alex Certify ಸಿಪ್ಪೆಯಲ್ಲೂ ಇದೆ ಹಣ್ಣುಗಳಿಗಿಂತಲೂ ಹೆಚ್ಚಿನ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಪ್ಪೆಯಲ್ಲೂ ಇದೆ ಹಣ್ಣುಗಳಿಗಿಂತಲೂ ಹೆಚ್ಚಿನ ಪ್ರಯೋಜನ

ತರಕಾರಿ ಹಣ್ಣುಗಳ ಸಿಪ್ಪೆ ತೆಗೆದು ಎಸೆಯುವ ಮುನ್ನ ಕೊಂಚ ನಿಧಾನಿಸಿ. ಕೆಲವು ಸಿಪ್ಪೆಗಳಲ್ಲಿ ಹಣ್ಣುಗಳಿಗಿಂತಲೂ ಹೆಚ್ಚಿನ ಪ್ರಯೋಜನಗಳು ಲಭ್ಯವಾಗುತ್ತವೆ. ಅವುಗಳು ಯಾವುವೆಂದು ತಿಳಿಯೋಣ.

ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡರೆ ಬೇಕಾದಾಗ ಸೌಂದರ್ಯ ವರ್ಧಕವಾಗಿ ಬಳಸಬಹುದು. ಇದನ್ನು ಮುಖಕ್ಕೆ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು. ಇದರಿಂದ ಮುಖದ ಕಲೆ ದೂರವಾಗುವುದು ಮಾತ್ರವಲ್ಲ ಹೊಳಪನ್ನೂ ಪಡೆದುಕೊಳ್ಳುತ್ತದೆ.

ಆಲೂಗಡ್ಡೆ ಸಿಪ್ಪೆಯಲ್ಲಿ ಕಬ್ಬಿಣಾಂಶ ಮತ್ತು ಜೀವಸತ್ವಗಳು ಹೇರಳವಾಗಿವೆ. ಹಾಗಾಗಿ ಇದನ್ನು ಎಸೆಯುವ ಬದಲು ಆಹಾರದೊಂದಿಗೆ ಸೇವಿಸಿ. ತ್ವಚೆಯ ಹೊಳಪನ್ನೂ ಇವು ಹೆಚ್ಚಿಸುತ್ತವೆ. ಮಣ್ಣಲ್ಲಿ ಬೆಳೆಯುವ ಇವುಗಳನ್ನು ಸ್ವಚ್ಛವಾಗಿ ತೊಳೆದು ಬಳಸುವುದು ಬಹಳ ಮುಖ್ಯ.

ಸೇಬನ್ನು ಸಿಪ್ಪೆ ಸಮೇತ ತಿನ್ನುವುದು ಅಷ್ಟೇ ಒಳ್ಳೆಯದು. ಆಪಲ್ ನಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿದ್ದು ಇದರ ಸೇವನೆಯಿಂದ ನಿಮ್ಮ ದೇಹಕ್ಕೆ ಹಲವು ಲಾಭಗಳಿವೆ. ಇವುಗಳ ಸಂರಕ್ಷಣೆಗೆ ಕೆಮಿಕಲ್ ಸಿಂಪಡಿಸುವುದರಿಂದ ಸೇಬನ್ನು ಸ್ವಚ್ಛವಾಗಿ ತೊಳೆದು ಸೇವಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...