alex Certify ಶ್ರಾವಣ ಮಾಸದಲ್ಲಿ ಮನೆಗೆ ಈ ವಸ್ತು ತಂದು ʼಅದೃಷ್ಟʼ ಬದಲಿಸಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರಾವಣ ಮಾಸದಲ್ಲಿ ಮನೆಗೆ ಈ ವಸ್ತು ತಂದು ʼಅದೃಷ್ಟʼ ಬದಲಿಸಿಕೊಳ್ಳಿ

ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಲಾಗುತ್ತದೆ ಅದ್ರಲ್ಲೂ ವಿಶೇಷವಾಗಿ ಸೋಮವಾರ ದೇವಸ್ಥಾನದಲ್ಲಿ ಶಿವನ ಪೂಜೆ, ಅಭಿಷೇಕ ಜೋರಾಗಿರುತ್ತದೆ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಿದರೆ ವಿಶೇಷ ಫಲ ಸಿಗುತ್ತದೆ ಎಂದು ಭಕ್ತರು ನಂಬಿದ್ದಾರೆ.

ಶ್ರಾವಣ ಮಾಸದಂದು ಶಿವನ ಪೂಜೆ ಜೊತೆಗೆ ಕೆಲ ವಸ್ತುಗಳನ್ನು ಮನೆಯಲ್ಲಿ ತಂದಿಡುವುದ್ರಿಂದ ಶುಭವಾಗುತ್ತದೆ. ಈಶ್ವರನಿಗೆ ಸಂಬಂಧಿಸಿದ ಪ್ರತಿಯೊಂದು ವಸ್ತುವೂ ವಿಶೇಷತೆಯನ್ನು ಹೊಂದಿದೆ. ಅವುಗಳಿಗೆ ಅದ್ರದೆ ಮಹತ್ವವಿದೆ. ಪವಿತ್ರ ವಸ್ತುಗಳನ್ನು ಮನೆಗೆ ತಂದಿಡುವುದ್ರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಜೀವನ ಮಂಗಳಕರವಾಗಿರುತ್ತದೆ.

ಶ್ರಾವಣ ಮಾಸದಲ್ಲಿ ಬೆಳ್ಳಿ ತ್ರಿಶೂಲವನ್ನು ತಂದಿಡುವುದ್ರಿಂದ ಅವಮಾನದಿಂದ ಮುಕ್ತಿ ಸಿಗುತ್ತದೆ.

ಶಿವನ ಕುತ್ತಿಗೆಯಲ್ಲಿರುವ ಹಾವು ಪ್ರಕೃತಿ ಪ್ರೇಮದ ಸಂಕೇತ. ಹಾವು ಶಂಕರನ ಆಭರಣವೂ ಹೌದು. ಶ್ರಾವಣ ಮಾಸದ ಸೋಮವಾರ ನಾಗ-ನಾಗಿಣಿಯ ಬೆಳ್ಳಿ ಮೂರ್ತಿಯನ್ನು ಮನೆಗೆ ತೆಗೆದುಕೊಂಡು ಬನ್ನಿ. ಪ್ರತಿ ದಿನ ಪೂಜೆ ಮಾಡಿ. ಶ್ರಾವಣ ಮಾಸದ ಕೊನೆ ದಿನ ಮೂರ್ತಿಯನ್ನು ಪವಿತ್ರ ನದಿಯಲ್ಲಿ ಸ್ನಾನ ಮಾಡಿಸಿ ನಂತ್ರ ದೇವಸ್ಥಾನಕ್ಕೆ ನೀಡಿ. ಹೀಗೆ ಮಾಡಿದ್ರೆ ಜಾತಕದಲ್ಲಿರುವ ಪಿತೃ ದೋಷ ಹಾಗೂ ಸರ್ಪ ದೋಷ ದೂರವಾಗುತ್ತದೆ.

ಶಿವನ ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಇರುತ್ತದೆ. ಕೈನಲ್ಲಿ ಕೂಡ ರುದ್ರಾಕ್ಷಿ ಇರುತ್ತದೆ. ಭಕ್ತರು ಕೂಡ ಸುಖ, ಸೌಭಾಗ್ಯ, ಸಮೃದ್ಧಿಗಾಗಿ ರುದ್ರಾಕ್ಷಿ ಮಾಲೆ ಧರಿಸುತ್ತಾರೆ. ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಮಾಲೆ ಧರಿಸಿದ್ರೆ ಸಮೃದ್ಧಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ.

ಡಮರು ಭಗವಂತ ಶಂಕರನ ಪವಿತ್ರ ವಾದ್ಯ. ಶ್ರಾವಣ ಮಾಸದಲ್ಲಿ ಡಮರನ್ನು ಮನೆಗೆ ತಂದು ಬಾರಿಸಿದ್ರೆ ಶುಭ ಫಲ ಪ್ರಾಪ್ತಿಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...