alex Certify ಡಯೆಟ್ ನಿಂದ ತೂಕ ಇಳಿಸುವವರಲ್ಲಿ ಈ ಲಕ್ಷಣ ಕಂಡು ಬಂದರೆ ತಕ್ಷಣ ನಿಲ್ಲಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಯೆಟ್ ನಿಂದ ತೂಕ ಇಳಿಸುವವರಲ್ಲಿ ಈ ಲಕ್ಷಣ ಕಂಡು ಬಂದರೆ ತಕ್ಷಣ ನಿಲ್ಲಿಸಿ

ಕೆಲವರು ತೂಕ ಇಳಿಸಿಕೊಳ್ಳಲು ಡಯೆಟ್, ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಡಯೆಟ್ ಮೂಲಕ ತೂಕ ಇಳಿಸುತ್ತಿರುವವರಲ್ಲಿ ಈ ಲಕ್ಷಣಗಳು ಕಂಡುಬಂದರೆ ತಕ್ಷಣ ನಿಮ್ಮ ಡಯೆಟ್ ಅನ್ನು ನಿಲ್ಲಿಸಿ, ಇಲ್ಲವಾದರೆ ಗಂಭೀರವಾದ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಕೆಲವರು ಅನೇಕ ವರ್ಷಗಳಿಂದ ಒಂದು ನಿರ್ದಿಷ್ಟವಾದ ಆಹಾರ ಪದ್ಧತಿಯನ್ನು ಅನುಸರಿಸುತ್ತಾ ಬಂದಿರುತ್ತಾರೆ. ಆದರೆ ತೂಕ ಇಳಿಸಲು ಹೊಸ ಆಹಾರ ಕ್ರಮಗಳನ್ನು ಅನುಸರಿಸುವಾಗ ಅವರು ಹಸಿವಿನಿಂದ ಬಳಲುತ್ತಾರೆ ಮತ್ತು ಇದರಿಂದ ಅವರಿಗೆ ತುಂಬಾ ನೋವಾಗುತ್ತಿದ್ದರೆ ಅಂತವರು ತಕ್ಷಣ ಡಯೆಟ್ ನಿಲ್ಲಿಸಿ ಇಲ್ಲವಾದರೆ ಇದರಿಂದ ಮಾನಸಿಕ ರೋಗಗಳು ಕಾಡಬಹುದು.

ಕೆಲವರು ತೂಕ ಇಳಿಸಲು ಡಯೆಟ್ ಮಾಡುವುದರಿಂದ ಹಸಿವಿನಿಂದ ಬಳಲುತ್ತಾರೆ. ಆಗ ಅವರು ಹಸಿವನ್ನು ತಡೆಯಲು ಅತಿಯಾಗಿ ಚಹಾ, ಕಾಫಿ, ನೀರನ್ನು ಕುಡಿಯಲು ಪ್ರಾರಂಭಿಸುತ್ತಾರೆ. ಇದರಿಂದ ನಿಮ್ಮ ದೇಹದಲ್ಲಿ ಕೆಫೀನ್ ಅಂಶ ಹೆಚ್ಚಾಗಿ ಅನಾರೋಗ್ಯ ಸಮಸ್ಯೆ ಕಾಡಬಹುದು. ಹಾಗಾಗಿ ಅಂತವರು ಡಯೆಟ್ ಮಾಡುವುದನ್ನು ನಿಲ್ಲಿಸಿ.

ತೂಕ ನಷ್ಟವಾಗಲು ಡಯೆಟ್ ಮಾಡುವುದು ಅತ್ಯಗತ್ಯ. ಆದರೆ ಕೆಲವರು ಡಯೆಟ್ ಮಾಡಿದರೂ ಕೂಡ ಅವರ ದೇಹದ ತೂಕ ಮತ್ತಷ್ಟು ಹೆಚ್ಚಾಗುತ್ತಿದ್ದರೆ ಅಂತವರು ಡಯೆಟ್ ಮಾಡುವುದನ್ನು ನಿಲ್ಲಿಸಿ. ಇಲ್ಲವಾದರೆ ಇದರಿಂದ ನಿಮ್ಮ ತೂಕ ಹೆಚ್ಚಾಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...