alex Certify ಐಸಿಸಿ ವರ್ಷದ ಉತ್ತಮ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಪಟ್ಟಿಯಲ್ಲಿ ಭಾರತದ ಏಕೈಕ ಆಟಗಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಸಿಸಿ ವರ್ಷದ ಉತ್ತಮ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಪಟ್ಟಿಯಲ್ಲಿ ಭಾರತದ ಏಕೈಕ ಆಟಗಾರ

ಐಸಿಸಿ ವರ್ಷದ ಉತ್ತಮ ಟೆಸ್ಟ್ ಕ್ರಿಕೆಟಿಗ ನಾಮನಿರ್ದೇಶಿತ ಪಟ್ಟಿಯಲ್ಲಿ ಭಾರತದ ಆರ್. ಆಶ್ವಿನ್ ಸ್ಥಾನ ಪಡೆದಿದ್ದು, ಈ ಪಟ್ಟಿಯಲ್ಲಿ ನಾಲ್ವರು ಅಂತಿಮವಾಗಿ ಉಳಿದಿದ್ದಾರೆ. ಈ ಪೈಕಿ ಓರ್ವ ಆಟಗಾರನಿಗೆ ಮಾತ್ರ ಪ್ರಶಸ್ತಿ ಸಿಗಲಿದೆ.

ಪಟ್ಟಿಯಲ್ಲಿ ಭಾರತದ ಆರ್. ಅಶ್ವಿನ್, ದಿಮುತ್ ಕರುಣಾರತ್ನೆ, ಜೋ ರೂಟ್, ಕೈಲ್ ಜೇಮಿಸನ್ ಇದ್ದಾರೆ. ಈ ನಾಲ್ವರಲ್ಲಿ ಒಬ್ಬ ಆಟಗಾರನಿಗೆ ಐಸಿಸಿ ವರ್ಷದ ಪುರುಷ ಆಟಗಾರ ಎಂದು ಪ್ರಶಸ್ತಿ ನೀಡಲಾಗುತ್ತದೆ. ಈ ನಾಲ್ವರು ಆಟಗಾರರ ಪ್ರದರ್ಶನದ ಅವಲೋಕನ ನಡೆಸಿ, ವರ್ಷದ ಉತ್ತಮ ಟೆಸ್ಟ್ ಕ್ರಿಕೆಟಿಗ ಎಂಬ ಪ್ರಶಸ್ತಿಯನ್ನು ಐಸಿಸಿ ನೀಡುತ್ತದೆ.

ಈ ಪಟ್ಟಿಯಲ್ಲಿ ನಾಲ್ವರ ಹೆಸರು ಅಂತಿಮವಾಗಿ ಉಳಿದಿದ್ದು, ಇಬ್ಬರು ಆಲ್ ರೌಂಡರ್ ಹಾಗೂ ಇಬ್ಬರು ಬ್ಯಾಟ್ಸಮನ್ ಗಳು ಉಳಿದಿದ್ದಾರೆ. ಆರ್. ಅಶ್ವಿನ್ ಹಾಗೂ ಕೈಲ್ ಜೇಮಿಸನ್ ಆಲ್ ರೌಂಡರ್ ಪ್ರದರ್ಶನದಡಿ ಪಟ್ಟಿಯಲ್ಲಿ ಉಳಿದಿದ್ದಾರೆ. ಶ್ರೀಲಂಕಾದ ದಿಮುತ್ ಕರುಣಾರತ್ನೆ ಹಾಗೂ ಜೋ ರೂಟ್ ಬ್ಯಾಟಿಂಗ್ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪೋಸ್ಟರ್ ಹರಿದವನಿಗೆ ಗೂಸಾ

ಆರ್. ಅಶ್ವಿನ್ ಈ ವರ್ಷ ಉತ್ತಮ ಆಲ್ ರೌಂಡರ್ ಆಟ ಪ್ರದರ್ಶಿಸಿದ್ದು, 8 ಟೆಸ್ಟ್ ಪಂದ್ಯಗಳಲ್ಲಿ 337 ರನ್ ಗಳಿಸಿ 52 ವಿಕೆಟ್ ಕಿತ್ತಿದ್ದಾರೆ. ಶ್ರೀಲಂಕಾದ ದಿಮುತ್ ಕರುಣಾರತ್ನೆ ಈ ವರ್ಷ 7 ಟೆಸ್ಟ್‌ ಗಳನ್ನು ಆಡಿ, 902 ರನ್ ಗಳನ್ನು ಗಳಿಸಿದ್ದಾರೆ. 70ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಇವರು, 4 ಶತಕಗಳನ್ನು ಗಳಿಸಿದ್ದಾರೆ.

ಇಂಗ್ಲೆಂಡ್ ನಾಯಕ ಜೋ ರೂಟ್ ಈ ವರ್ಷ 15 ಟೆಸ್ಟ್ ಗಳನ್ನು ಆಡಿ 61ರ ಸರಾಸರಿಯಲ್ಲಿ ಬರೋಬ್ಬರಿ 1,708 ರನ್ ಸಿಡಿಸಿದ್ದು, ಇದರಲ್ಲಿ 4 ಅರ್ಧ ಶತಕ, 6 ಶತಕಗಳನ್ನು ಇವೆ.

ನ್ಯೂಜಿಲೆಂಡ್ ಆಲ್‌ರೌಂಡರ್‌ ಜೇಮಿನ್ಸನ್ 5 ಟೆಸ್ಟ್ ಪಂದ್ಯಗಳಲ್ಲಿ ಬೌಲ್ ಮಾಡಿ 27 ವಿಕೆಟ್ ಗಳನ್ನು ಕಿತ್ತಿದ್ದಾರೆ. ಅಲ್ಲದೇ, 105 ರನ್‌ ಗಳಿಸಿದ್ದಾರೆ. ಈ ನಾಲ್ವರ ಪೈಕಿ ಓರ್ವರನ್ನು ಐಸಿಸಿ ಟೆಸ್ಟ್ ಆಟಗಾರ ಎಂದು ಆಯ್ಕೆ ಮಾಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...