alex Certify ಸುಸ್ತು, ದಣಿವು ನಿವಾರಿಸುವ ʼಡ್ರೈ ಫ್ರೂಟ್ಸ್ʼ ಗಸಗಸೆ ಮಿಲ್ಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಸ್ತು, ದಣಿವು ನಿವಾರಿಸುವ ʼಡ್ರೈ ಫ್ರೂಟ್ಸ್ʼ ಗಸಗಸೆ ಮಿಲ್ಕ್

ಸುಸ್ತು, ಆಯಾಸ, ನಿಶ್ಯಕ್ತಿಯಿಂದ ನೀವೇನಾದ್ರೂ ಬಳಲುತ್ತಿದ್ದರೆ ಡ್ರೈ ಫ್ರೂಟ್ಸ್ ಮತ್ತು ಗಸಗಸೆ ಮಿಲ್ಕ್​ ಪ್ರಯತ್ನಿಸಿ. ಅದರಲ್ಲೂ ಡೇಟ್ಸ್ ಮತ್ತು ಗಸಗಸೆ ಸೇರಿಸಿ ತಯಾರಿಸಿದ ಎನರ್ಜಿ ಡ್ರಿಂಕ್ ನಿಮಗೆ ಹೊಸ ಚೈತನ್ಯ ನೀಡುತ್ತದೆ. ನೀವೇನಾದ್ರೂ ಪೋಷಕಾಂಶದ ಕೊರತೆ ಎದುರಿಸುತ್ತಿದ್ರೆ, ಈಗಷ್ಟೇ ಹುಷಾರು ತಪ್ಪಿ ಚೇತರಿಸಿಕೊಳ್ಳುತ್ತಿದ್ರೆ ಖಂಡಿತವಾಗಿಯೂ ಈ ಡ್ರೈ ಫ್ರೂಟ್ಸ್ ಗಸಗಸೆ ಮಿಲ್ಕ್ ಸೇವಿಸಬಹುದು.

ಹಾಗಾದ್ರೆ ಡ್ರೈ ಫ್ರೂಟ್ಸ್ ಗಸಗಸೆ ಮಿಲ್ಕ್ ಮಾಡೋದು ಹೇಗೆ ನೋಡೋಣ ಬನ್ನಿ.

ಒಂದು ದೊಡ್ಡ ಬಟ್ಟಲಿನಲ್ಲಿ ಒಂದು ಲೋಟದಷ್ಟು ಕಾಯಿಸಿ ತಣ್ಣಗಾದ ಹಾಲನ್ನು ತೆಗೆದುಕೊಳ್ಳಿ. ಈ ಹಾಲಿನ ಬಟ್ಟಲಿಗೆ 4 ಹೆಚ್ಚಿಟ್ಟುಕೊಂಡ ಡೇಟ್ಸ್, 6 ಬಾದಾಮಿ, 6 ಗೋಡಂಬಿ, 1 ಟೀ ಸ್ಪೂನ್​ನಷ್ಟು ಒಣ ದ್ರಾಕ್ಷಿ, 3 ಅಂಜೂರ, ಒಂದು ಸಣ್ಣ ಚಮಚದಷ್ಟು ಗಸಗಸೆ ಸೇರಿಸಿ 15 ನಿಮಿಷ ನೆನೆಸಿಡಬೇಕು.

ಬಳಿಕ ಒಂದು ಮಿಕ್ಸಿ ಜಾರಿಗೆ ಈ ಎಲ್ಲಾ ಮಿಶ್ರಣವನ್ನು ಹಾಕಿಕೊಳ್ಳಬೇಕು. ಜೊತೆಗೆ 3 ಪಿಸ್ತಾವನ್ನು ಸೇರಿಸಿ ಚೆನ್ನಾಗಿ ಮಿಕ್ಸಿ ಮಾಡಿಕೊಳ್ಳಬೇಕು. ಇಷ್ಟಾದ್ರೆ ಎನರ್ಜಿ ಡ್ರಿಂಕ್ ಕುಡಿಯಲು ರೆಡಿ.

ಅಗತ್ಯವಿದ್ದರೆ ಸ್ವಲ್ಪ ಸಾವಯವ ಬೆಲ್ಲದ ಪುಡಿ ಸೇರಿಸಬಹುದು. ಆದರೆ ಕರ್ಜೂರ, ದ್ರಾಕ್ಷಿ ಸಿಹಿ ಇರುವ ಕಾರಣ ಬೆಲ್ಲದ ಅಗತ್ಯ ಬೀಳುವುದಿಲ್ಲ.
ಈ ಎನರ್ಜಿ ಡ್ರಿಂಕ್ ವಾರದಲ್ಲಿ ಮೂರು ಬಾರಿ ಸೇವಿಸುತ್ತಾ ಬಂದರೆ ದೇಹದಲ್ಲಿ ನಿಶ್ಯಕ್ತಿ ಕಡಿಮೆಯಾಗುವುದಲ್ಲೇ ರಕ್ತವೂ ಹೆಚ್ಚುತ್ತದೆ. ಕಳೆಗುಂದಿದ ಮುಖವು ಚೈತನ್ಯದಿಂದ ನಳನಳಿಸುತ್ತದೆ. ಪ್ರತಿಯೊಬ್ಬರೂ ಕೂಡ ಈ ಎನ್ರಜಿ ಡ್ರಿಂಕ್ ಸೇವಿಸುವುದರಿಂದ ಉತ್ತಮ ಪರಿಣಾಮ ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...