alex Certify ಸವಿಯಾದ ಚಾಕ್ಲೇಟ್ ಕೊಬ್ಬರಿ ಮಿಠಾಯಿ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸವಿಯಾದ ಚಾಕ್ಲೇಟ್ ಕೊಬ್ಬರಿ ಮಿಠಾಯಿ ಮಾಡುವ ವಿಧಾನ

ಬಾಯಲ್ಲಿ ನೀರೂರಿಸುವ ಚಾಕಲೇಟ್ ನಿಂದ ಯಾವುದೇ ರೆಸಿಪಿ ಮಾಡಿದರು ಸಖತ್ ಆಗಿರುತ್ತದೆ. ಅದರಲ್ಲೂ ಕೊಬ್ಬರಿ ಜೊತೆ ಚಾಕ್ಲೇಟ್ ಸವಿದರೆ ಅದರ ಟೇಸ್ಟೇ ಬೇರೆ. ಹಾಗಿದ್ದರೆ ಫಟಾಫಟ್ ಚಾಕ್ಲೇಟ್ ಕೊಬ್ಬರಿ ಮಿಠಾಯಿ ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

ತುರಿದ ತೆಂಗಿನಕಾಯಿ – 2 ಬಟ್ಟಲು
ಸಕ್ಕರೆ -1 ಬಟ್ಟಲು
ಕೋಕೋ ಪುಡಿ – 2 ಚಮಚ
ಹಾಲು – 2 ಚಮಚ
ಏಲಕ್ಕಿ ಪುಡಿ ಸ್ವಲ್ಪ

ಮಾಡುವ ವಿಧಾನ

ಮೊದಲು ತೆಂಗಿನಕಾಯಿ ತುರಿ, ಸಕ್ಕರೆ, ಹಾಲು, ಏಲಕ್ಕಿ ಪುಡಿ, ಕೋಕೋ ಪುಡಿ ಎಲ್ಲವನ್ನೂ ಒಂದು ಬಟ್ಟಲಿನಲ್ಲಿ ಹಾಕಿ 4 ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಆ ಮಿಶ್ರಣವನ್ನು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಬೇಕು. ಚೆನ್ನಾಗಿ ಬೆಂದ ನಂತರ ತಟ್ಟೆಗೆ ತುಪ್ಪ ಸವರಿ ಮಿಶ್ರಣ ಹರಡಿ ಸ್ವಲ್ಪ ಬಿಸಿ ಇರುವಾಗಲೇ ಚೌಕಾಕಾರವಾಗಿ ಕಟ್ ಮಾಡಬೇಕು. ನಂತರ ತಣ್ಣಗಾದ ಮೇಲೆ ಚಾಕ್ಲೇಟ್ ಕೊಬ್ಬರಿ ಮಿಠಾಯಿ ಸವಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...