alex Certify ಜಾಕ್ವೆಲಿನ್ ಮಾತ್ರವಲ್ಲ, ಶ್ರದ್ಧಾ ಕಪೂರ್​, ಶಿಲ್ಪಾ ಶೆಟ್ಟಿ ಜೊತೆಗಿನ ನಂಟನ್ನೂ ಬಾಯ್ಬಿಟ್ಟ ವಂಚಕ ಸುಕೇಶ್​ ಚಂದ್ರಶೇಖರ್​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಕ್ವೆಲಿನ್ ಮಾತ್ರವಲ್ಲ, ಶ್ರದ್ಧಾ ಕಪೂರ್​, ಶಿಲ್ಪಾ ಶೆಟ್ಟಿ ಜೊತೆಗಿನ ನಂಟನ್ನೂ ಬಾಯ್ಬಿಟ್ಟ ವಂಚಕ ಸುಕೇಶ್​ ಚಂದ್ರಶೇಖರ್​…..!

200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಸುಕೇಶ್​ ಚಂದ್ರಶೇಖರ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಮಾತ್ರವಲ್ಲದೇ ಶಿಲ್ಪಾಶೆಟ್ಟಿ, ಶ್ರದ್ಧಾ ಕಪೂರ್ ಜೊತೆಯಲ್ಲೂ ಸಂಪರ್ಕ ಹೊಂದಿದ್ದ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.

ಸುಕೇಶ್​ ಚಂದ್ರಶೇಖರ್​ ನೀಡಿರುವ ಹೇಳಿಕೆಯ ಪ್ರಕಾರ ಆತ 2015ರಿಂದ ಶ್ರದ್ಧಾಕಪೂರ್​ ಜೊತೆ ಸಂಪರ್ಕ ಹೊಂದಿದ್ದಾರೆ ಹಾಗೂ ಮಾದಕ ದ್ರವ್ಯ ನಿಯಂತ್ರಣ ಪ್ರಕರಣದಲ್ಲಿ ಶೃದ್ಧಾಗೆ ತಾನು ಸಹಾಯ ಮಾಡಿದ್ದಾಗಿ ಹೇಳಿದ್ದಾರೆ.

ಉಳಿದ ಬಾಲಿವುಡ್​ ಸೆಲೆಬ್ರಿಟಿಗಳ ಜೊತೆಯಲ್ಲಿ ಸಂಪರ್ಕ ಇರುವ ಬಗ್ಗೆ ಇಡಿ ಮುಂದೆ ಬಾಯ್ಬಿಟ್ಟಿರುವ ಸುಕೇಶ್​ ಚಂದ್ರಶೇಖರ್​, ನನಗೆ ನಟ ಹರ್ಮಾನ್​ ಬವೇಜಾ ಕೂಡ ಪರಿಚಯಸ್ಥರಾಗಿದ್ದು ಅವರ ಜೊತೆಯಲ್ಲಿ ಕ್ಯಾಪ್ಟನ್​ ಎಂಬ ಸಿನಿಮಾವನ್ನು ಸಹ ನಿರ್ಮಾಣ ಮಾಡಲು ಪ್ಲಾನ್​ ಮಾಡಿದ್ದ ಎನ್ನಲಾಗಿದೆ. ಈ ಸಿನಿಮಾಗೆ ಕಾರ್ತಿಕ್​ ಆರ್ಯನ್​​ರನ್ನು ನಾಯಕ ನಟನನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಇನ್ನು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ರಾಜ್​​​ಕುಂದ್ರಾಗೆ ಜಾಮೀನು ನೀಡುವ ವಿಚಾರದಲ್ಲಿ ನಟಿ ಶಿಲ್ಪಾ ಶೆಟ್ಟಿ ಜೊತೆಯೂ ಸಂಪರ್ಕ ಸಾಧಿಸಿದ್ದಾಗಿ ಸುಕೇಶ್​ ಚಂದ್ರಶೇಖರ್​ ಹೇಳಿದ್ದಾನೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...