alex Certify ಅದೃಷ್ಟ ಅಂದ್ರೆ ಇದಪ್ಪಾ….! ಲಾಟರಿಯಲ್ಲಿ ಕೋಟಿ ರೂ. ಗೆದ್ದ ಬಾಣಸಿಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದೃಷ್ಟ ಅಂದ್ರೆ ಇದಪ್ಪಾ….! ಲಾಟರಿಯಲ್ಲಿ ಕೋಟಿ ರೂ. ಗೆದ್ದ ಬಾಣಸಿಗ

ಅಬುಧಾಬಿಯಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿರುವ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ ನಡೆದ ರಾಫೆಲ್​ ಡ್ರಾದಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಜಾಕ್​ಪಾಟ್​ ಹೊಡೆದಿದೆ.

ಕಳೆದ 24 ವರ್ಷಗಳಿಂದ ಲಾಟರಿ ಟಿಕೆಟ್​ಗಳನ್ನು ಖರೀದಿಸುತ್ತಿರುವ ಸೈದಾಲಿ ಕಣ್ಣನ್​ 1998ರಲ್ಲಿ ಮೊದಲ ಬಾರಿಗೆ ನಗದು ಬಹುಮಾನವನ್ನು ಗೆದ್ದಿದ್ದರು. ಇದಾದ ಬಳಿಕ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾದ ಕಣ್ಣನ್​ ಕೊನೆಗೂ 2022ರಲ್ಲಿ ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಣ್ಣನ್​ ಟಿಕೆಟ್​ ಖರೀದಿಸಲು ಸಹಾಯ ಮಾಡಿದ ಸ್ನೇಹಿತರ ಗುಂಪಿನೊಂದಿಗೆ ಈ ಬಹುಮಾನದ ಮೊತ್ತವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ. ಕಣ್ಣನ್​ ಫೆಬ್ರವರಿ 22ರಂದು ಈ ವಿಜೇತ ಲಾಟರಿ ಟಿಕೆಟ್​ನ್ನು ಖರೀದಿಸಿದ್ದರು.

ಕಣ್ಣನ್​ರ ಮತ್ತೊಬ್ಬ ಸ್ನೇಹಿತ ಕೂಡ ಕಣ್ಣನ್​ ಜೊತೆಯಲ್ಲಿ ದಶಕಗಳಿಂದ ಟಿಕೆಟ್ ಖರೀದಿಸುತ್ತಿದ್ದು ಇದೀಗ ಕಣ್ಣನ್​ ಇವರಿಗೂ ಕೂಡ ಹಣದಲ್ಲಿ ಪಾಲು ನೀಡಲಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಕಣ್ಣನ್​ ಸ್ನೇಹಿತ ಮಜೀದ್​, ನಾನು ಕೂಡ ಕಳೆದ 20 ವರ್ಷಗಳಿಂದ ಸೈದಾಲಿ ಜೊತೆಯಲ್ಲಿ ಟಿಕೆಟ್​ ಖರೀದಿಸುತ್ತಿದ್ದೇನೆ, ಸೈದಾಲಿ ನಿಜಕ್ಕೂ ಅದೃಷ್ಟವಂತ. ಆತನ ಕಾಯುವಿಕೆಗೆ ಕೊನೆಗೂ ಫಲ ಸಿಕ್ಕಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...