alex Certify ಫ್ಲೈಟ್ ಟಿಕೆಟ್ ಬುಕ್ ಮಾಡಿದರೆ 1.5 ಕೆಜಿ ಟೊಮೆಟೊ ಫ್ರೀ; ಸ್ಪೆಷಲ್ ಆಫರ್ ಘೋಷಿಸಿದ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಲೈಟ್ ಟಿಕೆಟ್ ಬುಕ್ ಮಾಡಿದರೆ 1.5 ಕೆಜಿ ಟೊಮೆಟೊ ಫ್ರೀ; ಸ್ಪೆಷಲ್ ಆಫರ್ ಘೋಷಿಸಿದ ಕಂಪನಿ

ಚೆನ್ನೈ; ಟೊಮೆಟೊ ಬೆಲೆ ಗಗನಕ್ಕೇರಿರುವುದನ್ನೇ ವಿಷಯವನ್ನಾಗಿಟ್ಟುಕೊಂಡು ವಿಮಾನ ಸಂಸ್ಥೆಯೊಂದು ಪ್ರಯಾಣಿಕರನ್ನು ಸೆಳೆಯಲು ಬಿಗ್ ಆಫರ್ ನೀಡಿದೆ.

ಮಧುರೈನ ದೇಶೀಯ ವಿಮಾನಯಾನ ಸಂಸ್ಥೆ ಇಂಥದ್ದೊಂದು ಆಫರ್ ನೀಡಿದ್ದು, ದೇಶಿಯ ಹಾಗೂ ವಿದೇಶಿ ಪ್ರಯಾಣ ಟಿಕೆಟ್ ಬುಕ್ ಮಾಡಿದರೆ ಟೊಮೆಟೊ ಫ್ರೀ ಕೊಡುವುದಾಗಿ ಘೋಷಿಸಿದೆ.

ಮಧುರೈನ ಟ್ರಾವೆಲ್ ಏಜೆನ್ಸಿ ದೇಶಿಯ ವಿಮಾನ ಟಿಕೆಟ್ ಬುಕ್ ಮಾಡಿದರೆ 1 ಕೆಜಿ ಟೊಮೆಟೊ ಫ್ರೀ ಹಾಗೂ ಅಂತರಾಷ್ಟ್ರೀಯ ವಿಮಾನ ಟಿಕೆಟ್ ಬುಕ್ ಮಾಡಿದರೆ 1.5 ಕೆಜಿ ಟೊಮೆಟೊ ಫ್ರೀ ನೀಡುವುದಾಗಿ ತಿಳಿಸಿದೆ. ಟೊಮೆಟೊ ಬೆಲೆ ಏರಿಕೆ ನಡುವೆ ಈ ಆಫರ್ ನೋಡಿರುವ ಗ್ರಾಹಕರು ಟಿಕೆಟ್ ಬುಕಿಂಗ್ ಗೆ ಮುಗಿಬಿದ್ದಿದ್ದಾರೆ. ಉಚಿತ ಟೊಮೆಟೊಗಾಗಿ ವಿಮಾನ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...