alex Certify ಅವಿಶ್ವಾಸ ಮಂಡನೆಯಲ್ಲಿ ಹಾಜರಿರಲಿದ್ದಾರೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಿಶ್ವಾಸ ಮಂಡನೆಯಲ್ಲಿ ಹಾಜರಿರಲಿದ್ದಾರೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್

ಇಂದು ತಮ್ಮ ಸರ್ಕಾರದ​ ವಿರುದ್ಧದ ಅವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​​ ಹಾಗೂ ಪಾಕಿಸ್ತಾನ್​ ತೆಹ್ರೀಕ್​ ಇ ಇನ್ಸಾಫ್​ ಪಕ್ಷದ ಎಲ್ಲಾ ರಾಷ್ಟ್ರೀಯ ಅಸೆಂಬ್ಲಿ ಸದಸ್ಯರು ಉಪಸ್ಥಿತರಿರಲಿದ್ದಾರೆ.

ಪ್ರಧಾನಿ ವಿರುದ್ಧದ ಅವಿಶ್ವಾಸ ಮಂಡನೆಯನ್ನು ಸೋಲಿಸಲು ಸರ್ಕಾರವು ಆಶಾವಾದವನ್ನು ಹೊಂದಿದೆ. ಹೀಗಾಗಿ ಇಂದು ನಡೆಯಲಿರುವ ರಾಷ್ಟ್ರೀಯ ಅಸೆಂಬ್ಲಿ ಪ್ರಕ್ರಿಯೆಗೆ ಹಾಜರಾಗುವಂತೆ ಪಕ್ಷದ ಶಾಸಕರಿಗೆ ಸೂಚನೆ ನೀಡಿದೆ.

ಪ್ರಧಾನಿ ಇಮ್ರಾನ್​ ಖಾನ್​ ನಿರ್ದೇಶನದ ಬಳಿಕ ಸೆನೆಟರ್​ ಫೈಸಲ್​ ಜಾವೇದ್ ಖಾನ್​​ ಅವಿಶ್ವಾಸ ನಿರ್ಣಯದ ಪಿತೂರಿಯಿಂದ ದೂರವಿರುವಂತೆ ಪಕ್ಷದ ಶಾಸಕರನ್ನು ಕೇಳಿದ್ದರು. ಮತದಾನದ ದಿನದಂದು ಪಕ್ಷದ ಅಧ್ಯಕ್ಷರ ಸೂಚನೆಗಳನ್ನು ಉಲ್ಲಂಘಿಸಿದರೆ 63(ಎ) ವಿಧಿ ಹೇರಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.

ಇಮ್ರಾನ್​ ಖಾನ್​​ ಅವಿಶ್ವಾಸ ಮತದಲ್ಲಿ ಬಹುಮತವನ್ನು ಕಳೆದುಕೊಳ್ಳುವ ಮೊದಲ ಪಾಕ್​ ಪ್ರಧಾನಿ ಎನಿಸಿಕೊಳ್ಳುವ ಸಂಭವವಿದೆ. ಇಮ್ರಾನ್​ ಖಾನ್​ಗೆ 172 ಎಂಎನ್​ಎ ಬೆಂಬಲದ ಅವಶ್ಯಕತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...