alex Certify ಈ ವರ್ಷ ಭಾರತ ತೊರೆದು ಹೋಗ್ತಿದ್ದಾರೆ ಸಾವಿರಾರು ಕೋಟ್ಯಾಧಿಪತಿಗಳು….! ಇದರ ಹಿಂದಿದೆ ‘ಶಾಕಿಂಗ್’ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವರ್ಷ ಭಾರತ ತೊರೆದು ಹೋಗ್ತಿದ್ದಾರೆ ಸಾವಿರಾರು ಕೋಟ್ಯಾಧಿಪತಿಗಳು….! ಇದರ ಹಿಂದಿದೆ ‘ಶಾಕಿಂಗ್’ ಕಾರಣ

ಈ ವರ್ಷ ಅಂದರೆ 2023 ಲ್ಲಿ ಸುಮಾರು 6,500 ಕೋಟ್ಯಾಧಿಪತಿಗಳು ಭಾರತವನ್ನು ತೊರೆಯುವ ನಿರೀಕ್ಷೆಯಿದೆ. ಸುಮಾರು 8 ಕೋಟಿ ರೂಪಾಯಿಗಿಂತಲೂ ಅಧಿಕ ಆಸ್ತಿ ಹೊಂದಿರುವವರ ಸಂಖ್ಯೆ ಅತಿ ಹೆಚ್ಚಿರೋದು ಚೀನಾದಲ್ಲಿ, ನಂತರದ ಸ್ಥಾನದಲ್ಲಿ ಭಾರತವಿದೆ. ಕಳೆದ ವರ್ಷ 2022 ರಲ್ಲಿ 7,500 ಮಿಲಿಯನೇರ್‌ಗಳು ಭಾರತವನ್ನು ತೊರೆದಿದ್ದರು.

ಶ್ರೀಮಂತರು ವಿದೇಶಕ್ಕೆ ಏಕೆ ಹೋಗುತ್ತಿದ್ದಾರೆ ?

ಭಾರತದ ತೆರಿಗೆ ಕಾನೂನುಗಳು, ಕಟ್ಟುನಿಟ್ಟಾದ ಹಣ ರವಾನೆ ನಿಯಮಗಳು ಮತ್ತು ಇತರ ಕಾರಣಗಳಿಂದಾಗಿ ಜನರು ದೇಶವನ್ನು ತೊರೆಯುತ್ತಿದ್ದಾರೆ. ಹವಾಮಾನ ಬದಲಾವಣೆ ಮತ್ತು ಕ್ರಿಪ್ಟೋ ಮೇಲಿನ ಸರ್ಕಾರಿ ನಿಯಮಗಳ ಹೊರತಾಗಿ ಇತರ ಕಾರಣಗಳೂ ಇರಬಹುದು. ಶ್ರೀಮಂತ ಕುಟುಂಬಗಳು ತುಂಬಾ ಕ್ರಿಯಾತ್ಮಕವಾಗಿವೆ, ಅವರ ನಿರ್ಗಮನವು ದೇಶದ ಆರ್ಥಿಕ ದೃಷ್ಟಿಕೋನ ಮತ್ತು ಭವಿಷ್ಯಕ್ಕೆ ಸಮಸ್ಯೆಯಾಗಬಹುದು ಅನ್ನೋದು ತಜ್ಞರ ಅಭಿಪ್ರಾಯ.

ಯಾವ ದೇಶಗಳಿಗೆ ಸಮಸ್ಯೆ ?

ಭಾರತ ಮಾತ್ರವಲ್ಲ ಚೀನಾ ಕೂಡ ಬೃಹತ್ ಪ್ರಮಾಣದ ಶ್ರೀಮಂತ ಜನರನ್ನು ಕಳೆದುಕೊಳ್ಳುತ್ತಲೇ ಇದೆ. ಇದರಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ಸಂಪತ್ತಿನ ಬೆಳವಣಿಗೆ ಕುಂಠಿತವಾಗಿದೆ. ಅಮೆರಿಕ, ಬ್ರಿಟನ್‌ ಮತ್ತು ಆಸ್ಟ್ರೇಲಿಯಾದಂತಹ ದೊಡ್ಡ ಮಾರುಕಟ್ಟೆಗಳಲ್ಲಿ ಚೀನಾದ ಹುವಾವೇ ಕಂಪನಿಯನ್ನು ನಿಷೇಧಿಸಲಾಗಿದೆ. ಇದೇ ರೀತಿ ಶ್ರೀಮಂತರ ವಲಸೆಯಿಂದ ಬ್ರಿಟನ್ ಮತ್ತು ರಷ್ಯಾ ಕೂಡ ನಷ್ಟ ಅನುಭವಿಸುತ್ತಿವೆ.

