alex Certify ಮುಖದ ಮೇಲಿನ ಅನವಶ್ಯಕ ಕೂದಲಿಗೆ ಹೀಗೆ ಹೇಳಿ ʼಗುಡ್ ಬೈʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಮೇಲಿನ ಅನವಶ್ಯಕ ಕೂದಲಿಗೆ ಹೀಗೆ ಹೇಳಿ ʼಗುಡ್ ಬೈʼ

ಮುಖದ ಮೇಲಿರುವ ಅನವಶ್ಯಕ ಕೂದಲು ಸೌಂದರ್ಯವನ್ನು ಹಾಳು ಮಾಡುತ್ತದೆ. ಅನೇಕರು ಬ್ಯೂಟಿ ಪಾರ್ಲರ್ ಗೆ ಹೋಗಿ ಕೂದಲು ತೆಗೆಸಿಕೊಂಡು ಬರ್ತಾರೆ. ವ್ಯಾಕ್ಸಿಂಗ್ ಅಸಹನೀಯ ನೋವು ನೀಡುತ್ತದೆ. ಕೆಲವರ ಚರ್ಮದ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಮನೆಯಲ್ಲಿಯೇ ಸುಲಭವಾಗಿ ಫೇಸ್ಪ್ಯಾಕ್ ಹಾಕಿ ನೋವಿಲ್ಲದೆ ಈ ಕೂದಲನ್ನು ತೆಗೆಯಬಹುದು.

ಫೇಸ್ ಪ್ಯಾಕ್ ಹಚ್ಚುವ  ಮೊದಲು ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ. ಈ ಪೇಸ್ಟ್ ಗಳನ್ನು ಹಚ್ಚುವಾಗ ಯಾವುದೇ ಅಲರ್ಜಿ ಅಥವಾ ತುರಿಕೆ ಕಂಡುಬಂದಲ್ಲಿ  ತಕ್ಷಣ ನೀರಿನಿಂದ ಮುಖವನ್ನು ತೊಳೆಯಿರಿ.

ಕಿತ್ತಳೆ ಸಿಪ್ಪೆ ಪುಡಿ ಸ್ಕ್ರಬ್

ಶ್ರೀಗಂಧದ ಪುಡಿ – 1 ಚಮಚ, ಕಿತ್ತಳೆ ಸಿಪ್ಪೆ ಪುಡಿ – 1 ಚಮಚ, ರೋಸ್ ವಾಟರ್ – 1 ಚಮಚ, ನಿಂಬೆ ರಸ – 1 ಚಮಚ ಇವೆಲ್ಲವನ್ನೂ ಒಟ್ಟಿಗೆ ಬೆರೆಸಿ ಪೇಸ್ಟ್ ಮಾಡಿ. ನಂತರ ಅದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.  15 ನಿಮಿಷಗಳ ನಂತರ ನಿಧಾನವಾಗಿ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಕಾಮಕಸ್ತೂರಿ ಬೀಜಗಳನ್ನು ಬಳಸಿ ಸಹ ಫೇಸ್ ಪ್ಯಾಕ್ ತಯಾರಿಸಬಹುದು.

ಅಗತ್ಯವಿರುವ ಸಾಮಗ್ರಿಗಳು, ಕೆನೆರಹಿತ ಹಾಲು  – 2 ಚಮಚ, ಕಾಮಕಸ್ತೂರಿ  ಬೀಜಗಳು – 1 ಚಮಚ, ಹನಿ ಮತ್ತು ಓಟ್ಸ್ ಪೌಡರ್ – 1 ಚಮಚ.

ಮೊದಲು ಕಾಮಕಸ್ತೂರಿ  ಬೀಜಗಳನ್ನು ಹಾಲಿನಲ್ಲಿ 10 ನಿಮಿಷಗಳ ಕಾಲ ನೆನೆಸಿ. ಕಾಮಕಸ್ತೂರಿ  ಬೀಜಗಳು  ಮೃದುವಾಗುತ್ತವೆ. ನಂತರ ಇದಕ್ಕೆ ಓಟ್ಸ್ ಪುಡಿ ಮತ್ತು ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಮುಖದ ಮೇಲೆ ಹಚ್ಚಿ ಒಣಗಲು ಬಿಡಿ. ಒಣಗಿದ ನಂತರ ಅದನ್ನು ಕೈಯಿಂದ ನಿಧಾನವಾಗಿ ಮಸಾಜ್ ಮಾಡಿ ನಂತರ ಸ್ಕ್ರಬ್ ತೆಗೆದು ಮುಖವನ್ನು ತೊಳೆದುಕೊಳ್ಳಿ. ಇದನ್ನು ವಾರಕ್ಕೊಮ್ಮೆ ಬಳಸುವುದರಿಂದ ಮುಖದ ಮೇಲೆ ಕಲೆಗಳು ಕ್ರಮೇಣ ಕಡಿಮೆಯಾಗುತ್ತದೆ ಮತ್ತು ಮುಖ ಹೆಚ್ಚು ಕಾಂತಿಯುಕ್ತವಾಗಿ ಕಾಣಿಸುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...