alex Certify ಇ-ಸ್ಕೂಟರ್ ಬಿಡುಗಡೆಗೊಳಿಸಲಿದೆಯಾ ಮಹೀಂದ್ರಾ ? ಕುತೂಹಲ ಮೂಡಿಸಿದೆ ಈ ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇ-ಸ್ಕೂಟರ್ ಬಿಡುಗಡೆಗೊಳಿಸಲಿದೆಯಾ ಮಹೀಂದ್ರಾ ? ಕುತೂಹಲ ಮೂಡಿಸಿದೆ ಈ ಚಿತ್ರ

ನವದೆಹಲಿ: ಪ್ರವರ್ಧಮಾನಕ್ಕೆ ಬರುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನವು ಆಟೋಮೋಟಿವ್ ಪ್ರಪಂಚವನ್ನು ಆಕರ್ಷಿಸುತ್ತಿದೆ. ಇವುಗಳ ಸಾಲಿಗೆ ಇದೀಗ ಪಿಯುಗಿಯೋ ಕಿಸ್ಬೀ ಬ್ರ್ಯಾಂಡ್​ ಬಹಳ ಸದ್ದು ಮಾಡುತ್ತಿದೆ.

ಬೌನ್ಸ್ ಇನ್ಫಿನಿಟಿ ಇ1 ಮತ್ತು ಅಥರ್ 450 ಎಕ್ಸ್​ ಜೊತೆಗೆ ಈ ಬ್ರ್ಯಾಂಡ್​ ಗುರುತಿಸಲಾಗಿದ್ದು, ಶೀಘ್ರವೇ ಭಾರತದಲ್ಲಿ ಇದು ಹಂಗಾಮಾ ಸೃಷ್ಟಿಸಲಿದೆ ಎನ್ನಲಾಗಿದೆ. ಇದನ್ನು ಇಲ್ಲಿ ಪರಿಚಯಿಸಲು ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಅದ್ಹೇಗೆ ಅಂತೀರಾ ? ಮಹೀಂದ್ರಾ ಆ್ಯಂಡ್​ ಮಹೀಂದ್ರಾದ ಅಂಗಸಂಸ್ಥೆಯಾದ ಮಹೀಂದ್ರಾ ಟೂ ವೀಲರ್ಸ್ ಜನವರಿ 2015 ರಲ್ಲಿ ಪಿಯುಗಿಯೊ ಮೋಟಾರ್‌  ಸೈಕಲ್‌ನಲ್ಲಿ 51 ಪ್ರತಿಶತ ಈಕ್ವಿಟಿ ಪಾಲನ್ನು ಸ್ವಾಧೀನಪಡಿಸಿಕೊಂಡಿದೆ. 2019 ರಲ್ಲಿ, ಮಹೀಂದ್ರಾ ತನ್ನ ಮೊದಲ ಬ್ಯಾಚ್ ಇ-ಲುಡಿಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪಿಯುಗಿಯೊಗೆ ರವಾನಿಸಿದೆ. ಇದು ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದೆ.

ಈಗ ಮಹೀಂದ್ರಾ ಕಿಸ್ಬೀಯ ಎಲೆಕ್ಟ್ರಿಕ್ ಆವೃತ್ತಿಯನ್ನು ಮುಂಚೂಣಿಗೆ ತರಲು ಯೋಜನೆ ರೂಪಿಸಿದೆ. ಇದು ಮೂಲತಃ 50ಸಿಸಿ, ನಾಲ್ಕು-ಸ್ಟ್ರೋಕ್ ಸ್ಕೂಟರ್ ಆಗಿದ್ದು ಅದು 3.5 ಪಿಎಸ್​ ಮತ್ತು 3.2ಎನ್​ಎಂ ಅಭಿವೃದ್ಧಿಪಡಿಸುತ್ತದೆ. ಅದೇ ಚೌಕಟ್ಟಿನ ಆಧಾರದ ಮೇಲೆ ಕಿಸ್ಬಿಯ ಎಲೆಕ್ಟ್ರಿಕ್ ಆವೃತ್ತಿಯು ಬೌನ್ಸ್ ಇನ್ಫಿನಿಟಿ ಇ-1 ಗೆ ವಿರುದ್ಧವಾಗಿ ಅದೇ ರೀತಿಯ ಕಾರ್ಯಕ್ಷಮತೆಯನ್ನು ಹೊಂದಿರುವಂತೆ ತೋರುತ್ತಿದೆ.

ಮಹೀಂದ್ರಾ ಭಾರತದಲ್ಲಿ ಪಿಯುಗಿಯೊ ಬ್ರ್ಯಾಂಡ್ ಅನ್ನು ತಂದರೆ, ಈ ಇ-ಸ್ಕೂಟರ್ ಪ್ರೀಮಿಯಂ ಕೊಡುಗೆಯಾಗಿದೆ ಎಂದು ನಿರೀಕ್ಷಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...