alex Certify ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ʼಉಪಾಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ʼಉಪಾಯʼ

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಸಿಗುವ ಒಂದು ಭಾನುವಾರದ ರಜಾ ದಿನವನ್ನು ಬ್ಯೂಟಿ ಪಾರ್ಲರ್ ನಲ್ಲಿ ಕಳೆಯುವುದು ಕಷ್ಟ ಸಾಧ್ಯವಾಗಬಹುದು. ಕ್ಲೆನ್ಸಿಂಗ್, ಫೇಸ್ ಪ್ಯಾಕ್ ಗಳನ್ನು ಮನೆಯಲ್ಲೂ ಮಾಡಿಕೊಳ್ಳಬಹುದು. ಹೇಗೆಂದಿರಾ?

ಕ್ಲೆನ್ಸಿಂಗ್ ಮಾಸ್ಕ್ ಚರ್ಮದ ರಂಧ್ರಗಳಲ್ಲಿ ಅಡಗಿರುವ ಕೊಳೆಯನ್ನು ತೆಗೆದು ಹೆಚ್ಚಿನ ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಬ್ಲಾಕ್ ಹೆಡ್ ಕೂಡಾ ತೆಗೆಯಬಹುದು.

ಮೊಟ್ಟೆಯ ಬಿಳಿ ಭಾಗವನ್ನು ಚೆನ್ನಾಗಿ ಬೀಟ್ ಮಾಡಿ ಅದಕ್ಕೆ ಮೊಸರು ಹಾಕಿ ಕಲಕಿ. ಬಳಿಕ ಕುತ್ತಿಗೆಗೆ ಹಚ್ಚಿ ಒಣಗಲು ಬಿಡಿ. 30 ನಿಮಿಷಗಳ ಬಳಿಕ ಬಿಸಿ ನೀರಿನಿಂದ ಅದ್ದಿ ಒರೆಸಿ. ತಣ್ಣೀರಿನಿಂದ ತೊಳೆಯಿರಿ.

ಅರ್ಧ ಚಮಚ ಅರಿಶಿನಕ್ಕೆ ನಿಂಬೆರಸ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. 15 ನಿಮಿಷಗಳ ಬಳಿಕ ತೊಳೆಯಿರಿ. ಮುಲ್ತಾನಿ ಮಿಟ್ಟಿಗೆ ಹಾಲು ಬೆರೆಸಿ ಕುತ್ತಿಗೆಗೆ ಹಚ್ಚಿ 15 ನಿಮಿಷದ ಬಳಿಕ ತೊಳೆಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...