alex Certify ಬೆಚ್ಚಿಬೀಳಿಸುವಂತಿದೆ ಪತ್ನಿಯರನ್ನು ಬದಲಾಯಿಸಿಕೊಳ್ಳಲು ಸೋಶಿಯಲ್ ಮೀಡಿಯಾ ಮೂಲಕ ನಡೆಯುತ್ತಿದ್ದ ಅನೈತಿಕ ದಂಧೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಪತ್ನಿಯರನ್ನು ಬದಲಾಯಿಸಿಕೊಳ್ಳಲು ಸೋಶಿಯಲ್ ಮೀಡಿಯಾ ಮೂಲಕ ನಡೆಯುತ್ತಿದ್ದ ಅನೈತಿಕ ದಂಧೆ…!

ಲೈಂಗಿಕ ಚಟುವಟಿಕೆಗಳಿಗೆ ತಮ್ಮ ಪತ್ನಿಯರನ್ನೇ ಬಳಕೆ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದ ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಾಚಲ ಪಟ್ಟಣದ ಪೊಲೀಸರು ಬಳಿಕ ಇತರೆ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಫೇಸ್​ಬುಕ್​ ಹಾಗೂ ಟೆಲಿಗ್ರಾಂನಂತಹ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಂಡು ಈ ದಂಧೆಯನ್ನು ನಡೆಸಲಾಗುತ್ತಿತ್ತು ಎನ್ನಲಾಗಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಮಹಿಳೆಯೊಬ್ಬರು ತಮ್ಮ ಪತಿ ವಿರುದ್ಧ ದೂರನ್ನು ನೀಡಿದ್ದರು. ಇಂತಹ ದಂಧೆಯನ್ನು ನಡೆಸುವ ಸಲುವಾಗಿ ನನ್ನ ಪತಿ ನನ್ನನ್ನು ತಮ್ಮ ಆನ್​ಲೈನ್​ ಸ್ನೇಹಿತರಿಗೆ ಪರಿಚಯಿಸಿದ್ದರು ಎಂದು ಆರೋಪಿಸಿದ್ದಾರೆ. ದೂರನ್ನು ಸ್ವೀಕರಿಸಿದ ಪೊಲೀಸರು ಆಕೆಯ ಪತಿಯನ್ನು ಬಂಧಿಸಿದರು. ಇದಾದ ಬಳಿಕ ಈ ಲೈಂಗಿಕ ಚಟುವಟಿಕೆಯ ದಂಧೆಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಸೋಶಿಯಲ್​ ಮೀಡಿಯಾ ಗ್ರೂಪ್​ಗಳಲ್ಲಿ ಸದಸ್ಯರು ತಮ್ಮ ಪತ್ನಿ ವಿನಿಮಯ, ಅಸ್ವಾಭಾವಿಕ ಲೈಂಗಿಕ ಕ್ರಿಯೆ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಕೆಲವು ಗ್ರೂಪ್​ಗಳಲ್ಲಿ 5000ಕ್ಕೂ ಅಧಿಕ ಸದಸ್ಯರಿದ್ದಾರೆ ಎನ್ನಲಾಗಿದೆ.

ವಕೀಲರು, ವೈದ್ಯರಂತಹ ಉನ್ನತ ಹುದ್ದೆಗಳಲ್ಲಿ ಇರುವವರೂ ಸಹ ನಕಲಿ ಗುರುತಿನ ಮೂಲಕ ಈ ಗ್ರೂಪ್​ನಲ್ಲಿ ಸದಸ್ಯರಾಗಿದ್ದರು. ಕೆಲ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಈ ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಆದರೆ ಬಹುತೇಕ ಮಹಿಳೆಯರು ಪತಿಯ ಒತ್ತಾಯದಿಂದ ಈ ದಂಧೆಗೆ ಇಳಿದಿದ್ದರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...