alex Certify ‘ಜಿಮ್’ ನಲ್ಲಿ ವರ್ಕೌಟ್ ಮಾಡಿದ ಬಳಿಕ ಕುಸಿದು ಬಿದ್ದು ಯುವಕ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜಿಮ್’ ನಲ್ಲಿ ವರ್ಕೌಟ್ ಮಾಡಿದ ಬಳಿಕ ಕುಸಿದು ಬಿದ್ದು ಯುವಕ ಸಾವು

 

ಯುವಕನೊಬ್ಬ ಜಿಮ್ ನಲ್ಲಿ ವರ್ಕೌಟ್ ಮಾಡಿದ ಬಳಿಕ ಕುಸಿದುಬಿದ್ದಿದ್ದು, ಕೂಡಲೇ ಆತನನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ.

ಘಟನೆ ತಮಿಳುನಾಡಿನ ಮಧುರೈ ಪಾಲಂಗಂಟಂ ನಲ್ಲಿ ನಡೆದಿದ್ದು, 27 ವರ್ಷದ ಶ್ರೀ ವಿಷ್ಣು ಮೃತ ಯುವಕ. ಜೂನ್4ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

‘ವಿದ್ಯಾವಂತೆ’ ಎಂಬ ಕಾರಣಕ್ಕೆ ಮಹಿಳೆಯನ್ನು ಜೀವನೋಪಾಯಕ್ಕೆ ದುಡಿಯುವಂತೆ ಬಲವಂತ ಮಾಡುವಂತಿಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯ

ಈತ ರಾತ್ರಿ 8.30 ರ ವರೆಗೆ ಕೆಲಸ ಮಾಡಿ 9 ಗಂಟೆ ಸುಮಾರಿಗೆ ಜಿಮ್ ಗೆ ತೆರಳಿದ್ದ ಎನ್ನಲಾಗಿದೆ. ವರ್ಕೌಟ್ ಮಾಡಿದ ಸ್ವಲ್ಪ ಸಮಯದ ಬಳಿಕ ಆತ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಮಗನಿಗೆ ಯಾವುದೇ ದುರಭ್ಯಾಸಗಳು ಇರಲಿಲ್ಲ ಎಂದು ಆತನ ತಂದೆ ಕಮಲೇಶ್ವರ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...