alex Certify ಬೆಂಗಳೂರಿನಲ್ಲಿ ಟೀಂ ಇಂಡಿಯಾ – ಶ್ರೀಲಂಕಾ ನಡುವಿನ ಪಿಂಕ್‌ ಬಾಲ್ ಟೆಸ್ಟ್;‌ ಬಿಸಿಸಿಐ ನಿಂದ ಅಧಿಕೃತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನಲ್ಲಿ ಟೀಂ ಇಂಡಿಯಾ – ಶ್ರೀಲಂಕಾ ನಡುವಿನ ಪಿಂಕ್‌ ಬಾಲ್ ಟೆಸ್ಟ್;‌ ಬಿಸಿಸಿಐ ನಿಂದ ಅಧಿಕೃತ ಮಾಹಿತಿ

ಟೀಂ ಇಂಡಿಯಾ ಹಾಗೂ ಶ್ರೀಲಂಕಾ ನಡುವಿನ ಡೇ & ನೈಟ್​ ಪಂದ್ಯಗಳ ಟೆಸ್ಟ್​ ಸರಣಿಯು ಬೆಂಗಳೂರಿನಲ್ಲಿಯೇ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್​​ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್​ ಗಂಗೂಲಿ ಅಧಿಕೃತ ಮಾಹಿತಿ ನೀಡಿದ್ದಾರೆ.

ಫೆಬ್ರವರಿ 20ರಂದು ಕೋಲ್ಕತ್ತಾದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಏಕದಿನ ಸರಣಿಯು ಮುಕ್ತಾಯಗೊಂಡ ಬಳಿಕ ಟೀಂ ಇಂಡಿಯಾ ಶ್ರೀಲಂಕಾದ ವಿರುದ್ಧ ಟಿ 20 ಸರಣಿ ಹಾಗೂ ಎರಡು ಟೆಸ್ಟ್​ ಪಂದ್ಯಗಳನ್ನಾಡಲಿದೆ.

ಪಿಂಕ್​ ಬಾಲ್ ಟೆಸ್ಟ್​ ಬೆಂಗಳೂರಿನಲ್ಲಿ ನಡೆಯಲಿದೆ. ಶ್ರೀಲಂಕಾ ಸರಣಿಯ ಎಲ್ಲಾ ಸ್ಥಳಗಳನ್ನು ನಾವು ಇನ್ನೂ ನಿರ್ಧರಿಸಿಲ್ಲ. ಆದರೆ ಅದನ್ನು ಶೀಘ್ರದಲ್ಲಿಯೇ ಪ್ರಕಟಿಸಲಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

2019ರ ನವೆಂಬರ್​ ತಿಂಗಳಿನಲ್ಲಿ ಕೊಲ್ಕತ್ತಾದಲ್ಲಿ ಬಾಂಗ್ಲಾ ದೇಶದ ವಿರುದ್ಧ ಟೀಂ ಇಂಡಿಯಾ ಮೊದಲ ಬಾರಿಗೆ ಡೇ & ನೈಟ್​ ಪಂದ್ಯವನ್ನಾಡಿತ್ತು. ಇದಾದ ಬಳಿಕ 2021ರ ಫೆಬ್ರವರಿ ತಿಂಗಳಲ್ಲಿ ಅಹಮದಾಬಾದ್​ನಲ್ಲಿ ಇಂಗ್ಲೆಂಡ್​ ತಂಡವನ್ನು ಎದುರಿಸಿತ್ತು.

ಇದೀಗ ಮೂರನೇ ಬಾರಿಗೆ ಭಾರತವು ಪಿಂಕ್​ ಬಾಲ್​ ಟೆಸ್ಟ್​​ನ ಆತಿಥ್ಯವನ್ನು ವಹಿಸುತ್ತಿದೆ. ವಿರಾಟ್​ ಕೊಹ್ಲಿ ಟೀಂ ಇಂಡಿಯಾ ನಾಯಕನ ಸ್ಥಾನದಿಂದ ಕೆಳಗಿಳಿದಿರುವ ಹಿನ್ನೆಲೆಯಲ್ಲಿ ಹೊಸ ನಾಯಕನ ನೇತೃತ್ವದಲ್ಲಿ ಟೀಂ ಇಂಡಿಯಾ ಆಟಗಾರರು ಶ್ರೀಲಂಕಾವನ್ನು ಎದುರಿಸಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...