alex Certify ನಿಮಗೆ ನಿದ್ದೆ ಮಾಡುವುದೆಂದ್ರೆ ಬಹಳ ಪ್ರೀತಿನಾ..? ಹಾಗಿದ್ರೆ ಈ ಸ್ಟೋರಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ನಿದ್ದೆ ಮಾಡುವುದೆಂದ್ರೆ ಬಹಳ ಪ್ರೀತಿನಾ..? ಹಾಗಿದ್ರೆ ಈ ಸ್ಟೋರಿ ಓದಿ

ಕೆಲವರಿಗೆ ಏನೂ ಕೆಲಸ ಮಾಡಲು ಇಷ್ಟ ಇರೋದಿಲ್ಲ. ಆದ್ರೆ, ದುಡ್ಡು ಮಾತ್ರ ಬರಬೇಕು ಅನ್ನೋ ಮನಸ್ಥಿತಿ ಇರೋರು ನಮ್ಮ ಮಧ್ಯೆ ಇದ್ದಾರೆ. ಹಾಗಂತ ದುಡ್ಡೇನು ಮರದಲ್ಲಿ ಬೆಳೆಯುತ್ತದೆಯೇ ಅಲ್ವಾ..? ಇದೀಗ ಇಂತಹ ವ್ಯಕ್ತಿಗಳಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ.

ಹೌದು, ಮಲೇಶಿಯಾದ ಮಲಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಇತ್ತೀಚೆಗೆ ಅಧ್ಯಯನವನ್ನು ಯೋಜಿಸಿದ್ದಾರೆ. ಇದರಲ್ಲಿ ಭಾಗವಹಿಸುವವರ ಕೆಲಸ ಏನೆಂದರೆ ಕೇವಲ ನಿದ್ರೆ ಮಾಡುವುದಾಗಿದೆ. ಭಾಗವಹಿಸುವವರು ತಾಂತ್ರಿಕವಾಗಿ ನಿದ್ರೆಯನ್ನು ಹೊರತುಪಡಿಸಿ ಏನನ್ನೂ ಮಾಡುವ ಅಗತ್ಯವಿಲ್ಲ. ಇದಕ್ಕಾಗಿ 26,500 ರೂಪಾಯಿ ಹಣವನ್ನು ಪಾವತಿಸುತ್ತಾರೆ.

ಅಧ್ಯಯನದ ಅರ್ಹತೆಯ ಅವಶ್ಯಕತೆಗಳು ಬಹಳ ಸಿಂಪಲ್ ಆಗಿವೆ. ಸರಾಸರಿ ದೇಹದ ತೂಕ ಹೊಂದಿರುವ ಮತ್ತು ಸುಬಾಂಗ್‌ನಲ್ಲಿರುವ ಸ್ಲೀಪ್ ಹೌಸ್ ನಲ್ಲಿ ಮಲಗಲು ಯಾವುದೇ ತೊಂದರೆಯಿಲ್ಲದ 20 ರಿಂದ 40 ವರ್ಷ ವಯಸ್ಸಿನವರಿಗೆ ಭಾಗವಹಿಸಲು ಆದ್ಯತೆ ನೀಡಲಾಗಿದೆ.

ಭಾಗವಹಿಸುವವರು ಒಂದು ತಿಂಗಳ ಕಾಲ ಸ್ಲೀಪ್ ಹೋಮ್‌ನಲ್ಲಿ ಇರಬೇಕಾಗುತ್ತದೆ. ಹಾಗೂ ಇವರ ಮೇಲೆ ಮೇಲ್ವಿಚಾರಣೆ ಮಾಡಲಾಗುತ್ತದೆ. 30 ರಾತ್ರಿಗಳ ನಿದ್ದೆಯನ್ನು ಪೂರ್ಣಗೊಳಿಸಿದ ನಂತರ ಭಾಗವಹಿಸಿದ ಅಭ್ಯರ್ಥಿಗಳಿಗೆ 26,500 ರೂ. ಪಾವತಿಸಲಾಗುತ್ತದೆ.

ಈ ಜಾಹೀರಾತು ವೈರಲ್ ಆದ ನಂತರ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ನೋಂದಣಿಯನ್ನು ಕ್ಲೋಸ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...