alex Certify ‘ಭೂಲ್ ಭುಲೈಯಾ-2’ ಹಾಡಿಗೆ ಕಿಲಿ ಪೌಲ್ ಬೊಂಬಾಟ್ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಭೂಲ್ ಭುಲೈಯಾ-2’ ಹಾಡಿಗೆ ಕಿಲಿ ಪೌಲ್ ಬೊಂಬಾಟ್ ಡಾನ್ಸ್

ಕಳೆದ ಕೆಲವು ತಿಂಗಳುಗಳಿಂದ ಇಂಟರ್ನೆಟ್ ಅನ್ನು ಆಳುತ್ತಿರುವ ತಾಂಜೇನಿಯಾದ ಪ್ರಭಾವಿ ಕಿಲಿ ಪಾಲ್ ಮತ್ತೊಂದು ಮನರಂಜನಾ ವಿಡಿಯೋದೊಂದಿಗೆ ಮರಳಿದ್ದಾರೆ. ಜನಪ್ರಿಯ ಮತ್ತು ಟ್ರೆಂಡಿಂಗ್ ಭಾರತೀಯ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ ಮತ್ತು ನೃತ್ಯ ಮಾಡುವ ಮೂಲಕ ಅವರ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುವುದರಿಂದ ಅವರು ಭಾರತದಲ್ಲಿ ವೈರಲ್ ಸಂವೇದನೆ ಆಗಿದ್ದಾರೆ. ಹೀಗಾಗಿ ಅಪಾರ ಸಂಖ್ಯೆಯ ಭಾರತೀಯ ಅಭಿಮಾನಿಗಳನ್ನು ಹೊಂದಿದ್ದಾರೆ.

ಇತ್ತೀಚೆಗಷ್ಟೇ ಕೆಜಿಎಫ್-2 ಸಿನಿಮಾದ ಡೈಲಾಗ್ ಗೆ ಲಿಪ್ ಸಿಂಕ್ ಮಾಡಿದ್ದರು. ಇದೀಗ ಮತ್ತೊಂದು ವಿಡಿಯೋದೊಂದಿಗೆ ಅವರು ಹಿಂತಿರುಗಿದ್ದಾರೆ. ಇದರಲ್ಲಿ ಅವರು ಮುಂಬರುವ ಭೂಲ್ ಭುಲೈಯಾ-2  ಸಿನಿಮಾದ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.

ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರುವ ಕಿಲಿ ಪೌಲ್, ಕಾರ್ತಿಕ್ ಆರ್ಯನ್‌ ಅವರ ಸಿನಿಮಾದ ಹರೇ ರಾಮ್ ಹರೇ ರಾಮ್, ಹರೇ ಕೃಷ್ಣ ಹರೇ ರಾಮ್ ಹಾಡಿಗೆ ಬೊಂಬಾಟ್ ಆಗಿ ಕುಣಿದಿದ್ದಾರೆ. ಈ ವಿಡಿಯೋವನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಕಾಮೆಂಟ್ ವಿಭಾಗವನ್ನು ಹೃದಯ, ಪ್ರೀತಿಯ ಎಮೋಜಿಗಳಿಂದ ತುಂಬಿದ್ದಾರೆ.

ಕೆಲವು ದಿನಗಳ ಹಿಂದೆ, ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಮೇಲೆ ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದರು. ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡ ಅಪ್‌ಡೇಟ್ ಪ್ರಕಾರ, ಅವರನ್ನು ಆಯುಧಗಳಿಂದ ಹೊಡೆದಿದ್ದರಂತೆ. ದಾಳಿಯಿಂದ ಗಾಯಗೊಂಡಿದ್ದ, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...