alex Certify ಕೊಚ್ಚಿಯ ಜನನಿಬಿಡ ರಸ್ತೆಯಲ್ಲಿ ಹೆಬ್ಬಾವು ಪ್ರತ್ಯಕ್ಷ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಚ್ಚಿಯ ಜನನಿಬಿಡ ರಸ್ತೆಯಲ್ಲಿ ಹೆಬ್ಬಾವು ಪ್ರತ್ಯಕ್ಷ: ವಿಡಿಯೋ ವೈರಲ್

ಕೊಚ್ಚಿ: ಕೊಚ್ಚಿಯ ಕಲಮಸ್ಸೆರಿಯ ಜನನಿಬಿಡ ಸೀಪೋರ್ಟ್-ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾನುವಾರ ರಾತ್ರಿ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದ್ದು, ಕೆಲಹೊತ್ತು ಸಂಚಾರ ಸ್ಥಗಿತಗೊಂಡಿದೆ.

ಸುಮಾರು ಎರಡು ಮೀಟರ್ ಉದ್ದದ ಬೃಹತ್ ಹೆಬ್ಬಾವು ರಾತ್ರಿ 11.10 ರ ಸುಮಾರಿಗೆ ಕೆಎಸ್‌ಇಬಿ ಕಚೇರಿಯ ಸಮೀಪವಿರುವ ರಸ್ತೆಯಲ್ಲಿ ನಿಧಾನವಾಗಿ ಸಾಗಿದೆ. ಇದನ್ನು ನೋಡಿದ ದಾರಿಹೋಕರು, ವಾಹನ ಸವಾರರು ಹೆಬ್ಬಾವಿನ ಫೋಟೋ ಮತ್ತು ವಿಡಿಯೋಗಳನ್ನು ಕ್ಲಿಕ್ಕಿಸಿದ್ದಾರೆ.

ಸೀಪೋರ್ಟ್-ಏರ್‌ಪೋರ್ಟ್ ರಸ್ತೆಯ ಮೂಲಕ ಹೆಬ್ಬಾವು ತೆವಳುತ್ತಾ ಸಾಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಜನರು ಅದನ್ನು ತನ್ನ ಪಾಡಿಗೆ ಹಾದುಹೋಗಲು ಬಿಟ್ಟು ತಾಳ್ಮೆಯಿಂದ ಕಾದಿದ್ದಾರೆ.

ಹಾವು ರಸ್ತೆ ದಾಟಲು ಸುಮಾರು ನಾಲ್ಕೈದು ನಿಮಿಷಗಳನ್ನು ತೆಗೆದುಕೊಂಡಿದ್ದು, ಜನರು ಅದು ರಸ್ತೆಯಿಂದ ಪಕ್ಕಕ್ಕೆ ಚಲಿಸುವವರೆಗೆ ಕಾಯುತ್ತಿದ್ದರು.

ಮುಂದೆ ಸಾಗುವ ಯಾವುದೇ ವಾಹನಕ್ಕೆ ಸರೀಸೃಪ ಸಿಲುಕದಂತೆ ಅಲ್ಲಿದ್ದ ಕೆಲವು ಜನರು ರಸ್ತೆಯ ಮಧ್ಯದಲ್ಲಿ ನಿಂತು ರಕ್ಷಿಸಿದ್ದರು. ನಂತರ ಹೆಬ್ಬಾವು ರಸ್ತೆ ಬದಿಯ ಪೊದೆಗಳಲ್ಲಿ ಕಣ್ಮರೆಯಾಗಿದೆ.

ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ವಾರಕ್ಕೆ ಎರಡು ಅಥವಾ ಮೂರು ಬಾರಿ ಹೆಬ್ಬಾವುಗಳನ್ನು ರಕ್ಷಿಸಲು ಕರೆಗಳು ಬರುತ್ತವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕೊಚ್ಚಿಯಲ್ಲಿ ಹೆಬ್ಬಾವು ಹೆಚ್ಚಾಗಿ ಪತ್ತೆ ಆಗುತ್ತಿದೆ. ಕೊಚ್ಚಿಯು ವಿಶಾಲವಾದ ಜವುಗು ಭೂಮಿಯನ್ನು ಹೊಂದಿರುವುದರಿಂದ, ಹೆಬ್ಬಾವುಗಳು ಇಲ್ಲಿ ನೆಲೆ ಕಂಡುಕೊಂಡಿವೆ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...