alex Certify ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಮೊಬೈಲ್‌ ಕೊಡಬೇಕು…..? ಉದ್ಯಮಿ ಬಿಲ್‌ ಗೇಟ್ಸ್‌ ನೀಡಿದ್ದಾರೆ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಮೊಬೈಲ್‌ ಕೊಡಬೇಕು…..? ಉದ್ಯಮಿ ಬಿಲ್‌ ಗೇಟ್ಸ್‌ ನೀಡಿದ್ದಾರೆ ಸಲಹೆ

ಮಾಜಿ ಮೈಕ್ರೋಸಾಫ್ಟ್ ಸಿಇಒ ಬಿಲ್ ಗೇಟ್ಸ್ ತಂತ್ರಜ್ಞಾನದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಬಹಳ ಹತ್ತಿರದಿಂದ ಅರ್ಥಮಾಡಿಕೊಂಡಿರುವ ಕೆಲವೇ ಜನರಲ್ಲಿ ಒಬ್ಬರು. ಈ ಕಾರಣದಿಂದಲೇ ಅದರ ದುಷ್ಪರಿಣಾಮಗಳನ್ನು ತಪ್ಪಿಸಲು ಅವರು ತಮ್ಮ ಮೂವರು ಮಕ್ಕಳಿಗೆ 14 ವರ್ಷ ವಯಸ್ಸಿನವರೆಗೆ ಯಾವುದೇ ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ನೀಡಿಲ್ಲ.

ಆದರೆ ಇಂದಿನ ಕಾಲದಲ್ಲಿ ಸಾಮಾನ್ಯ ಕುಟುಂಬದಲ್ಲಿ ಮಕ್ಕಳಿಗೆ ಇಂತಹ ಕಟ್ಟುನಿಟ್ಟಿನ ನಿಯಮಳಿರುವುದಿಲ್ಲ. ತಮ್ಮ ಮಕ್ಕಳನ್ನು ಬ್ಯುಸಿಯಾಗಿಡಲು ಪೋಷಕರೇ ಅವರನ್ನು ಸ್ಮಾರ್ಟ್‌ಫೋನ್‌ಗಳ ಬಲೆಗೆ ತಳ್ಳುತ್ತಾರೆ. ಫೋನ್ ಮಗುವಿನ ಮೆದುಳು ಮತ್ತು ದೈಹಿಕ ಆರೋಗ್ಯಕ್ಕೆ ಹೇಗೆ ಹಾನಿ ಮಾಡುತ್ತದೆ ಎಂಬುದರ ಅರಿವು ಪೋಷಕರಿಗೆ ಇರುವುದಿಲ್ಲ.

 ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಫೋನ್ ನೀಡಬೇಕು?

ಮಕ್ಕಳಿಗೆ ಸ್ಮಾರ್ಟ್‌ಫೋನ್ ನೀಡಲು ನೀವು ಎಷ್ಟು ಸಮಯ ಕಾಯುತ್ತೀರೋ ಅಷ್ಟು ಒಳ್ಳೆಯದು. ಕೆಲವು ತಜ್ಞರ ಪ್ರಕಾರ ಮಕ್ಕಳಿಗೆ ಮೊಬೈಲ್ ಫೋನ್ ನೀಡಲು 12 ರಿಂದ 14 ಸೂಕ್ತ ವಯಸ್ಸು ಎಂದು ಪರಿಗಣಿಸಲಾಗಿದೆ. ಆದಾಗ್ಯೂ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡುವುದು ವ್ಯಸನಕಾರಿ ಆನ್‌ಲೈನ್ ಬೆದರಿಸುವಿಕೆ, ಗೇಮಿಂಗ್‌  ಅಥವಾ ಸೆಕ್ಸ್‌ಟಿಂಗ್‌ನಂತಹ ಸಮಸ್ಯೆಗಳಿಗೆ ಅವರು ತುತ್ತಾಗಬಹುದು. ಓದಿನ ಬಗ್ಗೆ ಆಸಕ್ತಿ ಕಳೆದುಕೊಳ್ಳಬಹುದು.

ಬಿಲ್ ಗೇಟ್ಸ್ ಮಕ್ಕಳಿಗಾಗಿ ಮಾಡಿದ್ದಾರೆ ಈ ನಿಯಮ!

ಉದ್ಯಮಿ ಬಿಲ್ ಗೇಟ್ಸ್‌ಗೆ ಮೂವರು ಮಕ್ಕಳಿದ್ದಾರೆ. ಮೂವರ ವಯಸ್ಸು ಕ್ರಮವಾಗಿ 20, 17 ಮತ್ತು 14 ವರ್ಷಗಳು. ಅವರ ಬಳಿ ಐಫೋನ್ ಇಲ್ಲ. ಬಿಲ್ ಗೇಟ್ಸ್ ಅವರು ತಮ್ಮ ಮಕ್ಕಳಿಗೆ 14 ವರ್ಷಕ್ಕಿಂತ ಮೊದಲು ಫೋನ್ ಬಳಸಲು ಅನುಮತಿಸಿಲ್ಲವಂತೆ. ಬಿಲ್ ಗೇಟ್ಸ್ ಮನೆಯಲ್ಲಿ ಫೋನ್ ಬಳಕೆ ಬಗ್ಗೆ ಕೆಲವು ನಿಯಮಗಳನ್ನು ಮಾಡಲಾಗಿದೆ. ಮಕ್ಕಳ ಸ್ಕ್ರೀನ್‌ ಟೈಂ ಕೂಡ ಇದರಲ್ಲಿ ಸೇರಿದೆ. ಅಷ್ಟೇ ಅಲ್ಲ ಊಟದ ಸಮಯದಲ್ಲಿ ಫೋನ್‌ ಆಫ್‌ ಆಗಿರಬೇಕು.

ಮಕ್ಕಳನ್ನು ಫೋನ್‌ಗಳಿಂದ ದೂರವಿಡುವುದು ಏಕೆ ಮುಖ್ಯ?

ಮೊಬೈಲ್‌ನಿಂದ ಹೊರಸೂಸುವ ನೀಲಿ ಬೆಳಕು ಮಕ್ಕಳ ಕಣ್ಣು ಮತ್ತು ಮೆದುಳು ಎರಡಕ್ಕೂ ಹಾನಿ ಮಾಡುತ್ತದೆ. ಇದರಿಂದಾಗಿ ಮಾನಸಿಕ ಆರೋಗ್ಯ ಸಮಸ್ಯೆಗಳು, ನಿದ್ರೆಯಲ್ಲಿ ತೊಂದರೆ ಮತ್ತು ಗಡ್ಡೆಗಳ ಅಪಾಯವಿದೆ. ಚಿಕ್ಕಂದಿನಿಂದಲೂ ಫೋನ್ ಬಳಸುವ ಮಕ್ಕಳ ಕಲಿಕಾ ಸಾಮರ್ಥ್ಯ ತೀರಾ ಕಡಿಮೆ ಇರುವುದು ಹಲವು ಅಧ್ಯಯನಗಳಲ್ಲಿ ಕಂಡು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...