alex Certify ಪ್ರತಿದಿನ ಬೆಳಿಗ್ಗೆ ಪತ್ರಿಕೆ ವಿತರಿಸುತ್ತಾ SSLC ವ್ಯಾಸಂಗ ಮಾಡಿದ್ದ ಬಾಲಕನಿಗೆ 625ಕ್ಕೆ 625 ಅಂಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಬೆಳಿಗ್ಗೆ ಪತ್ರಿಕೆ ವಿತರಿಸುತ್ತಾ SSLC ವ್ಯಾಸಂಗ ಮಾಡಿದ್ದ ಬಾಲಕನಿಗೆ 625ಕ್ಕೆ 625 ಅಂಕ….!

ಈ ಬಾರಿಯ 10ನೇ ತರಗತಿ ಪರೀಕ್ಷಾ ಫಲಿತಾಂಶ ಗುರುವಾರದಂದು ಪ್ರಕಟಗೊಂಡಿದ್ದು, ಇದೇ ಮೊದಲ ಬಾರಿಗೆ ಶೇಕಡ 85.63 ಫಲಿತಾಂಶದೊಂದಿಗೆ ದಾಖಲೆ ಬರೆದಿದೆ. ಗಮನಾರ್ಹ ಸಂಗತಿಯೆಂದರೆ ಈ ಬಾರಿ 145 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ ಬಂದಿದೆ.

ಈ ಪೈಕಿ ಪತ್ರಿಕಾ ವಿತರಕರ ಪುತ್ರನೊಬ್ಬ ಅಪರೂಪದ ಸಾಧನೆ ಮಾಡಿದ್ದು, ಬೆಂಗಳೂರಿನ ದೇವರಾಜ್ ಅವರ ಪುತ್ರ ಮೊನೀಶ್ ಗೌಡ ತನ್ನ ತಂದೆಯೊಂದಿಗೆ ಪ್ರತಿದಿನ ಮನೆಮನೆಗಳಿಗೆ ತೆರಳಿ ದಿನಪತ್ರಿಕೆ ವಿತರಿಸುವುದರ ಜೊತೆಗೆ ಯಾವುದೇ ಟ್ಯೂಶನ್ ಗೂ ಹೋಗದೆ 625ಕ್ಕೆ 625 ಅಂಕ ಗಳಿಸಿದ್ದಾನೆ.

ವಿಜಯನಗರದ ಕಾರ್ಡಿಯಲ್ ಹೈಸ್ಕೂಲ್ ವಿದ್ಯಾರ್ಥಿಯಾಗಿರುವ ಈ ಬಾಲಕ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮುಂದುವರಿಸಿ ಚಾರ್ಟರ್ಡ್ ಅಕೌಂಟೆಂಟ್ ಆಗುವ ಕನಸು ಬಂದಿದ್ದು, ಓದಿನ ಜೊತೆಗೆ ಪೇಪರ್ ಹಾಕುವ ಕಾಯಕವನ್ನೂ ಮುಂದುವರಿಸುತ್ತೇನೆ ಎಂದು ಹೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...