alex Certify ಪ್ರೊ. ಹಾಕಿಯಲ್ಲಿ ಚೀನಾ ತಂಡವನ್ನು ಬಗ್ಗು ಬಡಿದ ಭಾರತೀಯ ವನಿತೆಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೊ. ಹಾಕಿಯಲ್ಲಿ ಚೀನಾ ತಂಡವನ್ನು ಬಗ್ಗು ಬಡಿದ ಭಾರತೀಯ ವನಿತೆಯರು

ಮಸ್ಕತ್ : ಪ್ರೊ. ಲೀಗ್ ನಲ್ಲಿ ಭಾರತೀಯ ಮಹಿಳೆಯರ ಹಾಕಿ ತಂಡವು ಚೀನಾದ ವನಿತೆಯರ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

ಓಮನ್ ನಲ್ಲಿ ನಡೆದ ಪಂದ್ಯದಲ್ಲಿ 7-1 ಗೋಲುಗಳಿಂದ ಭಾರತೀಯ ಮಹಿಳೆಯರು ಗೆಲುವು ಸಾಧಿಸಿದ್ದಾರೆ. ಭಾರತೀಯ ಮಹಿಳೆಯರ ಪ್ರದರ್ಶನದ ಮುಂದೆ ಚೀನಾದ ಮಹಿಳೆಯರು ಹೋರಾಟ ನಡೆಸಲು ಆಗಲೇ ಇಲ್ಲ. 5ನೇ ನಿಮಿಷದಲ್ಲಿ ನವನೀತ್ ಕೌರ್ ಗೋಲು ಬಾರಿಸುವುದರೊಂದಿಗೆ ಶುಭಾರಂಭ ಮಾಡಿದ್ದರು. ಆ ನಂತರ 12ನೇ ನಿಮಿಷದಲ್ಲಿ ನೇಹಾ, 40ನೇ ನಿಮಿಷಯದಲ್ಲಿ ವಂದನಾ ಕಟಾರಿಯಾ ಗೋಲುಗಳನ್ನು ಬಾರಿಸಿ ಅಂತರವನ್ನು ಮತ್ತಷ್ಟು ಹಿಗ್ಗಿಸಿದರು.

ಚೀನಾದ ಪರ 43ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಾಯಿತು. ಆ ನಂತರವೂ ಭಾರತೀಯ ವನಿತೆಯರು ತಮ್ಮ ಆರ್ಭಟ ಮುಂದುವರೆಸಿದರು. 47ನೇ ನಿಮಿಷದಲ್ಲಿ ಸುಶೀಲಾ ಚಾನು, 48ನೇ ನಿಮಿಷದಲ್ಲಿ ಶರ್ಮಿಳಾ ದೇವಿ, 50ನೇ ನಿಮಿಷದಲ್ಲಿ ಗುರ್ಜಿತ್ ಕೌರ್, 52ನೇ ನಿಮಿಷದಲ್ಲಿ ಸುಶೀಲಾ ಚಾನು ಮತ್ತೊಂದು ಗೋಲು ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...