alex Certify ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ; ಕಾಲೇಜು ಬಳಿ ಯುವತಿಯರೊಂದಿಗೆ ನಿಂತಿದ್ದ ಯುವಕನ ಮೇಲೆ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ; ಕಾಲೇಜು ಬಳಿ ಯುವತಿಯರೊಂದಿಗೆ ನಿಂತಿದ್ದ ಯುವಕನ ಮೇಲೆ ಹಲ್ಲೆ

ಮಂಗಳೂರು: ಮಂಗಳೂರಿನ ಬೆಂದೂರ್ ವೆಲ್ ಬಳಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ಬೆಳಕಿಗೆ ಬಂದಿದೆ. ಅಗ್ನೇಸ್ ಕಾಲೇಜು ಬಳಿ ಇಬ್ಬರು ಯುವತಿಯರೊಂದಿಗೆ ನಿಂತಿದ್ದ ಇಬ್ಬರು ಯುವಕರ ಮೇಲೆ ಭಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ತಡರಾತ್ರಿ 10 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾಲೇಜು ಬಳಿ ಇಬ್ಬರು ಯುವತಿಯರೊಂದಿಗೆ ಇಬ್ಬರು ಯುವಕರು ನಿಂತು ಮಾತನಾಡುತ್ತಿದ್ದರು. ಇದರಲ್ಲಿ ಓರ್ವ ಅನ್ಯಕೋಮಿನ ಯುವಕನಿರುವ ಬಗ್ಗೆ ಮಾಹಿತಿ ತಿಳಿದ ಕಾರ್ಯಕರ್ತರು ದಾಳಿ ನಡೆಸಿ, ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಇಬ್ಬರು ಯುವಕರು ಹಾಗೂ ಇಬ್ಬರು ಯುವತಿಯರನ್ನು ಕದ್ರಿ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುಟ್ಯೂಬ್ ನಲ್ಲಿ ಧೂಳೆಬ್ಬಿಸಿದ ‘ಮದಗಜ’ ಸಿನಿಮಾದ ಮೊದಲ ಹಾಡು

ಯುವತಿಯರ ಜೊತೆಗಿದ್ದ ಓರ್ವ ಯುವಕ ತನ್ನ ಮೇಲೆ ಭಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದು, ಇದೀಗ ಇಬ್ಬರು ಭಜರಂಗ ದಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...