alex Certify ಮದುವೆಗೆ ಕಂಟಕವಾಗಬಹುದು ಜಾತಕದಲ್ಲಿನ ಮಂಗಳ ದೋಷ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಕಂಟಕವಾಗಬಹುದು ಜಾತಕದಲ್ಲಿನ ಮಂಗಳ ದೋಷ…..!

ಮಂಗಳ ದೋಷವು ಜ್ಯೋತಿಷ್ಯದಲ್ಲಿ ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ಇದು ನೇರವಾಗಿ ಮದುವೆಗೆ ಸಂಬಂಧಿಸಿದ್ದು. ಮಂಗಳ 1, 4, 7, 8 ಮತ್ತು 12 ನೇ ಸ್ಥಾನದಲ್ಲಿದ್ದರೆ ಆ ವ್ಯಕ್ತಿಯ ಜಾತಕದಲ್ಲಿ ದೋಷವಿದೆ ಎಂದರ್ಥ.

ಮಂಗಳ ಗ್ರಹದ ಸ್ಥಾನಪಲ್ಲಟದಿಂದ ಒಂದಿಲ್ಲೊಂದು ಅನಾಹುತ ಸಂಭವಿಸುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು. ಮಂಗಳನನ್ನು ಯುದ್ಧದ ದೇವರು ಎಂದೇ ಕರೆಯಲಾಗುತ್ತದೆ. ವಿಶೇಷವೆಂದರೆ ಈ ಗ್ರಹವು ಅವಿವಾಹಿತನಾಗಿ ಉಳಿದಿದೆಯಂತೆ.

ಜಾತಕದಲ್ಲಿ ಮಂಗಳನ ದೋಷ ಕಾಡುವುದು ಯಾಕೆ..?

ಸ್ವತಃ ಅವಿವಾಹಿತನಾಗಿರೋ ಗ್ರಹವು ಕೆಲವರ ಜಾತಕದಲ್ಲಿ ಅಂತಹ ಸಂಯೋಜನೆಗಳನ್ನು ಸೃಷ್ಟಿಸುತ್ತದೆ. ನಿರಂತರ ಸಮಸ್ಯೆಗಳು ಮದುವೆಯ ಪ್ರಸ್ತಾಪಗಳಲ್ಲಿ ಮಾತ್ರವಲ್ಲದೆ ವೈವಾಹಿಕ ಜೀವನದಲ್ಲೂ ಕಾಣಿಸಿಕೊಳ್ಳುತ್ತವೆ.

ಹಾಗಾಗಿ ಮಂಗಳನ ದೋಷವಿರುವವರು ಅಂಥದ್ದೇ ಜಾತಕ ಹೊಂದಿರುವವರನ್ನು ವಿವಾಹವಾಗುವುದು ಸೂಕ್ತವೆಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.

ದೋಷರಹಿತರನ್ನು ವಿವಾಹವಾದಲ್ಲಿ ವೈವಾಹಿಕ ಜೀವನದಲ್ಲಿ ಕ್ಲೇಶ, ದುಃಖಮಯ ಘಟನೆಗಳು ನಡೆಯಬಹುದು. ಸಂಗಾತಿ ನಿಮ್ಮನ್ನು ತೊರೆದು ಹೋಗುವ ಸಾಧ್ಯತೆಯೂ ಇರುತ್ತದೆ. ಇಬ್ಬರು ದೋಷವಿರುವವರು ವಿವಾಹವಾಗುವುದರಿಂದ ಜಾತಕದಲ್ಲಿನ ದೋಷ ತಾನಾಗಿಯೇ ಅಂತ್ಯವಾಗುತ್ತದೆ ಅನ್ನೋದು ಜ್ಯೋತಿಷಿಗಳ ನಂಬಿಕೆ.

ಧರ್ಮಗ್ರಂಥಗಳಲ್ಲಿ ಮಂಗಳ ಗ್ರಹವನ್ನು ಕೋಪ, ಶಕ್ತಿ, ಶೌರ್ಯ ಮತ್ತು ಅದೃಷ್ಟದ ಅಂಶವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಮಂಗಳನ ದೋಷವಿದ್ದರೆ, ಆ ವ್ಯಕ್ತಿಯು ಕೋಪಿಷ್ಠನು, ಸೊಕ್ಕಿನವನು ಮತ್ತು ಶಕ್ತಿಶಾಲಿಯಾಗಿರುತ್ತಾನೆ. ಆತ ದೋಷರಹಿತರನ್ನು ಮದುವೆಯಾದಲ್ಲಿ ತನ್ನ ಉತ್ಸಾಹ, ಕೋಪ, ಶೌರ್ಯ ಮತ್ತು ಕೋಪದಿಂದ ಸಂಗಾತಿಯನ್ನು ನಿಯಂತ್ರಿಸಲು ಯತ್ನಿಸುತ್ತಾನೆ. ಇದರಿಂದ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡಬಹುದು. ಜಾತಕದಲ್ಲಿ ಮಂಗಳನ ದೋಷ ಹೊಂದಿರುವವರು, ದೋಷ ರಹಿತರನ್ನು ಮದುವೆಯಾದರೆ ಕಂಟಕ ಎಂದೂ ಹೇಳಲಾಗುತ್ತದೆ.

