alex Certify ಮಧುರೆ ಮೀನಾಕ್ಷಿಯ ದರ್ಶನ ಪಡೆಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧುರೆ ಮೀನಾಕ್ಷಿಯ ದರ್ಶನ ಪಡೆಯಿರಿ

ಮೀನಾಕ್ಷಿ ಅಮ್ಮನ್ ದೇವಸ್ಥಾನ, ತಮಿಳು ನಾಡಿನ ಪವಿತ್ರ ನಗರ ಮಧುರೈನಲ್ಲಿರುವ ಒಂದು ಐತಿಹಾಸಿಕ ಹಿಂದು ದೇವಾಲಯವಾಗಿದೆ. ಇದು ಶಿವ ದೇವರಿಗೆ ಮತ್ತು ಅವನ ಪತ್ನಿ ಪಾರ್ವತಿಗೆ ಮೀಸಲಾದುದು. ಇದು 2500 ವರ್ಷ ಪುರಾತನ, ನಗರ ಮಧುರೈನ ಹೃದಯಭಾಗ ಮತ್ತು ಜೀವಾಧಾರವಾಗಿದೆ.

ಸೂಕ್ಷ್ಮ ಪರಿಶೀಲನೆಯಿಂದ ಕೆತ್ತಿದ ಮತ್ತು ಬಣ್ಣ ಬಳಿದ ಪ್ರಮುಖ ದೇವರುಗಳಿರುವ ಎರಡು ಬಂಗಾರದ ಗೋಪುರಗಳೂ ಸೇರಿದಂತೆ ಈ ಸಂಕೀರ್ಣವು 14 ಭವ್ಯವಾದ ಗೋಪುರಗಳನ್ನು ಹೊಂದಿದೆ.

ಪ್ರಾಚೀನ ಕಾಲದಿಂದ ತಮಿಳು ಸಾಹಿತ್ಯದಲ್ಲಿ ಇದರ ಬಗ್ಗೆ ಪ್ರಸ್ತಾಪವಿದೆ. ಆದರೆ ಪ್ರಸ್ತುತವಿರುವ ಈ ರಚನೆಯನ್ನು 1600ರಲ್ಲಿ ನಿರ್ಮಿಸಿರುವುದೆಂದು ನಂಬಲಾಗಿದೆ. ಅತಿ ಎತ್ತರದ ದೇವಸ್ಥಾನದ ಗೋಪುರವು 51.9ಮೀ.ನಷ್ಟು ಎತ್ತರವಿದೆ. ಈ ದೇವಸ್ಥಾನವು ಕುಪ್ರಸಿದ್ಧ ಮುಸ್ಲಿಂ ಆಕ್ರಮಣಕಾರ ಮಲಿಕ್ ಕಾಫರ್ನಿಂದ 1310ರಲ್ಲಿ ಕೊಳ್ಳೆ ಹೊಡೆಯಲ್ಪಟ್ಟಿತ್ತು, ಅಲ್ಲದೇ ಎಲ್ಲಾ ಪುರಾತನ ಅಂಶಗಳು ನಾಶಗೊಂಡಿದ್ದವೆಂದು ನಂಬಲಾಗಿದೆ.

ಇಲ್ಲಿ ಮೀನಾಕ್ಷಿ ಅಮ್ಮನಿಗೆ ದಿನಕ್ಕೆ ಆರು ಬಾರಿ ಪೂಜೆ ನಡೆಯುತ್ತದೆ. ದೇವಸ್ಥಾನದ ಸಂಕೀರ್ಣವು ಸುಮಾರು 45 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...