alex Certify ಇದು ಕೇರಳದ ತಾಯಿ-ಮಗನ ಯಶೋಗಾಥೆ: ಅಣಬೆ ಕೃಷಿಯಿಂದಲೇ ಗಳಿಸುತ್ತಾರೆ ದಿನಕ್ಕೆ 40,000 ರೂಪಾಯಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ಕೇರಳದ ತಾಯಿ-ಮಗನ ಯಶೋಗಾಥೆ: ಅಣಬೆ ಕೃಷಿಯಿಂದಲೇ ಗಳಿಸುತ್ತಾರೆ ದಿನಕ್ಕೆ 40,000 ರೂಪಾಯಿ..!

ಇಂದು ಬಹುತೇಕ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದರೆ, ಪ್ರಗತಿಪರ ಕೃಷಿಕರು ಸಾಫ್ಟ್ ವೇರ್ ಇಂಜಿನಿಯರ್ ಗಳಿಗಿಂತ ಜಾಸ್ತಿ ಹಣ ಗಳಿಸುವವರಿದ್ದಾರೆ. ಇದಕ್ಕೆ ಪರಿಪೂರ್ಣ ಉದಾಹರಣೆ ಎಂಬಂತಿದ್ದಾರೆ ಕೇರಳದ ಈ ತಾಯಿ ಹಾಗೂ ಮಗ.

ಹೌದು, ತಾಯಿ-ಮಗ ಅಣಬೆ ಕೃಷಿಯಿಂದಲೇ ದಿನಕ್ಕೆ 40,000 ರೂಪಾಯಿ ಗಳಿಸುತ್ತಾರೆ. ಹವ್ಯಾಸವಾಗಿ ಪ್ರಾರಂಭಿಸಲಾದ ಅಣಬೆ ಕೃಷಿಯು ನಂತರ ವ್ಯಾಪಾರವಾಗಿ ಬದಲಾಯಿತು. 31 ವರ್ಷದ ಜಿತು ಥಾಮಸ್ ಮತ್ತು ಅವರ ತಾಯಿ ಲೀನಾ ಥಾಮಸ್ ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ಅಣಬೆ ಫಾರ್ಮ್ ಅನ್ನು ನಡೆಸುತ್ತಿದ್ದಾರೆ. ಹಾಗೂ ಇತರ ರೈತರಿಗೆ ತರಬೇತಿಯನ್ನು ಸಹ ನೀಡುತ್ತಿದ್ದಾರೆ.

ಜಿತು ಅಣಬೆ ಕೃಷಿಯ ಬಗ್ಗೆ ಆಸಕ್ತಿ ಹೊಂದಿದ್ದರು. ಆತನ ತಾಯಿ ಜಿತುವಿನ ಆಸಕ್ತಿಯನ್ನು ಗುರುತಿಸಿದ್ದಾರೆ. ಅಣಬೆ ಬೇಸಾಯವನ್ನು ಸಂಶೋಧನೆ ಮಾಡುತ್ತಲೇ ಅದನ್ನು ಸೈಡ್ ಬಿಜಿನೆಸ್ ಆಗಿ ಮಾಡತೊಡಗಿದ್ರು.

ಜಿತು ಅವರು ಭೌತಶಾಸ್ತ್ರದಲ್ಲಿ ಪದವಿ ಮತ್ತು ಎಂಎಸ್ ಡಬ್ಲ್ಯೂ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಕೋರ್ಸ್ ಮುಗಿದ ನಂತರ ಎನ್ ಜಿಒನಲ್ಲಿ ದುಡಿದಿದ್ದಾರೆ. ಆದರೆ, ಶೀಘ್ರದಲ್ಲೇ ಅವರು ಅಣಬೆ ಕೃಷಿಯಲ್ಲಿನ ಸಾಮರ್ಥ್ಯ ಮತ್ತು ಮಾರುಕಟ್ಟೆಯಲ್ಲಿ ಅದಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಗುರುತಿಸಿದ್ರು. ಹೀಗಾಗಿ ಪೂರ್ಣ ಸಮಯ ಕೃಷಿಯನ್ನು ಮಾಡಲು ನಿರ್ಧರಿಸಿದ್ರು.

ಕೇರಳದ ಎರ್ನಾಕುಲಂ ಜಿಲ್ಲೆಯಿಂದ ಬಂದಿರುವ ಜಿತು, ಕೃಷಿ ವಿಜ್ಞಾನ ಕೇಂದ್ರವು ನಡೆಸಿದ ಅಣಬೆ ಕೃಷಿಯ ಕುರಿತ ಕಾರ್ಯಾಗಾರಕ್ಕೆ ಹಾಜರಾಗಿದ್ದರು. ಅಲ್ಲದೆ ಅವರು ಆನ್‌ಲೈನ್ ಸಂಶೋಧನೆಯನ್ನು ಅವಲಂಬಿಸಿದ್ದಾರೆ. ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು, ಜಿತು ಮತ್ತು ಅವರ ತಾಯಿ ಲೀನಾ ಅವರ ಅಣಬೆ ಫಾರ್ಮ್ ಅನ್ನು ಸಂಯೋಜಿಸಿದ ನಾಲ್ಕು ವರ್ಷಗಳಲ್ಲಿ ಯಶಸ್ಸನ್ನು ಕಂಡಿದ್ದಾರೆ.

ಈಗ, ಇವರಿಬ್ಬರು 5,000 ಚದರ ಅಡಿ ವಿಸ್ತೀರ್ಣದ ಮಶ್ರೂಮ್ ಫಾರ್ಮ್ ಜೊತೆಗೆ ಪಿರವಂನಲ್ಲಿರುವ ತಮ್ಮ ಮನೆಯ ಸಮೀಪ ಲ್ಯಾಬ್ ಪ್ರದೇಶವನ್ನು ನಡೆಸುತ್ತಿದ್ದಾರೆ. ಅವರು ಪ್ರತಿದಿನ ಸುಮಾರು 80 ರಿಂದ 100 ಕೆ.ಜಿ. ಅಣಬೆಯನ್ನು ಉತ್ಪಾದಿಸುತ್ತಾರೆ. ಪ್ರತಿದಿನಕ್ಕೆ 35,000 ರಿಂದ 40,000 ರೂ. ಹಣ ಗಳಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...