alex Certify ಮೂರರಿಂದ ಎಂಟು ವರ್ಷದ ಮಕ್ಕಳ ʼಆಹಾರʼ ಹೀಗಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರರಿಂದ ಎಂಟು ವರ್ಷದ ಮಕ್ಕಳ ʼಆಹಾರʼ ಹೀಗಿರಲಿ

ಮೂರರಿಂದ ಎಂಟು ವರ್ಷದ ಮಕ್ಕಳಿಗೆ ಸರಿಯಾದ ಆಹಾರ ನೀಡಬೇಕಾಗುತ್ತದೆ. ತರಕಾರಿ, ಹಣ್ಣು, ಧಾನ್ಯ, ಡೈರಿ ಉತ್ಪನ್ನ ಸೇರಿದಂತೆ ಪೌಷ್ಠಿಕ ಆಹಾರಗಳನ್ನು ಮಕ್ಕಳಿಗೆ ನೀಡುವುದು ಪಾಲಕರ ಜವಾಬ್ದಾರಿ.

ಈ ವಯಸ್ಸಿನಲ್ಲಿ ಮಕ್ಕಳು ಆರೋಗ್ಯಕರ ಆಹಾರದಿಂದ ದೂರವಿರ್ತಾರೆ. ಜಂಕ್ ಫುಡ್ ಗಳಿಂದ ಮಕ್ಕಳನ್ನು ದೂರವಿಟ್ಟು ಈ ವಯಸ್ಸಿನಲ್ಲಿ ಮಕ್ಕಳಿಗೆ ಅವಶ್ಯವಾಗಿ ಕೆಳಗಿನ ಆಹಾರಗಳನ್ನು ನೀಡಬೇಕಾಗುತ್ತದೆ.

ಹಣ್ಣುಗಳು ಹಾಗೂ ತರಕಾರಿಗಳು ಮಕ್ಕಳಿಗೆ ಶಕ್ತಿ ನೀಡುತ್ತವೆ. ಎಲ್ಲ ಪೋಷಕಾಂಶಗಳನ್ನು ಹಣ್ಣು, ತರಕಾರಿ ನೀಡುತ್ತದೆ. ಹಾಗಾಗಿ ಮಕ್ಕಳ ಡಯಟ್ ನಲ್ಲಿ ಹಣ್ಣು, ತರಕಾರಿ ಇರುವಂತೆ ನೋಡಿಕೊಳ್ಳಿ. ಹಣ್ಣು, ತರಕಾರಿ ನೀಡುವ ಮೊದಲು ಸ್ವಚ್ಛವಾಗಿ ತೊಳೆಯಿರಿ. ಅದ್ರ ಮೇಲಿರುವ ರಾಸಾಯನಿಕಗಳು ಮಕ್ಕಳ ಹೊಟ್ಟೆ ಸೇರದಂತೆ ನೋಡಿಕೊಳ್ಳಿ.

ಮಕ್ಕಳಿಗೆ ಎಲ್ಲ ರೀತಿಯ ಧಾನ್ಯಗಳನ್ನು ನೀಡಲು ಪ್ರಯತ್ನಿಸಿ. ಕಂದು ಬ್ರೆಡ್, ಕಾರ್ನ್, ಅಕ್ಕಿ, ಓಟ್ಸ್, ಬಾರ್ಲಿ ಹೀಗೆ ಪ್ರತಿಯೊಂದು ಮಕ್ಕಳಿಗೆ ಪ್ರಯೋಜನಕಾರಿ. ಇವು ಮಕ್ಕಳಿಗೆ ಶಕ್ತಿ ನೀಡುವ ಜೊತೆಗೆ ಅವ್ರ ಬೆಳವಣಿಗೆಗೆ ನೆರವಾಗುತ್ತವೆ. ಮಕ್ಕಳ ಹೊಟ್ಟೆ ತುಂಬಿಸುವುದ್ರಿಂದ ಅವ್ರು ಆರೋಗ್ಯವಾಗಿ ಆಟವಾಡಿಕೊಂಡಿರುತ್ತಾರೆ.

ಎಲ್ಲಾ ಡೈರಿ ಉತ್ಪನ್ನಗಳಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಹಾಲು, ಚೀಸ್ ಮತ್ತು ಮೊಸರು ಸೇರಿದಂತೆ ಡೈರಿ ಉತ್ಪನ್ನಗಳು ಮಕ್ಕಳಿಗೆ ಹೆಚ್ಚು ಪ್ರಯೋಜನಕಾರಿ.

ಆರೋಗ್ಯಕರ ಪಾನೀಯಗಳು ಮಕ್ಕಳಿಗೆ ಅಗತ್ಯ. ಮೊದಲು ಮಕ್ಕಳಿಗೆ ಹೆಚ್ಚು ಹೆಚ್ಚು ನೀರು ನೀಡಿ. ತಾಜಾ ಹಣ್ಣಿನ ರಸ, ಎಳ ನೀರು ಅಥವಾ ಹಾಲಿನೊಂದಿಗೆ ತಯಾರಿಸಿದ ಪಾನೀಯಗಳನ್ನು ಅವ್ರಿಗೆ ನೀಡಿ. ತಂಪು ಪಾನೀಯ, ಫಾಸ್ಟ್ ಫುಡ್, ಪಿಜ್ಜಾ ಮತ್ತು ಬರ್ಗರ್‌ಗಳಿಂದ ಮಗುವನ್ನು ಸಾಧ್ಯವಾದಷ್ಟು ದೂರವಿಡಿ.

ಮಗುವಿಗೆ ಆರೋಗ್ಯಕರ ಆಹಾರವನ್ನು ರೂಢಿ ಮಾಡಿ. ಹೊರಗಿನ ತಿಂಡಿ ಬದಲು ಮಗುವಿಗೆ ಮನೆಯಲ್ಲೇ ಮಾಡಿದ ಆಹಾರವನ್ನು ನೀಡಿ. ಫ್ರೆಂಚ್ ಫ್ರೈಸ್, ಫ್ರೂಟ್ ಕಸ್ಟರ್ಡ್, ಐಸ್ ಕ್ರೀಂಗಳನ್ನು ಮನೆಯಲ್ಲಿಯೇ ಮಾಡಿಕೊಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...