alex Certify ಫೋನ್‌ ನಲ್ಲಿ ʼಆಧಾರ್‌ʼ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ…? ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೋನ್‌ ನಲ್ಲಿ ʼಆಧಾರ್‌ʼ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ…? ಇಲ್ಲಿದೆ ಡಿಟೇಲ್ಸ್

ಭಾರತವಾಸಿಗಳಿಗೆ ಅತ್ಯಂತ ಪ್ರಮುಖವಾದ ದಾಖಲೆಗಳಲ್ಲಿ ಒಂದು ಆಧಾರ್‌ ಕಾರ್ಡ್. ಯಾವಾಗ ಅಂದರೆ ಆವಾಗ ಬೇಕಾಗುವ ಆಧಾರ್‌ ಕಾರ್ಡ್‌ನ ದೈಹಿಕ ಪ್ರತಿಯನ್ನು ಸದಾ ನಮ್ಮೊಂದಿಗೆ ಕೊಂಡೊಯ್ಯದೇ ಇರಬಹುದು. ಇಂಥ ಸಂದರ್ಭಗಳಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಪೋರ್ಟಲ್‌ಗೆ ಭೇಟಿ ನೀಡಿ ನಿಮಗೆ ಬೇಕಾದಾಗ ಆಧಾರ್‌‌ನ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ನೇರ ಲಿಂಕ್‌ನಿಂದ ಆಧಾರ್‌ ಡೌನ್ಲೋಡ್ ಮಾಡುವುದು ಹೀಗೆ:

1. eaadhaar.uidai.gov.in ತಾಣಕ್ಕೆ ಭೇಟಿ ಕೊಟ್ಟು, ‘Download Electronic Copy of Your Aadhaar’ ಲಿಂಕ್‌ ಮೇಲೆ ಕ್ಲಿಕ್ ಮಾಡಿ.

2. ‘Aadhaar Number’ಅನ್ನು ನಿಮ್ಮ ಉಲ್ಲೇಖಕ್ಕಾಗಿ ಆಯ್ಕೆ ಮಾಡಿ ಮತ್ತು 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಪೇಜ್‌ನ ಬುಡದಲ್ಲಿರುವ ಬಾಕ್ಸ್‌ನಲ್ಲಿ ಲಗತ್ತಿಸಿ.

ಈ ರಾಶಿಯಲ್ಲಿ ಜನಿಸಿದವರಿಗಿದೆ ಇಂದು ಭೂಮಿ ಖರೀದಿ ಯೋಗ….!

3. ಮಾಸ್ಕ್‌ ಆಗಿರುವ ಆಧಾರ್‌ ಕಾರ್ಡ್‌ಗೆ ‘I want a Masked Aadhaar’ ಆಯ್ಕೆ ಮೇಲೆ ಕ್ಲಿಕ್ ಮಾಡಿ.

4. Send OTP ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಧಾರ್‌-ಜೋಡಣೆಯಾಗಿರುವ ನಿಮ್ಮ ಮೊಬೈಲ್ ಸಂಖ್ಯೆಗೆ ’ಓಟಿಪಿ’ ಬರಲಿದೆ.

5. ನಿಮ್ಮ ಓಟಿಪಿ ಎಂಟರ್‌ ಮಾಡಿ ‘Submit’ ಆಯ್ಕೆ ಒತ್ತಿ.

6. ಓಟಿಪಿಯನ್ನು ಯಶಸ್ವಿಯಾಗಿ ಅಥೆಂಟಿಕೇಟ್ ಮಾಡುತ್ತಲೇ, ’Download Aadhaar’ ಆಯ್ಕೆ ಆರಿಸುತ್ತಲೇ ನಿಮ್ಮ ಆಧಾರ್‌‌ನ ಪಿಡಿಎಫ್ ವರ್ಶನ್ ನಿಮಗೆ ಸಿಗಲಿದೆ.

ರೆಸ್ಟೋರೆಂಟ್ ಗಳಲ್ಲಿ ಹುಕ್ಕಾ ಮಾರಾಟಕ್ಕೆ ಅನುಮತಿ ನೀಡಿದ ಹೈಕೋರ್ಟ್: ಹರ್ಬಲ್ ಹುಕ್ಕಾ ಸೆಂಟರ್ ಆಗಲಿವೆ ದೆಹಲಿಯ 500 ರೆಸ್ಟೋರೆಂಟ್

7. ನಿಮ್ಮ ಜನ್ಮದಿನಾಂಕದ ಮೊದಲ ನಾಲ್ಕು ಅಂಕಿಗಳನ್ನು ಪಾಸ್‌ವರ್ಡ್ ರೂಪದಲ್ಲಿ ಎಂಟರ್‌ ಮಾಡುವ ಮೂಲಕ ನಿಮ್ಮ ಆಧಾರ್‌ ಕಾರ್ಡ್‌ನ ಅಕ್ಸೆಸ್ ಪಡೆಯಿರಿ.

8. ಭವಿಷ್ಯದ ಬಳಕೆಗಾಗಿ ನಿಮ್ಮ ಆಧಾರ್‌ನ ಪಿಡಿಎಫ್ ಪ್ರತಿಯನ್ನು ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಭದ್ರವಾಗಿ ಇಟ್ಟುಕೊಳ್ಳಿ. ಭದ್ರತಾ ಕಾರಣಗಳಿಂದಾಗಿ ನಿಮ್ಮ ಆಧಾರ್‌ ಕಾರ್ಡ್‌ನಲ್ಲಿರುವ ಗುರುತಿನ ಸಂಖ್ಯೆಯ ಮೊದಲ ಎಂಟು ಅಂಕಿಗಳನ್ನು ಮಾಸ್ಕ್ ಮಾಡಿರಲಾಗುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...