alex Certify ಸುಲಭವಾಗಿ ತೂಕ ಇಳಿಸಲು ಸಂಜೆ 6 ಗಂಟೆ ನಂತರ ಇವುಗಳನ್ನು ಸೇವಿಸಲೇಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ತೂಕ ಇಳಿಸಲು ಸಂಜೆ 6 ಗಂಟೆ ನಂತರ ಇವುಗಳನ್ನು ಸೇವಿಸಲೇಬೇಡಿ

ತೂಕ ಕಡಿಮೆ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟರೂ ಎಷ್ಟೋ ಬಾರಿ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ. ಅಂತಹ ಸಮಯದಲ್ಲಿ ನಿಮ್ಮ ಡಯಟ್‌ ನಲ್ಲೇ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕು. ಸಂಜೆ 6 ಗಂಟೆಯ ನಂತರ ಈ ಕೆಳಗಿನ 3 ವಸ್ತುಗಳನ್ನು ಸೇವಿಸಬೇಡಿ. ಇದನ್ನು ಕಡ್ಡಾಯವಾಗಿ ಪಾಲಿಸಿದ್ರೆ ಸಹಜವಾಗಿಯೇ ನಿಮ್ಮ ತೂಕ ಕಡಿಮೆಯಾಗುತ್ತದೆ.

ಸಂಜೆ 6 ಗಂಟೆಯ ಮೇಲೆ ಟೀ, ಕಾಫಿ ಬೇಡ : ಕೆಲವರಿಗೆ ದಿನವೀಡಿ ಚಹಾ ಅಥವಾ ಕಾಫಿ ಕುಡಿದು ಅಭ್ಯಾಸ. ಇವುಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಕುಡಿದ್ರೆ ಆರೋಗ್ಯಕ್ಕೆ ಮಾರಕವಾಗುತ್ತದೆ. ಏಕೆಂದರೆ ಕೆಫೀನ್ ಜೊತೆಗೆ ಸಕ್ಕರೆಯ ಸೇವನೆಯು ತುಂಬಾ ಹೆಚ್ಚಾಗಿರುತ್ತದೆ. ಸಂಜೆ 6 ಗಂಟೆಯ ನಂತರ ಟೀ ಅಥವಾ ಕಾಫಿ ಕುಡಿಯಬೇಡಿ. ಯಾಕೆಂದರೆ ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ. ತೂಕ ಇಳಿಸಲು ಚೆನ್ನಾಗಿ ನಿದ್ದೆ ಮಾಡುವುದು ಅತ್ಯಂತ ಅವಶ್ಯಕ.

ಹಣ್ಣುಗಳ ಸೇವನೆ ಬೇಡ : ಹಣ್ಣುಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಸೂರ್ಯಾಸ್ತದ ನಂತರ ಅವುಗಳನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಹಾಳಾಗುತ್ತದೆ. ಇದಲ್ಲದೆ, ರಕ್ತದಲ್ಲಿನ ಸಕ್ಕರೆಯು ಹೆಚ್ಚಾಗಬಹುದು. ಆದ್ದರಿಂದ ಸಂಜೆ 6 ಗಂಟೆಯ ನಂತರ ಹಣ್ಣುಗಳನ್ನು ಸೇವಿಸದಿರಲು ಪ್ರಯತ್ನಿಸಿ.

ಅರ್ಧರಾತ್ರಿಯಲ್ಲಿ ತಿನ್ನುವ ಅಭ್ಯಾಸ ಬಿಡಿ : ರಾತ್ರಿ ಬೇಗ ಊಟ ಮಾಡಿ ಬೇಗ ಮಲಗುವುದು ಒಳ್ಳೆಯದು. ಆದ್ರೆ ಕೆಲವರು ತಡರಾತ್ರಿವರೆಗೂ ಸಿನೆಮಾ ನೋಡುತ್ತಲೋ ಅಥವಾ ಬೇರಿನ್ನೇನೋ ಕೆಲಸದಲ್ಲಿ ನಿರತರಾಗಿರುತ್ತಾರೆ. ತಡರಾತ್ರಿಯವರೆಗೆ ಎಚ್ಚರವಾಗಿರುವುದು ಹಸಿವಿನ ಭಾವನೆಯನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಏನನ್ನಾದರೂ ತಿನ್ನಬೇಕೆನಿಸುತ್ತದೆ. ಈ ಹೆಚ್ಚುವರಿ ಕ್ಯಾಲೊರಿಗಳು ನಮ್ಮ ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಸಂಗ್ರಹಗೊಳ್ಳುತ್ತವೆ, ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...