alex Certify ʼರೋಗ ನಿರೋಧಕʼ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರೋಗ ನಿರೋಧಕʼ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ

ಈ ದಿನಗಳಲ್ಲಿ ಹವಾಮಾನ ಬದಲಾಗುತ್ತಿದೆ. ಋತುಗಳ ಬದಲಾವಣೆಯೊಂದಿಗೆ ಕೆಮ್ಮು ಮತ್ತು ಗಂಟಲು ನೋವು ಸೇರಿದಂತೆ ಸಣ್ಣ ರೋಗಗಳು ಕಾಡುತ್ತವೆ. ಇದಕ್ಕೆ ಮನೆಯಲ್ಲಿಯೇ ಮದ್ದಿದೆ.

ಒಣ ಕೆಮ್ಮು ಮತ್ತು ಗಂಟಲು ನೋವಿಗೆ ತಾಜಾ ಪುದೀನ ಎಲೆಗಳು ಪ್ರಯೋಜನಕಾರಿ. ಪುದೀನಾ ಎಲೆ ಮತ್ತು ಕಪ್ಪು ಜೀರಿಗೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ದಿನಕ್ಕೆ ಒಮ್ಮೆ ಅದ್ರ ಉಗಿ ತೆಗೆದುಕೊಳ್ಳುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ.

BIG NEWS: ಖ್ಯಾತ ನಟಿಯ ಸಹೋದರನ ಹತ್ಯೆಗೆ ಭೂಗತ ಲೋಕದ ಸಂಚು; ರಕ್ಷಣೆಗಾಗಿ ಗೃಹ ಸಚಿವರಿಗೆ ಮನವಿ

ಇದಲ್ಲದೆ ಲವಂಗ ಪುಡಿಯನ್ನು ಸಕ್ಕರೆ-ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಎರಡು ಮೂರು ಬಾರಿ ಸೇವಿಸುವುದರಿಂದ ಈ ಸಮಸ್ಯೆ ಕಡಿಮೆಯಾಗುತ್ತದೆ.

ಇದಲ್ಲದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅರಿಶಿನ, ಕೊತ್ತಂಬರಿ, ಜೀರಿಗೆ ಮತ್ತು ಬೆಳ್ಳುಳ್ಳಿಯನ್ನು ಆಹಾರದಲ್ಲಿ ಬಳಸಬೇಕು. ಹಾಲಿಗೆ ಅರಿಶಿನವನ್ನು ಬೆರೆಸಿ ಕುಡಿಯಿರಿ. ಬಿಸಿ ನೀರು, ಗಿಡಮೂಲಿಕೆ ಚಹಾ, ಕಷಾಯವನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರ ಜೊತೆಗೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮವನ್ನೂ ಮಾಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...