲ್ಲಿ ನಟಿಸಿ, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಪಸಮಯದಲ್ಲಿ ಅದು 10 ಲಕ್ಷ ವೀಕ್ಷಣೆಗಳನ್ನು ಕಾಣುವ ಮೂಲಕ ಭಾರೀ ಗಮನ ಸೆಳೆದಿದೆ.

ನೋಡುಗರನ್ನು ಬೆಚ್ಚಿಬೀಳಿಸುವಂತಿದೆ ಹೆಬ್ಬಾವಿನ ಈ ವಿಡಿಯೋ

ವೈರಲ್ ಆಗಿರುವ ಈ ವಿಡಿಯೋದಲ್ಲಿ ಕಿಲಿ ಪೌಲ್ ಬಿಳಿ ಶರ್ಟ್ ಮತ್ತು ಕಪ್ಪು ಟೆಕ್ಸುಡೋ ಧರಿಸಿ, ದಳಪತಿ ವಿಜಯ್ ಅವರ ಪಾತ್ರದಂತೆಯೇ ಕಾಣಿಸಿಕೊಂಡಿದ್ದಾರೆ. ನೀವು ವಿಜಯ್ ಫ್ಯಾನ್ ಆಗಿದ್ದರೆ, ಖಂಡಿತ ಈ ವಿಡಿಯೋ ಹುಡುಕಿ ನೋಡುತ್ತೀರಿ, ಅಷ್ಟು ಅದ್ಭುತವಾಗಿದೆ.

ಈ ವಿಡಿಯೋವನ್ನು “Meaner, Leaner, Stronger” ಎಂಬ ಅಡಿಬರೆಹದ ಜೊತೆಗೆ ಕಿಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಕಿಲಿಯ ಅಭಿನಯಕ್ಕೆ ನೆಟ್ಟಿಗರು ಬೋಲ್ಡ್ ಆಗಿದ್ದಾರೆ. ‘ಸ್ವಾಗ್ ಬ್ರದರ್’, ‘ಸೂಪರ್’ – ಹೀಗೆ ಹಲವು ರೀತಿಯಲ್ಲಿ ಮೆಚ್ಚುಗೆಯ ಕಮೆಂಟ್‌ಗಳನ್ನೂ ಹಾಕಿದ್ದಾರೆ.

ಏ. 12ರಂದು ಬಿಡುಗಡೆಯಾದ ಬೀಸ್ಟ್ ಸಿನೆಮಾದಲ್ಲಿ ಪೂಜಾ ಹೆಗ್ಡೆ, ವಿಜಯ್ ಗೆ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...