alex Certify ಆರೋಗ್ಯಕ್ಕೆ ಉತ್ತಮವಾದ ಟೇಸ್ಟಿ ಪಾಲಕ್ ಪರೋಟಾ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೆ ಉತ್ತಮವಾದ ಟೇಸ್ಟಿ ಪಾಲಕ್ ಪರೋಟಾ ಮಾಡುವ ವಿಧಾನ

ಪರೋಟಾ ಬೆಳಗಿನ ತಿಂಡಿಗೆ ಹೇಳಿ ಮಾಡಿಸಿದಂತಹ ರೆಸಿಪಿ. ಅದರಲ್ಲೂ ಪಾಲಕ್ ಸೊಪ್ಪಿನ ಪರೋಟಾ ಜೊತೆಗೆ ಉಪ್ಪಿನಕಾಯಿ, ಮೊಸರು ಇದ್ರೆ ಎಲ್ಲರ ಬಾಯಲ್ಲೂ ನೀರೂರುತ್ತೆ.

ಪಾಲಕ್ ಸೊಪ್ಪಿನ ಪರೋಟಾ ಆರೋಗ್ಯಕ್ಕೂ ಉತ್ತಮ, ಸಖತ್ ಟೇಸ್ಟಿಯೂ ಹೌದು. ಇದನ್ನು ಮಾಡೋದು ಕೂಡ ಸುಲಭ. ಅತ್ಯಂತ ಸಿಂಪಲ್ ರೆಸಿಪಿ ಇದು.

ಬೇಕಾಗುವ ಸಾಮಗ್ರಿ: ಒಂದು ಕಟ್ಟು ಪಾಲಕ್ ಸೊಪ್ಪು, 3 ಕಪ್ ನೀರು, ಒಂದು ಇಂಚಿನಷ್ಟು ಉದ್ದದ ಶುಂಠಿ, ಒಂದು ಹಸಿಮೆಣಸಿನಕಾಯಿ. ಹಿಟ್ಟು ತಯಾರಿಸಲು 2 ಕಪ್ ಗೋಧಿ ಹಿಟ್ಟು, ಅರ್ಧ ಚಮಚ ಅಜ್ವೈನ್, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಎಣ್ಣೆ, ಅಗತ್ಯವಿದ್ದಷ್ಟು ನೀರು. ಪರೋಟಾ ಲಟ್ಟಿಸಲು ಅರ್ಧ ಕಪ್ ಗೋಧಿ ಹಿಟ್ಟು, ತುಪ್ಪ.

ಮಾಡುವ ವಿಧಾನ: ಕುದಿಯುವ ನೀರಿಗೆ ಪಾಲಕ್ ಸೊಪ್ಪು ಹಾಕಿ ಒಂದು ನಿಮಿಷ ಬೇಯಿಸಿ. ನಂತರ ಸೊಪ್ಪನ್ನು ಸೋಸಿಕೊಂಡು ಅದಕ್ಕೆ ಶುಂಠಿ, ಹಸಿಮೆಣಸಿನಕಾಯಿ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಗೋಧಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ, ನೀರು ಹಾಕಿ ಕಲೆಸಿಕೊಂಡು ಮೃದುವಾದ ಹಿಟ್ಟನ್ನು ತಯಾರಿಸಿ.

ರೆಡಿಯಾದ ಹಿಟ್ಟಿಗೆ ಮೇಲಿಂದ ಸ್ವಲ್ಪ ಎಣ್ಣೆ ಸವರಿ ಒದ್ದೆ ಬಟ್ಟೆಯನ್ನು ಮುಚ್ಚಿ ಅರ್ಧ ಗಂಟೆ ಹಾಗೇ ಬಿಡಿ. ನಂತರ ಅದನ್ನು ಉಂಡೆಗಳನ್ನಾಗಿ ಮಾಡಿಕೊಳ್ಳಿ. ಚಪಾತಿ ಮಣೆಯ ಮೇಲೆ ಸ್ವಲ್ಪ ಹುಡಿ ಹಿಟ್ಟನ್ನು ಹಾಕಿಕೊಂಡು ತೆಳುವಾಗಿ ಲಟ್ಟಿಸಿ. ಕಾದ ತವಾದ ಮೇಲೆ ಹಾಕಿ ರೋಸ್ಟ್ ಮಾಡಿ. ತುಪ್ಪ ಹಾಕಿ ಹೊಂಬಣ್ಣಕ್ಕೆ ಬರುವವರೆಗೂ ಬೇಯಿಸಿದರೆ ಪಾಲಕ್ ಸೊಪ್ಪಿನ ಪರೋಟಾ ರೆಡಿ. ಮೊಸರು ಹಾಗೂ ಉಪ್ಪಿನಕಾಯಿ ಜೊತೆ ಬಿಸಿಬಿಸಿಯಾಗಿ ತಿನ್ನಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...