alex Certify ಮನೆಯಲ್ಲೇ ತಯಾರಿಸಿ ಚರ್ಮದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಕಹಿಬೇವಿನ ಸೋಪ್‌…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ತಯಾರಿಸಿ ಚರ್ಮದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಕಹಿಬೇವಿನ ಸೋಪ್‌…..!

ಕಹಿ ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿವೆ. ಅದಕ್ಕಾಗಿಯೇ ಪ್ರಾಚೀನ ಕಾಲದಿಂದಲೂ ಬೇವನ್ನು ಸೌಂದರ್ಯಕ್ಕಾಗಿ ಬಳಸಲಾಗುತ್ತದೆ. ಕಹಿಬೇವಿನ ಎಲೆಗಳಿಂದ ಮಾಡಿದ ಸಾಬೂನು ಕೂಡ ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಹೇಳಿಮಾಡಿಸಿದಂತಿರುತ್ತದೆ. ಮನೆಯಲ್ಲೇ ನೀವು ಆರೋಗ್ಯಕರ ಬೇವಿನ ಸಾಬೂನು ತಯಾರಿಸಬಹುದು. ಬೇವಿನ ಸೋಪಿನ ಬಳಕೆಯಿಂದ ಮೊಡವೆಗಳು, ಕಪ್ಪು ಕಲೆಗಳು, ಅಲರ್ಜಿಗಳು ಮತ್ತು ಚರ್ಮದ ಸೋಂಕುಗಳ ಸಮಸ್ಯೆಯನ್ನು ತೊಡೆದುಹಾಕಬಹುದು.

ಬೇವಿನ ಸೋಪ್ ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ಅಷ್ಟೇ ಅಲ್ಲ ಬೇವಿನ ಸಾಬೂನು ವಯಸ್ಸಾದ ಲಕ್ಷಣಗಳನ್ನು ನಿಧಾನಗೊಳಿಸುತ್ತದೆ. ಮನೆಯಲ್ಲಿಯೇ ಬೇವಿನ ಸೋಪ್ ಅನ್ನು ಹೇಗೆ ತಯಾರಿಸಬೇಕೆಂದು ತಿಳಿಯೋಣ. 2 ಕಪ್ ಬೇವಿನ ಎಲೆಗಳು, ಗ್ಲಿಸರಿನ್ ಸೋಪ್,1/2 ಟೀಚಮಚ ಸಾರಭೂತ ತೈಲ (ಐಚ್ಛಿಕ), ಸೋಪ್ ಅಚ್ಚುತೆಗೆದುಕೊಳ್ಳಿ. ಬೇವಿನ ಸಾಬೂನು ತಯಾರಿಸಲು, ಮೊದಲು ಬೇವಿನ ಎಲೆಗಳನ್ನು ಸಂಪೂರ್ಣವಾಗಿ ತೊಳೆದು ಸ್ವಚ್ಛಗೊಳಿಸಿ. ನಂತರ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ ಮತ್ತು ದಪ್ಪ ಪೇಸ್ಟ್ ತಯಾರಿಸಿ. ಬಳಿಕ ಗ್ಲಿಸರಿನ್ ಸೋಪ್ ಅನ್ನು ತುರಿಯುವ ಮಣೆ ಅಥವಾ ಚಾಕುವಿನಿಂದ ನುಣ್ಣಗೆ ಕತ್ತರಿಸಿ. ಅದನ್ನು ಮೈಕ್ರೋವೇವ್ನಲ್ಲಿಟ್ಟು ಚೆನ್ನಾಗಿ ಕರಗಿಸಿ.

ನಂತರ ಬೇವಿನ ಪೇಸ್ಟ್‌ಗೆ ಕೆಲವು ಹನಿ ಸಾರಭೂತ ತೈಲವನ್ನು ಸೇರಿಸಿ. ಬಳಿಕ ಒಂದು ಚಿಟಿಕೆ ಅರಿಶಿನ ಪುಡಿಯನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕರಗಿದ ಸೋಪಿಗೆ ಬೇವಿನ ಪೇಸ್ಟ್ ಅನ್ನು ಸೇರಿಸಿ.ಆ ಮಿಶ್ರಣವನ್ನು ಮೈಕ್ರೋವೇವ್‌ನಲ್ಲಿ ಸ್ವಲ್ಪ ಸಮಯದವರೆಗೆ ಕರಗಿಸಿ. ಬಳಿಕ ಈ ಮಿಶ್ರಣವನ್ನು ಸೋಪ್ ಅಚ್ಚಿನಲ್ಲಿ ಸುರಿಯಿರಿ. ಅದನ್ನು ಸುಮಾರು 4-5 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇರಿಸಬೇಕು. ಬಳಿಕ ಅಚ್ಚಿನಿಂದ ಸೋಪನ್ನು ಹೊರತೆಗೆಯಬಹುದು. ಮನೆಯಲ್ಲೇ ತಯಾರಿಸಿದ ಈ ಸಾಬೂನನ್ನು ಪ್ರತಿದಿನ ಸ್ನಾನಕ್ಕೆ ಬಳಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...