ಮಂಗಳ ಯಾಕಿಷ್ಟು ಅಪಾಯಕಾರಿ ಗೊತ್ತಾ…?

ಜಾತಕದ 7ನೇ ಮನೆಯಲ್ಲಿ ಮಂಗಳನಿದ್ದರೆ, ಮದುವೆಯ ಸಮಯದಲ್ಲಿ ಅಡೆತಡೆಗಳು ಮತ್ತು ಮದುವೆಯ ನಂತರವೂ ಸಮಸ್ಯೆಗಳು ಉಂಟಾಗುತ್ತವೆ. ಮಂಗಳ 4ನೇ ಮನೆಯಲ್ಲಿದ್ದರೆ ಸಮಯಕ್ಕಿಂತ ಮುಂಚಿತವಾಗಿ ಮದುವೆಯಾಗುತ್ತದೆ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುವುದರಿಂದ ಹೊಂದಾಣಿಕೆಯ ಕೊರತೆ ಮೂಡಿ ಸಮಸ್ಯೆಗಳು ಬರಬಹುದು.

ಜಾತಕದಲ್ಲಿ ಮಂಗಳವು ಎಂಟನೇ ಮನೆಯಲ್ಲಿದ್ದರೆ, ವ್ಯಕ್ತಿಯು ತಪ್ಪು ಸಹವಾಸದಲ್ಲಿ ಬೀಳುವ ಸಾಧ್ಯತೆಗಳಿವೆ, ಇದರಿಂದಾಗಿ ಮದುವೆ ಮುರಿದುಹೋಗುವ ಸಾಧ್ಯತೆಯಿದೆ. ಆದಾಗ್ಯೂ, ಈ ಎಲ್ಲಾ ವಿಷಯಗಳು ವೈಜ್ಞಾನಿಕವಾಗಿ ಎಲ್ಲಿಯೂ ಸಾಬೀತಾಗಿಲ್ಲ. ಆದರೆ ಜ್ಯೋತಿಷ್ಯವನ್ನು ನಂಬುವವರು ಮಂಗಳದೋಷವು ದಾಂಪತ್ಯದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ನಂಬುತ್ತಾರೆ.

ಜಾತಕದಲ್ಲಿ ಮಂಗಳ 8ನೇ ಮನೆಯಲ್ಲಿದ್ದರೆ, ವ್ಯಕ್ತಿ ಕೆಟ್ಟ ಸಹವಾಸಕ್ಕೆ ಬೀಳುವ ಸಾಧ್ಯತೆಗಳಿರುತ್ತವೆ. ಇದರಿಂದಾಗಿ ಮದುವೆ ಮುರಿದುಹೋಗಬಹುದು. ಆದ್ರೆ ಇದ್ಯಾವುದೂ ವೈಜ್ಞಾನಿಕವಾಗಿ  ಸಾಬೀತಾಗಿಲ್ಲ. ಕುಂಡಲಿಯ ಎಂಟನೇ ಮನೆಯಲ್ಲಿ ಮಂಗಳನಿದ್ದರೆ, ಸಂಗಾತಿಯ ಮರಣದ ಸಾಧ್ಯತೆಯಿದೆ ಎಂಬ ಭಯದಿಂದ ದೋಷವಿರುವವರು ಅಂಥದ್ದೇ ಜಾತಕ ಹೊಂದಿರುವವರನ್ನು ಮದುವೆಯಾಗುವಂತೆ ಸೂಚಿಸಲಾಗುತ್ತದೆ.

ಈ ನಕಾರಾತ್ಮಕ ಅಂಶವನ್ನು ತೊಡೆದುಹಾಕಲು ಆಲದ ಮರ ಹಾಗೂ ಸಾಲಿಗ್ರಾಮದೊಂದಿಗೆ ಸಾಂಕೇತಿಕವಾಗಿ ಮದುವೆ ಮಾಡಲಾಗುತ್ತದೆ. ದೋಷ ಹೊಂದಿರುವವರ ಪತ್ನಿಯ ಸಾವನ್ನು ತಡೆಯಲು ಈ ರೀತಿ ಮಾಡುವ ಸಂಪ್ರದಾಯವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ 29ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಮಂಗಳನ ದೋಷ ತಾನಾಗಿಯೇ ಪರಿಹಾರವಾಗುತ್ತದೆ. ನಂತರ ಅವರು ಯಾರನ್ನು ಬೇಕಾದರೂ ಮದುವೆಯಾಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...