alex Certify ನಾನು ಬಲಿಪಶು, ಶಿಲ್ಪಾ ಶೆಟ್ಟಿ ಗಂಡನಾಗಿದ್ದಕ್ಕೆ ಬೆಲೆ ತೆತ್ತಿದ್ದೇನೆ; ರಾಜ್ ಕುಂದ್ರಾ ಸ್ಪೋಟಕ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಬಲಿಪಶು, ಶಿಲ್ಪಾ ಶೆಟ್ಟಿ ಗಂಡನಾಗಿದ್ದಕ್ಕೆ ಬೆಲೆ ತೆತ್ತಿದ್ದೇನೆ; ರಾಜ್ ಕುಂದ್ರಾ ಸ್ಪೋಟಕ ಹೇಳಿಕೆ

ನೀಲಿಚಿತ್ರ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪ್ರಕರಣದಲ್ಲಿ ನಾನು ಬಲಿಪಶುವಷ್ಟೇ ಎಂದಿದ್ದಾರೆ. ತಮ್ಮ ಮುಂಬರುವ ಚೊಚ್ಚಲ ಚಿತ್ರ UT 69 ಪ್ರಚಾರದಲ್ಲಿ ನಿರತರಾಗಿರುವ ಅವರು ಸಿಎನ್‌ಎನ್ ನ್ಯೂಸ್ 18 ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. UT 69 ಸಿನಿಮಾ, ನೀಲಿ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ 2022 ರಲ್ಲಿ ಜೈಲಿನಲ್ಲಿ ಕಳೆದ ದಿನಗಳನ್ನಾಧರಿಸಿದ ಚಿತ್ರವಾಗಿದೆ.

ಈ ಚಿತ್ರದ ಬಿಡುಗಡೆಗೂ ಮುನ್ನ ಸಿಎನ್‌ಎನ್ ನ್ಯೂಸ್ 18 ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ರಾಜ್ ಕುಂದ್ರಾ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. “ಈ ಎಲ್ಲಾ ಪ್ರಕರಣದಲ್ಲೂ ನಾನು ಬಲಿಪಶು. ಬಹಳಷ್ಟು ಮಾಹಿತಿಯನ್ನು ತಪ್ಪಾಗಿ ಅರ್ಥೈಸಲಾಗಿದೆ. ವಾಸ್ತವಿಕ ಮಾಹಿತಿಯನ್ನು ಸರಿಯಾಗಿ ತಿಳಿಸಿಲ್ಲ”ಎಂದು ಸಿಎನ್‌ಎನ್ ನ್ಯೂಸ್ 18 ಗೆ ತಿಳಿಸಿದರು. ನಾನು ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಎಂಬ ಕಾರಣಕ್ಕೆ ಪ್ರಕರಣ ಕಣ್ಣಿಗೆ ರಾಚಿದೆ. ಅದೇ ಹೆಚ್ಚು ಸುದ್ದಿಯಾಗಿದೆ ಎಂದು ಹೇಳಿದರು.

“ಸೆಲೆಬ್ರಿಟಿ ಪತಿಯಾದ ಕಾರಣ ಇದು ನಾನು ಪಾವತಿಸಿದ ಬೆಲೆ ಎಂದು ಭಾವಿಸುತ್ತೇನೆ. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಈ ಬೆಲೆಯನ್ನು ಮತ್ತೆ ಮತ್ತೆ ತೆರಲೇಬೇಕಾಗುತ್ತದೆ. ಏಕೆಂದರೆ ಶಿಲ್ಪಾಶೆಟ್ಟಿ ನನ್ನ ಜೀವನದ ಪ್ರೀತಿ. ನಾನು ಶಿಲ್ಪಾಶೆಟ್ಟಿಯ ಗಂಡನಾಗಿರದೇ ಇದ್ದಿದ್ದರೆ ಅದೊಂದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ ಎಂಬುದು ಅವಳಿಗೂ ಗೊತ್ತು. ನಾನು ಆರೋಪಗಳಿಗೆ ತಪ್ಪಿತಸ್ಥನಲ್ಲ ಎಂದು ನನಗೆ ತಿಳಿದಿದೆ ಮತ್ತು ನ್ಯಾಯ ಸಿಕ್ಕಾಗ ಅದು ನನ್ನ ವಿಮೋಚನೆ ಎಂದು ನನಗೆ ತಿಳಿದಿದೆ, ”ಎಂದು ರಾಜ್ ಕುಂದ್ರಾ ಹೇಳಿದ್ದಾರೆ.

ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ 2009 ರಲ್ಲಿ ವಿವಾಹವಾದರು. ಅವರಿಗೆ ವಿಯಾನ್ ಮತ್ತು ಸಮೀಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ರಾಜ್ ಕುಂದ್ರಾ ಅವರನ್ನು ಜುಲೈ 2021 ರಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಅಶ್ಲೀಲ ಚಲನಚಿತ್ರಗಳನ್ನು ರಚಿಸಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಬಂಧಿಸಲಾಯಿತು. ಸುಮಾರು ಎರಡು ತಿಂಗಳ ನಂತರ ಅವರಿಗೆ ಜಾಮೀನು ಸಿಕ್ಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...