alex Certify ಗಾರ್ಡ್‌ ಒತ್ತೆ ಇಟ್ಟುಕೊಂಡು ಹೆಲಿಕಾಪ್ಟರ್‌ ಗೆ ಬೇಡಿಕೆಯಿಟ್ಟ ಖೈದಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾರ್ಡ್‌ ಒತ್ತೆ ಇಟ್ಟುಕೊಂಡು ಹೆಲಿಕಾಪ್ಟರ್‌ ಗೆ ಬೇಡಿಕೆಯಿಟ್ಟ ಖೈದಿಗಳು

ಸ್ವೀಡನ್‌ನ ಎಸ್ಕಿಲ್ಸ್ಟುನಾ ಬಳಿ ಇರುವ ಜೈಲೊಂದರಲ್ಲಿ ಬಂಧಿಗಳಾಗಿರುವ ಇಬ್ಬರು ಪ್ರಳಯಾಂತಕ ಖೈದಿಗಳು ಕಾರಾಗೃಹದ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು ಪಿಜ್ಜಾಗೆ ಬೇಡಿಕೆ ಇಟ್ಟಿದ್ದಾರೆ. 24 ವರ್ಷದ ಹನೆದ್ ಮೊಹಮ್ಮದ್ ಅಬ್ದುಲ್ಲಾಹಿ ಹಾಗೂ 30 ವರ್ಷದ ಇಸಾಕ್ ದೇವಿತ್‌ ಎಂದು ಈ ಇಬ್ಬರು ಖೈದಿಗಳನ್ನು ಗುರುತಿಸಲಾಗಿದೆ.

ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದ ಜೈಲು ಆಡಳಿತದ ವಕ್ತಾರೆ ಸ್ಟಿನಾ ಲಿಲ್ಸ್‌, 20 ಪಿಜ್ಜಾಗಳನ್ನು ಈ ಖೈದಿಗಳಿಗೆ ಕೊಟ್ಟ ಬಳಿಕ ಭದ್ರತಾ ಸಿಬ್ಬಂದಿಯನ್ನು ಒತ್ತೆಯಿಂದ ಬಿಡುಗಡೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

BIG NEWS: 6 ತಿಂಗಳಾದರೂ ಯಡಿಯೂರಪ್ಪನವರನ್ನು ಮುಂದುವರಿಸಿ; ಮಠಾಧೀಶರ ಮಾತು ಗೌರವಿಸಿ; ಹೈಕಮಾಂಡ್ ಗೆ ಮತ್ತೆ ಎಚ್ಚರಿಕೆ ನೀಡಿದ ಸ್ವಾಮೀಜಿಗಳು

ಕೊಲೆ ಅಪರಾಧವೊಂದರಲ್ಲಿ ತಪ್ಪಿತಸ್ಥರಾಗಿರುವ ಈ ಇಬ್ಬರು ಖೈದಿಗಳು ಸ್ಟಾಕ್‌ಹೋಂನಿಂದ 70 ಮೈಲಿ ಪಶ್ಚಿಮಕ್ಕಿರುವ ಈ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಭದ್ರತಾ ಸಿಬ್ಬಂದಿ ಇರುವ ಜಾಗಕ್ಕೆ ನುಸುಳಿ ಬಂದ ಈ ಇಬ್ಬರೂ, ಅಲ್ಲಿದ್ದ ಇಬ್ಬರು ಗಾರ್ಡ್‌ಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ. ಆ ವೇಳೆ ರೇಜ಼ರ್‌ ಬ್ಲೇಡ್‌ಗಳನ್ನು ಇಟ್ಟುಕೊಂಡಿದ್ದ ಈ ಖೈದಿಗಳು ಒತ್ತೆಯಾಳುಗಳೊಂದಿಗೆ ಜೈಲಿನ ಕೋಣೆಯೊಂದಕ್ಕೆ ಲಾಕ್‌ ಆಗಿದ್ದಾರೆ.

ಗಾರ್ಡ್‌ಗಳ ಬಿಡುಗಡೆಗೆ ಇಟ್ಟ ಡಿಮ್ಯಾಂಡ್‌ನಲ್ಲಿ ಹೆಲಿಕಾಪ್ಟರ್‌ ಒಂದನ್ನು ತರಬೇಕೆಂದ ಈ ಖೈದಿಗಳು, ಅದರಲ್ಲಿ ತಂತಮ್ಮ ಮನೆಗಳಿಗೆ ಹೋಗಬೇಕೆಂದಿದ್ದಾರೆ. ಇವರ ಎರಡನೇ ಬೇಡಿಕೆಯಾಗಿದ್ದ ಪಿಜ್ಜಾಗಳನ್ನು ಅಲ್ಲಿದ್ದ ಎಲ್ಲಾ ಖೈದಿಗಳಿಗೆ ಪೂರೈಸಿದ ಜೈಲಿನ ಆಡಳಿತ, ಗಾರ್ಡ್‌ಗಳನ್ನು ಬಿಡಿಸಿಕೊಂಡಿದೆ. ವಿಶೇಷ ಘಟಕದ ಪೊಲೀಸರು ಈ ಇಬ್ಬರು ಖೈದಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...