alex Certify ತ್ವಚೆಯ ಆರೈಕೆಗೆ ಪ್ರತಿದಿನ ಮಲಗುವ ಮುನ್ನ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ವಚೆಯ ಆರೈಕೆಗೆ ಪ್ರತಿದಿನ ಮಲಗುವ ಮುನ್ನ ಮಾಡಿ ಈ ಕೆಲಸ

ಮುಖದ ಹೊಳಪನ್ನು ಕಾಪಾಡಿಕೊಳ್ಳಲು ನಾವು ಸಾಕಷ್ಟು ಕಸರತ್ತು ಮಾಡುತ್ತೇವೆ. ಹತ್ತಾರು ಬಗೆಯ ಉತ್ಪನ್ನಗಳನ್ನು ಬಳಸಿದ್ರೂ ಬಯಸಿದ ಫಲಿತಾಂಶ ಸಿಗುವುದಿಲ್ಲ. ಅದರಲ್ಲೂ ಬೇಸಿಗೆಯಲ್ಲಿ ಸೂರ್ಯನ ಶಾಖ, ಬೆಳಕು, ಬಿಸಿ ಗಾಳಿಯಿಂದ ಸನ್‌ ಬರ್ನ್‌ ಆಗುತ್ತದೆ. ಚರ್ಮದ ಟ್ಯಾನಿಂಗ್ ಸಮಸ್ಯೆ ಉದ್ಭವಿಸುತ್ತದೆ.

ದುಬಾರಿ ಸೌಂದರ್ಯವರ್ಧಕಗಳನ್ನು ಬಳಸಿದ್ರೂ ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಹಾಗಾಗಿ ತ್ವಚೆಯ ಸೌಂದರ್ಯಕ್ಕಾಗಿ ಕೆಲವೊಂದು ಮನೆಮದ್ದುಗಳನ್ನು ಮಾಡಬೇಕು. ಬಿಸಿಲು ಮತ್ತು ಬೆವರಿನಿಂದ ಮುಖವು ನಿರ್ಜೀವವಾದಾಗ ರಾತ್ರಿ ಕೆಲವೊಂದು ರುಟೀನ್‌ ಕ್ರಮಗಳನ್ನು ನೀವು ಅಳವಡಿಸಿಕೊಳ್ಳಬೇಕು.

ನಿಮ್ಮ ಮುಖದ ಹೊಳಪನ್ನು ಮರಳಿ ಪಡೆಯಲು ಕ್ಲೆನ್ಸ್‌ ಮಾಡುವುದು ಅತ್ಯವಶ್ಯ. ಬಿಸಿಲು, ಧೂಳು ಮತ್ತು ಬೆವರಿನಿಂದ ಮುಖದ ಮೇಲೆ ಕೊಳಕು ಸಂಗ್ರಹವಾಗುತ್ತದೆ.  ಆದ್ದರಿಂದ ಮೊದಲು ಕ್ಲೆನ್ಸರ್‌ನಿಂದ ಮುಖವನ್ನು ಚೆನ್ನಾಗಿ ತೊಳೆಯಿರಿ. ನಂತರ ನೀವು ಬೇರೆ ಯಾವುದೇ ಉತ್ಪನ್ನವನ್ನು ಮುಖಕ್ಕೆ ಹಚ್ಚಬಹುದು.

ಕ್ಲೆನ್ಸರ್‌ನಿಂದ ಮುಖ ತೊಳೆದ ನಂತರ ಟೋನರ್ ಬಳಸಬೇಕು. ಇದಕ್ಕೆ  ಆಲ್ಕೋಹಾಲ್ ಮುಕ್ತ ಉತ್ಪನ್ನವನ್ನು ಆಯ್ದುಕೊಳ್ಳಿ. ಹತ್ತಿಗೆ ಕೆಲವು ಹನಿ ಟೋನರ್‌ ಹಾಕಿ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖದ ಶುಷ್ಕತೆ ದೂರವಾಗುತ್ತದೆ. ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚುವುದು ಬಹಳ ಮುಖ್ಯ. ರಾತ್ರಿ ಮಲಗುವ ಮೊದಲು ಮಾಯಿಶ್ಚರೈಸರ್‌ ಹಚ್ಚಬೇಕು. ಏಕೆಂದರೆ ಇದು ಮುಖವನ್ನು ಹೈಡ್ರೇಟ್‌ ಆಗಿರಿಸುತ್ತದೆ. ಚರ್ಮಕ್ಕೆ ತಾಜಾತನವನ್ನು ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...