alex Certify ರಾತ್ರಿ ಲೈಟ್‌ ಹಾಕಿಕೊಂಡು ಮಲಗುತ್ತೀರಾ……? ನಿಮಗಿದು ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಲೈಟ್‌ ಹಾಕಿಕೊಂಡು ಮಲಗುತ್ತೀರಾ……? ನಿಮಗಿದು ತಿಳಿದಿರಲಿ

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ವಯಸ್ಕರಿಗೆ ದಿನಕ್ಕೆ ಕನಿಷ್ಠ 8 ಗಂಟೆಗಳ ನಿದ್ದೆ ಬೇಕು ಎಂದು ತಜ್ಞರೇ ಹೇಳುತ್ತಾರೆ. ನಿದ್ರೆ ನಮಗೆ ಆಯಾಸದಿಂದ ಉಪಶಮನ ನೀಡುವ ಚಿಕಿತ್ಸೆಯಂತೆ. ಶಾಂತ ನಿದ್ರೆಯನ್ನು ಪಡೆದಾಗ ಮಾತ್ರ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಸ್ನಾಯುಗಳು ಚೇತರಿಸಿಕೊಳ್ಳಲು ಪ್ರಾರಂಭಿಸುತ್ತವೆ ಮತ್ತು ಮನಸ್ಥಿತಿ ಕೂಡ ಉತ್ತಮವಾಗಿರುತ್ತದೆ.

ಚೆನ್ನಾಗಿ ನಿದ್ದೆ ಮಾಡುವುದರಿಂದ ಅನೇಕ ರೋಗಗಳ ಅಪಾಯವನ್ನು ಸಹ ತಪ್ಪಿಸಬಹುದು. ಆದರೆ ನಿದ್ದೆ ಮಾಡುವಾಗಲೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ನಾವು ಮಾಡುವ ಸಣ್ಣ ಸಣ್ಣ ತಪ್ಪುಗಳು ದೇಹಕ್ಕೆ ಹಾನಿ ಮಾಡುತ್ತವೆ.

ಮಲಗುವಾಗ ಈ ತಪ್ಪನ್ನು ಎಂದಿಗೂ ಮಾಡಬೇಡಿ

ಸಾಮಾನ್ಯವಾಗಿ ರಾತ್ರಿ ಮಲಗುವಾಗ ರೂಮಿನ ಲೈಟ್ ಆಫ್ ಮಾಡುವುದರಿಂದ ನಮಗೆ ನೆಮ್ಮದಿಯ ನಿದ್ದೆ ಬರುತ್ತದೆ. ಆದರೆ ಕೆಲವರು ಇದನ್ನು ಮಾಡುವುದಿಲ್ಲ, ಲೈಟ್ ಆನ್ ಮಾಡಿ ಮಲಗಲು ಬಯಸುತ್ತಾರೆ. ಕೆಲವೊಮ್ಮೆ ಸೋಮಾರಿತನದಿಂದ ಲೈಟ್‌ ಸ್ವಿಚ್ ಆಫ್ ಮಾಡುವುದಿಲ್ಲ. ದೀಪವನ್ನು ಹಚ್ಚಿ ಮಲಗುವುದು ಆರೋಗ್ಯಕ್ಕೆ ಹಾನಿಕರ ಮತ್ತು ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಖಿನ್ನತೆಆರೋಗ್ಯವಂತರಾಗಿ ಬದುಕಲು ಬೆಳಕು ಎಷ್ಟು ಅಗತ್ಯವೋ ಕತ್ತಲೆಯೂ ಅಷ್ಟೇ ಮುಖ್ಯ. ಸ್ವೀಡನ್ ಮತ್ತು ನಾರ್ವೆಯಂತಹ ಧ್ರುವೀಯ ದೇಶಗಳಲ್ಲಿ ಬೇಸಿಗೆಯಲ್ಲಿ ಸುಮಾರು 6 ತಿಂಗಳವರೆಗೆ ಸೂರ್ಯ ಮುಳುಗುವುದಿಲ್ಲ. ಇದರಿಂದಾಗಿ ಅನೇಕ ಜನರು ಖಿನ್ನತೆಗೆ ಒಳಗಾಗುತ್ತಾರೆ. ಮತ್ತೊಂದೆಡೆ ಭಾರತದಂತಹ ದೇಶಗಳಲ್ಲಿ ರಾತ್ರಿ ಬೆಳಕಿನಲ್ಲಿ ಮಲಗಬೇಕೆಂದರೆ ಎಲೆಕ್ಟ್ರಾನಿಕ್ ದೀಪಗಳನ್ನು ಬಳಸಬೇಕು. ಇವುಗಳಿಂದ ಹೊರಹೊಮ್ಮುವ ನೀಲಿ ಬೆಳಕು ನಮ್ಮನ್ನು ಕೆರಳಿಸಬಹುದು. ಆದ್ದರಿಂದ ಸಾಧ್ಯವಾದಷ್ಟು ಕತ್ತಲಿನಲ್ಲೇ ಮಲಗಿಕೊಳ್ಳಿ.

ಅನೇಕ ರೋಗಗಳ ಅಪಾಯನಿರಂತರವಾಗಿ ಲೈಟ್ ಹಾಕಿಕೊಂಡು ಮಲಗಿದರೆ ಶಾಂತಿಯುತ ನಿದ್ರೆಗೆ ಅಡವಣೆಯಾಗುತ್ತದೆ. ಇದು ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ, ಹೃದ್ರೋಗ ಇತ್ಯಾದಿ ಅನೇಕ ರೋಗಗಳ ಅಪಾಯವನ್ನು ಉಂಟುಮಾಡಬಹುದು. ಅದಕ್ಕಾಗಿಯೇ ದೀಪಗಳನ್ನು ಹಚ್ಚಿ ಮಲಗುವ ತಪ್ಪನ್ನು ಎಂದಿಗೂ ಮಾಡಬೇಡಿ.

ಆಯಾಸ – ಸಾಮಾನ್ಯವಾಗಿ ರಾತ್ರಿ ಲೈಟ್‌ ಹಾಕಿಕೊಂಡು ಮಲಗುವುದರಿಂದ ಸಾಕಷ್ಟು ನಿದ್ರೆ ಬರುವುದಿಲ್ಲ, ಅದರ ಪರಿಣಾಮವು ಮರುದಿನ ಕಂಡುಬರುತ್ತದೆ. ನಿದ್ದೆ ಸರಿಯಾಗಿ ಆಗದೇ ಇದ್ದಾಗ ಕೆಲಸ ಮಾಡಲು ಕಷ್ಟವಾಗುತ್ತದೆ. ಆಯಾಸ ಮತ್ತು ಆಲಸ್ಯದಿಂದ ನಾವು ಬಳಲುತ್ತೇವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...