alex Certify ಚರ್ಮ ಸುಕ್ಕುಗಟ್ಟುವುದನ್ನು ತಡೆಗಟ್ಟುತ್ತೆ ʼಆಕ್ಸಿಜನ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಮ ಸುಕ್ಕುಗಟ್ಟುವುದನ್ನು ತಡೆಗಟ್ಟುತ್ತೆ ʼಆಕ್ಸಿಜನ್ʼ

ಉಸಿರಾಡಲು ಆಕ್ಸಿಜನ್ ಹೇಗೆ ತುಂಬಾ ಮುಖ್ಯನೋ ಹಾಗೇ ಚರ್ಮದ ಪೋಷಣೆಗೂ ಆಕ್ಸಿಜನ್ ಅಷ್ಟೇ ಮುಖ್ಯ. ಇದರಿಂದ ಚರ್ಮಕ್ಕೆ ಹಲವು ಪ್ರಯೋಜನಗಳಿವೆ. ಹಾಗಾಗಿ ಆಕ್ಸಿಜನ್ ಚರ್ಮವನ್ನು ಹೇಗೆ ಪೋಷಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ.

*ಆಕ್ಸಿಜನ್ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಇದರಿಂದ ಚರ್ಮದ ಮೇಲಿನ ಧೂಳು, ಕೊಳಕು, ಮಾಲಿನ್ಯಗಳು ನಿವಾರಣೆಯಾಗುತ್ತವೆ. ಇದರಿಂದ ಚರ್ಮ ಆರೋಗ್ಯವಾಗಿರುತ್ತದೆ.

*ಹೆಚ್ಚಾಗಿ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ, ಆಹಾರದಲ್ಲಿನ ಏರಿಳಿತದಿಂದ, ಒತ್ತಡದಿಂದ ಚರ್ಮ ಕೋಶಗಳು ಸಾಯುತ್ತವೆ. ಈ ಚರ್ಮ ಕೋಶಗಳು ಹೊಸದಾಗಿ ಉತ್ಪತ್ತಿಯಾಗಲು ಮತ್ತು ದುರ್ಬಲವಾದ ಚರ್ಮಕೋಶಗಳು ಪುನರ್ ಚೇತನಗೊಳ್ಳಲು ಆಕ್ಸಿಜನ್ ಅತಿ ಅವಶ್ಯಕ.

*ಚರ್ಮದ ಯೌವನವನ್ನು ಕಾಪಾಡಲು ಸಹಾಯಕವಾಗುವ ಪ್ರೋಟೀನ್ ಅಂಶಗಳು ಉತ್ಪಾದನೆಯಾಗಲು ಆಕ್ಸಿಜನ್ ಅತಿ ಅವಶ್ಯಕ. ಆಕ್ಸಿಜನ್ ಸರಿಯಾದ ಪ್ರಮಾಣದಲ್ಲಿ ದೊರೆತರೆ ಚರ್ಮ ಸುಕ್ಕುಗಟ್ಟುವುದನ್ನು ತಡೆಯಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...