alex Certify ಕಾರುಗಳು ದುಬಾರಿಯಾಗ್ತಿರುವಾಗ್ಲೇ ಗ್ರಾಹಕರಿಗೆ ಬಿಗ್‌ ಗಿಫ್ಟ್‌ ನೀಡಿದ ಹ್ಯುಂಡೈ; ಜನಪ್ರಿಯ ಕಾರಿನ ಬೆಲೆ ಕಡಿತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರುಗಳು ದುಬಾರಿಯಾಗ್ತಿರುವಾಗ್ಲೇ ಗ್ರಾಹಕರಿಗೆ ಬಿಗ್‌ ಗಿಫ್ಟ್‌ ನೀಡಿದ ಹ್ಯುಂಡೈ; ಜನಪ್ರಿಯ ಕಾರಿನ ಬೆಲೆ ಕಡಿತ….!

ಭಾರತದಲ್ಲಿ ಕಾರು ತಯಾರಕ ಕಂಪನಿಗಳು ವಾಹನಗಳ ಬೆಲೆ ಹೆಚ್ಚಿಸುತ್ತಲೇ ಇವೆ. ಆದ್ರೆ ಹುಂಡೈ ಕಂಪನಿ ಮಾತ್ರ ತನ್ನ ಜನಪ್ರಿಯ ಕಾರಿನ ಬೆಲೆಯನ್ನು ಕಡಿತಗೊಳಿಸಿದೆ. ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಹ್ಯುಂಡೈ i20 ಹ್ಯಾಚ್‌ಬ್ಯಾಕ್‌ನ ಸ್ಪೋರ್ಟ್ಸ್ ಆವೃತ್ತಿಯ ಬೆಲೆ ಬದಲಾಗಿದೆ. ಹ್ಯುಂಡೈ ಐ20 ಸ್ಪೋರ್ಟ್ಸ್‌ ರೂಪಾಂತರದ ದರ 3,500 ರೂಪಾಯಿಯಷ್ಟು ಅಗ್ಗವಾಗಿದೆ.

ಬೆಲೆ ಬದಲಾವಣೆಯ ನಂತರ i20 Sportz ಬೆಲೆ 8.05 ಲಕ್ಷ ರೂಪಾಯಿ. i20 Sportz IVT ಬೆಲೆ 9.07 ಲಕ್ಷ ರೂಪಾಯಿ.ಸಬ್-4 ಮೀಟರ್ ಎಸ್‌ಯುವಿಗಳಿಂದ ತೀವ್ರ ಸ್ಪರ್ಧೆಯ ಹೊರತಾಗಿಯೂ ಹ್ಯುಂಡೈ ಐ20 ಕಾರು ಸಾಕಷ್ಟು ಸಂಖ್ಯೆಯಲ್ಲಿ ಮಾರಾಟವಾಗ್ತಿದೆ.

ಆದರೆ ಹಠಾತ್ ಬೆಲೆ ಕಡಿತಕ್ಕೆ ಇದು ಕಾರಣವಲ್ಲ. ವಾಸ್ತವವಾಗಿ ಹ್ಯುಂಡೈ ಕಂಪನಿ ಅದರಲ್ಲಿ ಒಂದು ವೈಶಿಷ್ಟ್ಯವನ್ನು ಕಡಿತಗೊಳಿಸಿದೆ. ಹ್ಯುಂಡೈ ಈ ರೂಪಾಂತರದಿಂದ ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್ ವೈಶಿಷ್ಟ್ಯವನ್ನು ತೆಗೆದುಹಾಕಿದೆ ಮತ್ತು ಹೀಟರ್‌ನೊಂದಿಗೆ ಸಾಂಪ್ರದಾಯಿಕ ಮ್ಯಾನ್ಯುವಲ್ ಎಸಿಗೆ ಬದಲಾಯಿಸಿದೆ.

ಕೆಲವು ಗ್ರಾಹಕರಿಗೆ ಇದು ಸಾಮಾನ್ಯವಾಗಿದ್ದರೆ, ಕೆಲವು ಗ್ರಾಹಕರನ್ನು ನಿರಾಸೆಗೊಳಿಸಬಹುದು.ಹುಂಡೈ i20 ಸ್ಪೋರ್ಟ್ಸ್ ಟ್ರಿಮ್ ಮಟ್ಟವು ಎರಡು ಆಯ್ಕೆಗಳೊಂದಿಗೆ ಬರುತ್ತದೆ. ಇದು 1.2-ಲೀಟರ್ ಎಂಜಿನ್ ಅನ್ನು ಪಡೆಯುತ್ತದೆ. ಅದು 81.8bhp ಪವರ್ ಮತ್ತು 114.7Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ iVT ಗೇರ್‌ಬಾಕ್ಸ್ ಅನ್ನು ಸಹ ನೀಡಲಾಗಿದೆ. ಎರಡನೇ ಎಂಜಿನ್ 1.0-ಲೀಟರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಆಗಿದ್ದು, ಇದು 118.4bhp ಪೀಕ್ ಪವರ್ ಮತ್ತು 172Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...