alex Certify ಉದ್ಯೋಗ ಬೋರ್‌ ಆಗ್ತಿದೆ ಎಂದು ಮಾಲೀಕರ ವಿರುದ್ದ ಕೇಸ್‌ ಹಾಕಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗ ಬೋರ್‌ ಆಗ್ತಿದೆ ಎಂದು ಮಾಲೀಕರ ವಿರುದ್ದ ಕೇಸ್‌ ಹಾಕಿದ ಭೂಪ…!

Man sues employer over 'boring job' and wins caseಪ್ರಪಂಚದಾದ್ಯಂತ ಕೋಟ್ಯಂತರ ಮಂದಿ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುತ್ತಾರೆ. ತಾವು ಮಾಡುತ್ತಿರುವ ಕೆಲಸವು ಏಕತಾನತೆಯಿಂದ ಕೂಡಿದೆ ಮತ್ತು ತುಂಬಾ ನೀರಸವಾಗಿದೆ  ಎಂದು ಹಲವರು ಬೇಸರ ವ್ಯಕ್ತಪಡಿಸುತ್ತಾರೆ. ಅದೇ ರೀತಿ ವ್ಯಕ್ತಿಯೊಬ್ಬ ಕೆಲಸ ತುಂಬಾ ಬೋರಿಂಗ್ ಎಂದು ಹೇಳಿ ಮೊಕದ್ದಮೆ ಹೂಡಿದ್ದು, ಪರಿಹಾರ ಪಡೆದಿರುವ ಅಚ್ಚರಿಯ ಘಟನೆ ನಡೆದಿದೆ.

ಹೌದು, ಫ್ರೆಡೆರಿಕ್ ಡೆಸ್ನಾರ್ಡ್ ಎಂಬಾತ ನೀರಸ ಕೆಲಸಕ್ಕಾಗಿ ತನ್ನ ಉದ್ಯೋಗದಾತರ ಮೇಲೆ ಮೊಕದ್ದಮೆ ಹೂಡಿದ್ದಾನೆ. ಇದರಿಂದ 40,000 ಪೌಂಡ್ (ರೂ. 33 ಲಕ್ಷ) ಪರಿಹಾರ ಪಡೆದಿದ್ದಾನೆ. 2016 ರಲ್ಲಿ, ಫ್ರೆಡೆರಿಕ್ ಡೆಸ್ನಾರ್ಡ್ ಅವರು ವರ್ಷಕ್ಕೆ ಬರುತ್ತಿದ್ದ 90,000 ಡಾಲರ್ ಉದ್ಯೋಗದಿಂದ ಬೇಸತ್ತಿದ್ದ. ಹೀಗಾಗಿ ಸುಗಂಧ ದ್ರವ್ಯ ಮತ್ತು ಸೌಂದರ್ಯವರ್ಧಕಗಳ ಕಂಪನಿಯಾದ ಇಂಟರ್ಪರ್ಫ್ಯೂಮ್ಸ್ ವಿರುದ್ಧ ಮೊಕದ್ದಮೆ ಹೂಡಿದ್ದು, ಪರಿಹಾರವಾಗಿ ಡಾಲರ್ 400,000 ಕ್ಕಿಂತ ಹೆಚ್ಚಿನ ಮೊತ್ತ ಬೇಡಿಕೆಯಿಟ್ಟಿದ್ದ.

ಈ ಬಗ್ಗೆ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದ ಆತನಿಗೆ ನಾಲ್ಕು ವರ್ಷಗಳ ನಂತರ, ಪ್ರಕರಣವನ್ನು ಗೆದ್ದಿದ್ದಾನೆ. ಇಂಟರ್ಪಾರ್ಫಮ್ನಿಂದ 40,000 ಪೌಂಡ್ ನಷ್ಟವನ್ನು ಭರಿಸಲಾಯಿತು.

ಡೆಸ್ನಾರ್ಡ್ ಅವರು ಲೇಬರ್ ರಿಲೇಶನ್ಸ್ ಟ್ರಿಬ್ಯೂನಲ್‌ಗೆ ದೂರು ಸಲ್ಲಿಸಿದ ನಂತರ, ನ್ಯಾಯಾಲಯವು ಬೇಸರಗೊಂಡಿರುವುದು ಕಿರುಕುಳದ ಒಂದು ರೂಪ ಎಂದು ಹೇಳಿದೆ. ಜೊತೆಗೆ ಡೆಸ್ನಾರ್ಡ್ ಗೆ ಪರಿಹಾರ ಮೊತ್ತ ನೀಡಲು ಆದೇಶಿಸಿದೆ.

ಪ್ಯಾರಿಸ್ ಮೇಲ್ಮನವಿ ನ್ಯಾಯಾಲಯವು ನಿರ್ಧಾರವನ್ನು ಎತ್ತಿ ಹಿಡಿದಾಗಲೂ, ಡೆಸ್ನಾರ್ಡ್ ತನ್ನ ನಾಲ್ಕು ವರ್ಷಗಳ ಅವಧಿಯಲ್ಲಿ ಬೇಸರಗೊಂಡಿರುವ ಬಗ್ಗೆ ಏನನ್ನೂ ಪ್ರಸ್ತಾಪಿಸಲಿಲ್ಲ ಎಂದು ಇಂಟರ್‌ಪಾರ್‌ಫಮ್‌ ಪರ ವಕೀಲರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...