alex Certify ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಕೆನರಾ ಬ್ಯಾಂಕಿನಿಂದ ‘ಬಂಪರ್’ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಕೆನರಾ ಬ್ಯಾಂಕಿನಿಂದ ‘ಬಂಪರ್’ ಆಫರ್

ಸ್ವಂತ ಸೂರು ಹೊಂದಬೇಕೆಂಬ ಕನಸು ಎಲ್ಲರದ್ದೂ ಆಗಿರುತ್ತದೆ. ಆದರೆ ಇದು ಕೈಗೂಡುವುದು ಕೆಲವರಿಗೆ ಮಾತ್ರ. ದೇಶದ ಪ್ರತಿಯೊಬ್ಬರೂ ಸ್ವಂತ ಸೂರು ಹೊಂದಬೇಕೆಂಬುದು ಸಹ ಕೇಂದ್ರ ಸರ್ಕಾರದ ಆಶಯವಾಗಿದೆ. ಇದೀಗ ಕೆನರಾ ಬ್ಯಾಂಕ್ ಆಕರ್ಷಕ ಆಫರ್ ನೊಂದಿಗೆ ಗೃಹ ಸಾಲ ನೀಡಲು ಮುಂದಾಗಿದೆ.

ಸೀಮಿತ ಅವಧಿಗೆ ವಾರ್ಷಿಕ ಶೇ.6.65 ರ ಬಡ್ಡಿದರದಲ್ಲಿ ಗೃಹ ಸಾಲ ನೀಡುತ್ತಿದ್ದು, ಸಾಲ ಮಂಜೂರಾತಿ ಪ್ರಕ್ರಿಯೆಯು ಸರಳವಾಗಿರಲಿದೆ. ಇದನ್ನು ತ್ವರಿತಗತಿಯಲ್ಲಿ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.

ಫೋನ್‌ ನಲ್ಲಿ ʼಆಧಾರ್‌ʼ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ…? ಇಲ್ಲಿದೆ ಡಿಟೇಲ್ಸ್

ಇದರ ಜೊತೆಗೆ ಸಂಸ್ಕರಣಾ ಶುಲ್ಕ ಮತ್ತು ಡಾಕ್ಯುಮೆಂಟೇಶನ್ ಶುಲ್ಕವನ್ನೂ ಸಹ ಕೆನರಾ ಬ್ಯಾಂಕ್ ಮನ್ನಾ ಮಾಡಿದ್ದು, ಇದರಿಂದ ಸಾಲ ಪಡೆಯುವವರ ಹೊರೆ ಮತ್ತಷ್ಟು ಕಡಿಮೆಯಾಗಲಿದೆ. ಗೃಹ ಸಾಲ ಪಡೆಯಬಯಸುವವರು ಸ್ಥಳೀಯ ಶಾಖೆಗಳಿಗೆ ಭೇಟಿ ನೀಡುವಂತೆ ಕೋರಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...