alex Certify ಇದು ಭಾರತದ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್, ದಂಗಾಗಿಸುವಂತಿದೆ ಡಿಸೈನ್‌ ಹಾಗೂ ಫೀಚರ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ಭಾರತದ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್, ದಂಗಾಗಿಸುವಂತಿದೆ ಡಿಸೈನ್‌ ಹಾಗೂ ಫೀಚರ್‌…!  

ಅತ್ಯಂತ ದುಬಾರಿ ಎಲೆಕ್ಟ್ರಿಕ್‌ ಸ್ಕೂಟರ್‌ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. BMW Motorrad ಇಂಡಿಯಾ ಇತ್ತೀಚೆಗೆ S 1000 RR ಬೈಕ್‌ ಅನ್ನು ಅನ್ನು ಲಾಂಚ್‌ ಮಾಡಿದೆ. ಈ ಬೈಕ್‌ನ ಆರಂಭಿಕ ಬೆಲೆ 20.25 ಲಕ್ಷ ರೂಪಾಯಿ.

ಈ ಮೋಟಾರ್‌ ಸೈಕಲ್‌ ಬಿಡುಗಡೆ ಸಂದರ್ಭದಲ್ಲೇ ಬಿಎಂಡಬ್ಲ್ಯೂ CE 04 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸಹ ಪ್ರದರ್ಶಿಸಿದೆ. BMW Motorrad ಇಂಡಿಯಾ ಈ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಆದರೆ ಬಿಡುಗಡೆ ದಿನಾಂಕವನ್ನು ಕಂಪನಿ ಇನ್ನೂ ಘೋಷಿಸಿಲ್ಲ.

ಇದು ಬಿಎಂಡಬ್ಲ್ಯು ಮೊಟೊರಾಡ್ ಇಂಡಿಯಾದ ಮೊದಲ ಸಂಪೂರ್ಣ ವಿದ್ಯುತ್ ಚಾಲಿತ ಸ್ಕೂಟರ್‌. ಇದು ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್ ಎನಿಸಿಕೊಳ್ಳಬಹುದು. ಯಾಕಂದ್ರೆ ಮೂಲಗಳ ಪ್ರಕಾರ ಈ ಸ್ಕೂಟರ್‌ನ ಬೆಲೆ ಅಂದಾಜು 20 ಲಕ್ಷ ರೂಪಾಯಿ ಇರಲಿದೆ.

BMW ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್ (BMW CE-04) 8.9kwh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಇದು ಒಂದು ಸಂಪೂರ್ಣ ಚಾರ್ಜ್‌ನಲ್ಲಿ 129 ಕಿಲೋಮೀಟರ್‌ಗಳವರೆಗೆ ವ್ಯಾಪ್ತಿಯನ್ನು ನೀಡುತ್ತದೆ. 2.3 kW ಚಾರ್ಜರ್‌ನೊಂದಿಗೆ ಸುಮಾರು ನಾಲ್ಕೂವರೆ ಗಂಟೆಗಳಲ್ಲಿ ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ CE-04 ವಿಭಿನ್ನವಾಗಿದೆ. ಇದರ ವಿನ್ಯಾಸವು ಸಾಕಷ್ಟು ವಿಭಿನ್ನವಾಗಿದೆ. ಸ್ಕೂಟರ್ ಮುಂಭಾಗ ವಿಶಿಷ್ಟವಾಗಿದೆ. ದೊಡ್ಡ ಎಲ್ಇಡಿ ಹೆಡ್‌ ಲ್ಯಾಂಪ್‌ ಅಳವಡಿಸಲಾಗಿದೆ. ಸ್ಕೂಟರ್‌ಗೆ ಸಿಂಗಲ್ ಪೀಸ್ ಸೀಟ್‌ ಇದೆ, ಇದು ಸಾಕಷ್ಟು ಉದ್ದವಾಗಿದೆ.

ಸ್ಕೂಟರ್‌ನಲ್ಲಿ ನೀವು ಆರಾಮಾಗಿ ಕುಳಿತು ಪ್ರಯಾಣಿಸುವಂತೆ ಡಿಸೈನ್‌ ಮಾಡಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಇನ್ನೊಂದು ವಿಶೇಷತೆಯೆಂದರೆ 10.25 ಇಂಚಿನ TFT ಡಿಸ್‌ಪ್ಲೇ. ಇದು ಬ್ಲೂಟೂತ್ ಕನೆಕ್ಟಿವಿಟಿ, ಟ್ರಾಕ್ಷನ್ ಕಂಟ್ರೋಲ್, ಮಲ್ಟಿಪಲ್ ರೈಡಿಂಗ್ ಮೋಡ್‌ಗಳಂತಹ ಫೀಚರ್‌ಗಳನ್ನೂ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...