alex Certify ಮನೆಯೊಳಗೇ ಮಗುವನ್ನು ಬಿಡುವ ಮೆಟ್ರೋ ರೈಲು: ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯೊಳಗೇ ಮಗುವನ್ನು ಬಿಡುವ ಮೆಟ್ರೋ ರೈಲು: ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು

ಮೆಟ್ರೋವೊಂದು ಬಾಲಕನನ್ನು ನೇರವಾಗಿ ಅದರ ಮನೆಯೊಳಕ್ಕೆ ಬಿಡುವ ವಿಡಿಯೋ ಒಂದು ವೈರಲ್​ ಆಗಿದ್ದು ಎಲ್ಲರ ಹುಬ್ಬೇರಿಸುವಂತಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಮನೆಯೊಳಗಿರುವ ಮಂಚದ ಮೇಲೆ ಕುಳಿತು ಮೊಬೈಲ್ ನೋಡುತ್ತಿರುತ್ತಾಳೆ.

ಅದೇ ಕ್ಷಣದಲ್ಲಿ ಅವಳ ಮುಂದಿರುವ ನೆಲದ ಭಾಗ ತೆರೆದುಕೊಳ್ಳುತ್ತದೆ. ಅಲ್ಲಿ ಮೆಟ್ರೊ ಬರುತ್ತದೆ. ಮೆಟ್ರೋದ ಒಳಗಿನಿಂದ ಸಿಲಿಂಡರಾಕಾರದ ಎಲಿವೇಟರ್‌ನಂತಹ ರಚನೆ ಬರುತ್ತದೆ. ಅದರಿಂದ ಬಾಲಕ ನೇರವಾಗಿ ಅಮ್ಮನ ಬಳಿ ಬರುವುದನ್ನು ವಿಡಿಯೋ ತೋರಿಸುತ್ತದೆ.

ಈ ವಿಡಿಯೋ ನೋಡಿದರೆ ನಿಜಕ್ಕೂ ಇಂಥದ್ದೊಂದು ಇದೆಯೇ ಎಂದುಕೊಳ್ಳುವವರು ಹೆಚ್ಚು. ಆದರೆ ಅಸಲಿಗೆ ಇದು ಭವಿಷ್ಯದ ಪರಿಕಲ್ಪನೆಯಷ್ಟೇ, ಜಪಾನಿಗರು ಇಂಥದ್ದೊಂದು ಪರಿಕಲ್ಪನೆಯನ್ನು ಮಾಡಿದ್ದಾರೆ. ಅಷ್ಟಕ್ಕೂ ಜಪಾನಿಗರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಇಂಥದ್ದೊಂದು ಪರಿಕಲ್ಪನೆಗೆ ಸಾಕಾರರೂಪ ಕೊಟ್ಟರೂ ಅಚ್ಚರಿಯಿಲ್ಲ.

ಆದರೆ ಈ ವಿಡಿಯೋ ನೋಡಿ ಹಲವರು ಇದು ಅತ್ಯಂತ ಕೆಟ್ಟ ಪರಿಕಲ್ಪನೆ ಎಂದಿದ್ದಾರೆ. ಮಗುವನ್ನು ಸುಲಭದಲ್ಲಿ ಅಪಹರಿಸಲು ಇದು ಸಹಕಾರಿಯಾಗುತ್ತದೆ ಮಾತ್ರವಲ್ಲದೇ ಇಂಥದ್ದೊಂದು ಪರಿಕಲ್ಪನೆ ಸಾಕಾರಗೊಂಡರೆ ಹಲವಾರು ಸಮಸ್ಯೆಗಳು ಉದ್ಭವವಾಗುತ್ತವೆ ಎಂದಿದ್ದಾರೆ.

— Tansu YEĞEN (@TansuYegen) December 2, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...