alex Certify ಯುಗಾದಿ ಹಬ್ಬಕ್ಕೆ ಬೇಕೇ ಬೇಕು ‘ಬೇವು-ಬೆಲ್ಲ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಗಾದಿ ಹಬ್ಬಕ್ಕೆ ಬೇಕೇ ಬೇಕು ‘ಬೇವು-ಬೆಲ್ಲ’

ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಯುಗಾದಿ ಹಬ್ಬಕ್ಕೆ ಏನಿರಲಿ ಬಿಡಲಿ ಬೇವು-ಬೆಲ್ಲ ಹಾಗೂ ಹೋಳಿಗೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರಲೇಬೇಕು. ದೇವಸ್ಥಾನಕ್ಕೆ ಹೋಗಿ ಬೇವು-ಬೆಲ್ಲ ತಿಂದು ಹೋಳಿಗೆ ಊಟ ಮಾಡಿದ್ರೆ ಮಾತ್ರ ಹಬ್ಬ ಪೂರ್ಣವಾದಂತೆ ಎಂದು ಕೆಲವರು ನಂಬುತ್ತಾರೆ.

ಬೇವು-ಬೆಲ್ಲವನ್ನು ಬೇರೆ ಬೇರೆ ವಿಧಾನದಲ್ಲಿ ತಯಾರಿಸಲಾಗುತ್ತದೆ. ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ.

ಬೇವು-ಬೆಲ್ಲ ತಯಾರಿಸಲು ಬೇಕಾಗುವ ಪದಾರ್ಥ :

ಕಹಿ ಬೇವಿನ ಎಲೆ : ಐದರಿಂದ ಆರು

ಬೆಲ್ಲ : 2 ಚಮಚ

ಕೆಂಪು ಕಲ್ಲು ಸಕ್ಕರೆ : 3 ಚಮಚ

ಮಾವಿನ ತುರಿ : 1-2 ಚಮಚ

ಬಾದಾಮಿ : 15

ಗೋಡಂಬಿ  : 10

ಒಣ ದ್ರಾಕ್ಷಿ : 10

ಬೇವು-ಬೆಲ್ಲ ಮಾಡುವ ವಿಧಾನ :

ಮಿಕ್ಸಿ ಜಾರ್ ಗೆ ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿ ಹಾಗೂ ಬೆಲ್ಲವನ್ನು ಹಾಕಿ ಪುಡಿ ಮಾಡಿಕೊಳ್ಳಿ. ನಂತ್ರ ಈ ಮಿಶ್ರಣಕ್ಕೆ ಕಹಿ ಬೇವಿನ ಎಲೆಯನ್ನು ಹಾಕಿ ಮತ್ತೊಮ್ಮೆ ಮಿಕ್ಸಿ ಮಾಡಿ. ಮಿಕ್ಸಿ ಜಾರಿನಿಂದ ಮಿಶ್ರಣವನ್ನು ತೆಗೆದು ಇನ್ನೊಂದು ಪಾತ್ರೆಗೆ ಹಾಕಿ ಅದಕ್ಕೆ ಮಾವಿನ ತುರಿಯನ್ನು ಬೆರೆಸಿ ಸರಿಯಾಗಿ ಮಿಕ್ಸ್ ಮಾಡಿ. ಹಬ್ಬಕ್ಕೆ ಬೇವು-ಬೆಲ್ಲ ರೆಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...