alex Certify ಡಯೆಟ್​ಗೆ ನೆರವಾಗುತ್ತೆ ʼಕಾರ್ನ್​​ ಸಲಾಡ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಯೆಟ್​ಗೆ ನೆರವಾಗುತ್ತೆ ʼಕಾರ್ನ್​​ ಸಲಾಡ್ʼ

ಆರೋಗ್ಯ ಅಥವಾ ಸೌಂದರ್ಯ ಕಾರಣ ಏನೇ ಇರಲಿ ಡಯೆಟ್ ಅನ್ನೋದು ಒಂದಕ್ಕೊಂದು ಪೂರಕವಾಗಿಯೇ ಫಲಿತಾಂಶ ನೀಡುತ್ತದೆ. ಆದ್ರೆ ಡಯೆಟ್ ಅನ್ನೋ ನೆಪದಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡದೇ ಹೋದಲ್ಲಿ ಅದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಡಯೆಟ್​ನಲ್ಲಿ ಹಸಿ ತರಕಾರಿಗಳ ಕಾರ್ನ್ ಸಲಾಡ್​ ಇರಲಿ. ಪ್ರೊಟೀನ್, ನಾರಿನಂಶವನ್ನು ಹೊಂದಿರುವ ಈ ಸಲಾಡ್​ ಡಯೆಟ್​ನಿಂದ ಮಂಕಾಗುವ ತ್ವಚೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

ಹಾಗಾದ್ರೆ ಕಾರ್ನ್​ ಸಲಾಡ್ ಮಾಡೋದು ಹೇಗೆ ನೋಡೋಣ ಬನ್ನಿ.

ಮೊದಲಿಗೆ ಒಂದು ಎಳೆ ಸೌತೆಕಾಯಿಯನ್ನು ಸಿಪ್ಪೆ ಸಹಿತ ಸಣ್ಣ ಹೋಳುಗಳಾಗಿ ಹೆಚ್ಚಿಕೊಳ್ಳಿ.

ಬಳಿಕ ಒಂದು ದೊಡ್ಡ ಕ್ಯಾರೆಟ್​ ಅನ್ನು ತುರಿದುಕೊಳ್ಳಿ.

ಆ ನಂತರ ಅರ್ಧ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.

10 ಬೇಬಿ ಟೊಮ್ಯಾಟೊವನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.

ಈಗ ಒಂದು ದೊಡ್ಡ ಬೌಲ್​ಗೆ ಸಣ್ಣದಾಗಿ ಹೆಚ್ಚಿಕೊಂಡ ಸೌತೆಕಾಯಿ, ಈರುಳ್ಳಿ, ಕ್ಯಾರೆಟ್ ತುರಿ, ಒಂದು ಮುಷ್ಟಿಯಷ್ಟು ಹಸಿರು ಮೊಳಕೆಕಾಳು, ಟೊಮ್ಯಾಟೊ ಹೋಳು ಸೇರಿಸಿಕೊಳ್ಳಿ.

ನಂತರ ಇದೇ ಬೌಲ್​ಗೆ ಒಂದು ಬಟ್ಟಲು ಜೋಳದ ಕಾಳುಗಳನ್ನು ಸೇರಿಸಿಕೊಳ್ಳಿ. ನಂತರ 1 ಸ್ಪೂನ್​ನಷ್ಟು ಕೊತ್ತಂಬರಿ ಸೊಪ್ಪನ್ನು ಹಾಕಿಕೊಳ್ಳಬೇಕು. ಬಳಿಕ ಕಾಲು ಚಮಚದಷ್ಟು ಅಚ್ಚಖಾರದ ಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು.

ನಂತರ ಇದಕ್ಕೆ ಒಂದು ನಿಂಬೆ ಹಣ್ಣಿನ ರಸ ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ಆ ನಂತರ ಅರ್ಧ ಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇಷ್ಟಾದ್ರೆ ಡಯೆಟ್​ಗೆ ನೆರವಾಗುವ ಕಾರ್ನ್ ಸಲಾಡ್​ ಸವಿಯಲು ಸಿದ್ಧ.

ಈ ಸಲಾಡ್​ ಸಂಜೆ ಚಾಟ್ ಇಲ್ಲವೇ ಬೆಳಿಗ್ಗೆಯ ಬ್ರೇಕ್​ಫಾಸ್ಟ್​ನಲ್ಲೂ ಸೇವಿಸಬಹುದು. ಜ್ಯೂಸಿ ಮತ್ತು ಟೇಸ್ಟೀ ಸಲಾಡ್​ ನಿಮ್ಮ ಹಸಿವನ್ನು, ತಿನಿಸಿನ ಮೋಹವನ್ನು ಖಂಡಿತಾ ತೃಪ್ತಿಪಡಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...