alex Certify ನಿಮ್ಮ ಮುಖ ತಕ್ಷಣ ಕಾಂತಿಯುತವಾಗಬೇಕೆ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮುಖ ತಕ್ಷಣ ಕಾಂತಿಯುತವಾಗಬೇಕೆ…..?

ಟೊಮೆಟೊ ಸಾಂಬಾರು ಮಾಡುವುದಕ್ಕೆ ಮಾತ್ರವಲ್ಲ. ಸೌಂದರ್ಯ ಹೆಚ್ಚಿಸುವಲ್ಲಿ ಕೂಡ ಇದು ಸಹಾಯಕಾರಿಯಾಗಿದೆ. ಟೊಮೆಟೊದಲ್ಲಿ ವಿಟಮಿನ್ ಎ ಹೇರಳವಾಗಿದೆ. ಇದು ಮುಖದಲ್ಲಿನ ಜಿಡ್ಡಿನಾಂಶವನ್ನು ಕಡಿಮೆ ಮಾಡುತ್ತದೆ. ಟೊಮೆಟೊವನ್ನು ಬಳಸಿ ಸುಲಭವಾಗಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳುವ ವಿಧಾನ ಇಲ್ಲಿದೆ ನೋಡಿ.

ಮೊದಲಿಗೆ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿರಿ. ನಂತರ ಎರಡು ಚಮಚ ಟೊಮೆಟೊ ಹಣ್ಣಿನ ರಸಕ್ಕೆ 2 ಟೀ ಸ್ಪೂನ್ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಹತ್ತಿಯ ಸಹಾಯದಿಂದ ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು ಚೆನ್ನಾಗಿ ಕ್ಲೆನ್ಸಿಂಗ್ ಮಾಡಿಕೊಳ್ಳಿ.

ನಂತರ 2 ಚಮಚ ಟೊಮೆಟೊ ರಸಕ್ಕೆ 1 ಚಮಚ ನಿಂಬೆಹಣ್ಣಿನ ರಸ ಸೇರಿಸಿ ಅದಕ್ಕೆ 2 ಟೀ ಸ್ಪೂನ್ ಅಕ್ಕಿಹಿಟ್ಟು ಸೇರಿಸಿ ಈ ಮಿಶ್ರಣ ದಿಂದ ಮುಖಕ್ಕೆ ನಿಧಾನಕ್ಕೆ ಸ್ಕ್ರಬ್ ಮಾಡಿಕೊಳ್ಳಿ. ಇದಾದ ನಂತರ ಎರಡು ಚಮಚ ಟೊಮೆಟೊ ರಸಕ್ಕೆ 2 ಟೀ ಸ್ಪೂನ್ ಮುಲ್ತಾನಿ ಮಿಟ್ಟಿ, 1 ಟೀ ಸ್ಪೂನ್ ಕಡಲೇಹಿಟ್ಟು, ಸ್ವಲ್ಪ ಲಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದರಿಂದ ಮುಖ ಕಾಂತಿಯುತವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...