alex Certify ಒಳ್ಳೆಯ ನಿದ್ರೆ ನಿಮ್ಮದಾಗಬೇಕು ಅಂದ್ರೆ ಮಾಡಬೇಕಾದ್ದೇನು…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಳ್ಳೆಯ ನಿದ್ರೆ ನಿಮ್ಮದಾಗಬೇಕು ಅಂದ್ರೆ ಮಾಡಬೇಕಾದ್ದೇನು…..?

ದೀರ್ಘಕಾಲಿಕ ಅನಿದ್ರತೆಗೆ ವೈದ್ಯಕೀಯ ಚಿಕಿತ್ಸೆಯನ್ನು ಹೊರತುಪಡಿಸಿದರೆ ಪರ್ಯಾಯವೇನಿಲ್ಲ. ಆದರೆ ತಾತ್ಕಾಲಿಕವಾಗಿ ಎದುರಾಗುವ ಅಕ್ಯೂಟ್ ಇನ್ಸೊಮ್ನಿಯವನ್ನು ಕೆಲವು ಕ್ರಮಗಳನ್ನು ಅನುಸರಿಸಿ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. ಜೀವನ ಶೈಲಿಯಲ್ಲಿ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿಕೊಂಡರೆ ಪ್ರಶಾಂತವಾಗಿ ನಿದ್ರಿಸಬಹುದು.

* ಪ್ರತಿದಿನವೂ ರಾತ್ರಿ ವೇಳೆ ನಿರ್ದಿಷ್ಟ ಸಮಯಕ್ಕೆ ಮಲಗಲು ಪ್ರಯತ್ನಿಸಿರಿ. ನಿದ್ರೆ ಬರುವುದಿದ್ದರೂ, ಬಾರದಿದ್ದರೂ ನಿರ್ದಿಷ್ಟ ಸಮಯಕ್ಕೆ ಹಾಸಿಗೆಯನ್ನು ಆಶ್ರಯಿಸಿರಿ.

* ಸಾಯಂಕಾಲದ ಸಮಯದಲ್ಲಿ ಕುಟುಂಬದ ಸದಸ್ಯರೊಂದಿಗೆ ಗಂಭೀರ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ಇಲ್ಲವೇ ಜಗಳ ಮಾಡುವಂತಹ ಸಂದರ್ಭಗಳನ್ನು ದೂರ ಮಾಡಿ.

* ರಾತ್ರಿ ವೇಳೆ ಹೊಟ್ಟೆ ಬಿರಿಯುವಂತೆ ಅತಿಯಾಗಿ ಭೋಜನ ಮಾಡುವುದು ಬೇಡ. ಊಟ ಅತಿಯಾದರೆ ನಿದ್ರೆ ಹಿಡಿಯುವುದು ಕಷ್ಟವಾಗುತ್ತದೆ.

* ಅನಿದ್ರತೆಯು ಕಾಟ ಕೊಡುತ್ತಿದ್ದರೆ, ಹಗಲು ಹೊತ್ತು ನಿದ್ರೆ ಮಾಡಬಹುದು. ಹಗಲು ನಿದ್ರೆಯೇ ರೂಢಿಯಾದರೆ ರಾತ್ರಿ ವೇಳೆ ನಿದ್ರೆ ಹಾಳಾಗುವ ಸಾಧ್ಯತೆ ಇರುತ್ತದೆ.

* ನಿದ್ರೆಗೆ ಉಪಕ್ರಮಿಸುವ ಮೊದಲು ಕನಿಷ್ಠ ಒಂದು ಗಂಟೆ ಮುನ್ನ ಟಿವಿ, ಲ್ಯಾಪ್ ಟಾಪ್, ಕಂಪ್ಯೂಟರ್ಗಳನ್ನು ನೋಡುವುದಕ್ಕೆ ಬ್ರೇಕ್ ಹಾಕಿ. ಅತ್ಯವಶ್ಯಕವೆನಿಸದಿದ್ದರೆ ಮೊಬೈಲ್ ಗಳನ್ನು ಆ ಸಮಯದಲ್ಲಿ ಉಪಯೋಗಿಸಬಾರದು.

* ನಿದ್ರೆಗೆ ಜಾರುವ ಅರ್ಧ ಗಂಟೆಯ ಮುನ್ನ ಉಗುರು ಬೆಚ್ಚಗಿನ ಹಾಲನ್ನು ಕುಡಿಯಿರಿ.

* ನಿದ್ರೆ ಹೋಗುವ ಸಮಯದಲ್ಲಿ ಮನೆಯಲ್ಲಿ ಕರ್ಕಶ ಶಬ್ದಗಳು ಇರದಂತೆ ಎಚ್ಚರ ವಹಿಸಿ. ಮನೆಯ ಅಕ್ಕಪಕ್ಕದಲ್ಲಿ ಇಂತಹ ಶಬ್ದಗಳು ಉಂಟಾಗದಂತೆ ತಿಳಿಸಿರಿ.

* ನಿದ್ರೆಗೆ ಹೋಗುವ ಮೊದಲು ಯಾವುದಾದರೂ ಒಳ್ಳೆಯ ಪುಸ್ತಕ ಓದುವುದು, ಸಂಗೀತ ಆಲಿಸುವುದು, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವಂತಹವುಗಳಿಂದ ನಿದ್ರೆ ಹಾಯಾಗಿ ಬರುತ್ತದೆ.

* ಬೆಡ್ ರೂಮಿನಲ್ಲಿ ಮಂದ ಬೆಳಕಿನ ವಿನಾ ಮತ್ಯಾವ ಬೆಳಕು ಇರಬಾರದು. ಹೆಚ್ಚಿನ ಬೆಳಕು ನಿದ್ರೆಗೆ ಭಂಗ ತರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...