ಭಾರತವನ್ನು ತೊರೆಯುವ ಹೆಚ್ಚಿನ ಸಿರಿವಂತರು ದುಬೈ ಮತ್ತು ಸಿಂಗಾಪುರದಂತಹ ದೇಶಗಳಿಗೆ ಹೋಗಬಹುದು. ತೆರಿಗೆ ಕಾನೂನುಗಳು ಮತ್ತು ವ್ಯಾಪಾರದ ನಿಯಮಗಳು ಅಷ್ಟು ಕಠಿಣವಾಗಿಲ್ಲ. ಇತ್ತೀಚಿನವರೆಗೂ ಪೋರ್ಚುಗಲ್ ಭಾರತೀಯ ಶ್ರೀಮಂತರಿಗೆ ಜನಪ್ರಿಯ ತಾಣವಾಗಿತ್ತು. ಕರೋನಾಗೂ ಮೊದಲು  ಮಿಲಿಯನೇರ್‌ಗಳ ನೆಚ್ಚಿನ ದೇಶ ಅಮೆರಿಕವಾಗಿತ್ತು.

ಸಿಂಗಾಪುರ, ಸ್ವಿಡ್ಜರ್ಲೆಂಡ್‌ ಮತ್ತು ದುಬೈ ವಾಸಕ್ಕೆ ಯೋಗ್ಯವಾಗಿವೆ ಜೊತೆಗೆ ಸಂಪತ್ತನ್ನು ಸಂರಕ್ಷಿಸುವಲ್ಲಿಯೂ ಖ್ಯಾತಿಯನ್ನು ಗಳಿಸಿವೆ. ಈ ದೇಶಗಳು ಹೆಚ್ಚು ಆಕರ್ಷಕ ವ್ಯಾಪಾರ ಕೇಂದ್ರಗಳಾಗಿ ಮಾರ್ಪಟ್ಟಿವೆ. ದೇಶಾದ್ಯಂತ ಕಂಪನಿಗಳು ಅನುಕೂಲಕರ ಕಾರ್ಪೊರೇಟ್ ತೆರಿಗೆ ದರಗಳ ಲಾಭವನ್ನು ಪಡೆದುಕೊಳ್ಳುತ್ತವೆ. ವಿದೇಶಿ ನೇರ ಹೂಡಿಕೆ (FDI) ಮೂಲಕ ಪೌರತ್ವವನ್ನು ಅನುಮತಿಸುತ್ತವೆ.

ಇದರಿಂದ ಭಾರತಕ್ಕೆ ಹಾನಿಯಾಗುವುದೇ ?

ಈ ವಲಸೆಗಳಿಂದ ಭಾರತಕ್ಕೇನೂ ನಷ್ಟವಿಲ್ಲ. ಏಕೆಂದರೆ ಭಾರತವು ಹೆಚ್ಚು ಹೊಸ ಮಿಲಿಯನೇರ್‌ಗಳನ್ನು ಉತ್ಪಾದಿಸುತ್ತದೆ. ಭಾರತದಲ್ಲಿ ಸುಮಾರು 3,57,000 ಎಚ್‌ಎನ್‌ಐಗಳು ಉಳಿದಿದ್ದಾರೆ. 2015 ರಿಂದೀಚೆಗೆ 8,81,254 ಭಾರತೀಯರು ವಿವಿಧ ಕಾರಣಗಳಿಗಾಗಿ ದೇಶವನ್ನು ತೊರೆದಿದ್ದಾರೆ. ಅಂದರೆ ಕಳೆದ ವರ್ಷದಿಂದ ಪ್ರತಿದಿನ 345 ಮಂದಿ ದೇಶ ತೊರೆಯುತ್ತಿದ್ದಾರೆ.

ಬ್ರಿಟನ್‌, ರಷ್ಯಾ ಮತ್ತು ಬ್ರೆಜಿಲ್‌ನಂತಹ ದೇಶಗಳು ಕೂಡ ಶ್ರೀಮಂತರ ವಲಸೆಯನ್ನು ಎದುರಿಸುತ್ತಿವೆ. ಬ್ರಿಟನ್‌ನಲ್ಲಿ 3,200, ರಷ್ಯಾದಲ್ಲಿ 3,000 ಮತ್ತು ಬ್ರೆಜಿಲ್‌ನಲ್ಲಿ 1,200 ಶ್ರೀಮಂತರು ದೇಶವನ್ನು ತೊರೆಯುವ ನಿರೀಕ್ಷೆಯಿದೆ. ಕಳೆದ ವರ್ಷ 1,600 ಶ್ರೀಮಂತರು ಬ್ರಿಟನ್‌ನಿಂದ ಬೇರೆ ದೇಶಕ್ಕೆ ಹೋಗಿ ನೆಲೆಸಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...