alex Certify ರುಚಿಕರವಾದ ಮಟನ್ ಸೂಪ್ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಕರವಾದ ಮಟನ್ ಸೂಪ್ ಮಾಡುವ ವಿಧಾನ

ಮಟನ್ ಎಂದರೆ ಮಾಂಸಹಾರ ಪ್ರಿಯರಿಗೆ ತುಂಬಾ ಇಷ್ಟ. ಈ ಮಟನ್ ಬಳಸಿ ರುಚಿಕರವಾದ ಸೂಪ್ ಮಾಡುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು:

500 ಗ್ರಾಂ ಮಟನ್ ಬೋನ್ಸ್, 4 ಕಪ್ – ನೀರು, 2 – ಲವಂಗ, 1 – ಪಲಾವ್ ಎಲೆ, 1 – ಚಕ್ಕೆ, 5 – ಬೆಳ್ಳುಳ್ಳಿ ಎಸಳು (ಚಿಕ್ಕದ್ದಾಗಿ ಕತ್ತರಿಸಿದ್ದು), ಈರುಳ್ಳಿ – 1 ಚಿಕ್ಕದ್ದಾಗಿ ಕತ್ತರಿಸಿದ್ದು, 1 – ದೊಡ್ಡ ಟೊಮೆಟೊ (ಚಿಕ್ಕದ್ದಾಗಿ ಕತ್ತರಿಸಿದ್ದು), 1 – ಆಲೂಗಡ್ಡೆ ಸಣ್ಣಗೆ ಕತ್ತರಿಸಿದ್ದು, ಕ್ಯಾರೆಟ್ – 1 ಚಿಕ್ಕದ್ದಾಗಿ ಕತ್ತರಿಸಿದ್ದು, ½ ಕಪ್ – ಕೊತ್ತಂಬರಿಸೊಪ್ಪು, ½ ಟೀ ಸ್ಪೂನ್ – ಕಾಳುಮೆಣಸಿನ ಪುಡಿ, ¼ ಟೀ ಸ್ಪೂನ್ – ಜೀರಿಗೆ ಪುಡಿ, 2 ಟೀ ಸ್ಪೂನ್ – ಎಣ್ಣೆ, ಉಪ್ಪು – ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:

ಮೊದಲಿಗೆ ಮಟನ್ ಅನ್ನು ಚೆನ್ನಾಗಿ ಕ್ಲೀನ್ ಮಾಡಿ. ಕುಕ್ಕರ್ ಗೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಅದಕ್ಕೆ ಚಕ್ಕೆ, ಪಲಾವ್ ಎಲೆ , ಲವಂಗ ಸೇರಿಸಿ. ನಂತರ ಇದಕ್ಕೆ ಬೆಳ್ಳುಳ್ಳಿ, ಸಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮೆಟೊ ಸೇರಿಸಿ ಫ್ರೈ ಮಾಡಿ ಉಪ್ಪು ಹಾಗೂ ಕಾಳುಮೆಣಸು, ಮಟನ್ ಸೇರಿಸಿ ಮಿಕ್ಸ್ ಮಾಡಿ.

ನಂತರ ಕೊತ್ತಂಬರಿಸೊಪ್ಪು, ಕ್ಯಾರೆಟ್, ಆಲೂಗಡ್ಡೆ, ನೀರು ಹಾಕಿ 6 ವಿಷಲ್ ಕೂಗಿಸಿಕೊಳ್ಳಿ. ನಂತರ ಗ್ಯಾಸ್ ಉರಿ ತಣ್ಣಗಾಗಿಸಿಕೊಂಡು 5 ನಿಮಿಷ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿದರೆ ರುಚಿಕರವಾದ ಮಟನ್ ಸೂಪ್ ಸವಿಯಲು ಸಿದ್ಧ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...